ಬೀದರ್, ಜೂ.೧೫- ನಗರದ ಶಾಹಗಂಜದ ಹೆಳವಗಲ್ಲಿಯಲ್ಲಿರುವ ಶ್ರೀ ವಿವೇಕ ಗಣೇಶ ದೇವಸ್ಥಾನದ ನೂತನ ಕಟ್ಟಡ ಹಾಗೂ ಶ್ರೀ ಗಣೇಶ, ಈಶ್ವರ ಮತ್ತು ನಾಗರಾಜ ದೇವರ ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಸೋಮವಾರ ಜರುಗಿದ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿಭಾವ ಮೆರೆದರು.
ಹಳೆಯ ಸರ್ವಿಸ್ ಸ್ಟ್ಯಾಂಡ್‌ನ ದೇವಿ ಮಂದಿರದಿAದ ಆರಂಭವಾದ ಮೆರವಣಿಗೆಯಲ್ಲಿ ೧೦೮ ಕುಂಭ ಕಳಸಗಳನ್ನು ಹೊತ್ತ ಮಹಿಳೆಯರು, ವಿವಿಧ ಭಜನಾ ಮಂಡಳಿಗಳು ಹಾಗೂ ಭಕ್ತರು ಭಾಗವಹಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಮಾರ್ಗವಾಗಿ ದೇವಸ್ಥಾನಕ್ಕೆ ತಲುಪಿತು.
ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ಅವರು ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ದೇವಾಲಯಗಳು ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಪ್ರತೀಕಗಳಾಗಿದ್ದು, ಯುವ ಪೀಳಿಗೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ದೇವಸ್ಥಾನದಲ್ಲಿ ಗಣಪತಿ ಪೂಜೆ, ಪುಣ್ಯವಾಚನ, ಹವನ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಮಧ್ಯಾಹ್ನ ನಡೆದ ಮಹಾಪ್ರಸಾದದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಜೂನ್ ೧೬ ಮತ್ತು ೧೭ರಂದು ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಸಕಲ ದೇವತಾ ಪೂಜೆ, ಹೋಮ-ಹವನ, ಮಹಾಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಜೂನ್ ೧೭ರಂದು ಶ್ರೀ ಗಣೇಶ, ಈಶ್ವರ ಹಾಗೂ ನಾಗದೇವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ವಿಜೃಂಭಣೆಯಿAದ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸೂರ್ಯಕಾಂತ ನಾಗಮಾರ್ಪಳ್ಳಿ, ಬಾಬು ಜಗನ್ನಾಥ್, ಮೇಘರಾಜ್, ಸಂಜುಕುಮಾರ್, ದೇವಿದಾಸ್ ಅಂದಕೂಳ್, ಅಂಬದಾಸ್ ಕೋಡಾದೆ, ನವೀನ್, ಅಶೋಕ್, ರಮೇಶ್ ಅಂದಕೂಳ್, ಕಿರಣ್, ರಾಜಕುಮಾರ್ ಜಗನಾಥ, ಕಿರಣ ಜಗನ್ನಾಥ್, ಅಂಬದಾಸ್ ಅಂದಕೂಳ್, ಮಂಜುನಾಥ್, ಪರಶುರಾಮ್ ಹಾಗೂ ರೋಶನ್ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ದೇವಸ್ಥಾನ ಸಮಿತಿಯ ಸದಸ್ಯರು, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಗಣ್ಯರು, ಸಾರ್ವಜನಿಕರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು