ಕಲಬುರ್ಗಿ, ಜು.೧೪- ರಾಜ್ಯದ ನೂತನ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡು ಮೊದಲ ಬಾರಿಗೆ ನಗರಕ್ಕೆ ಆಗಮಿಸಿದಾಗ ಶನಿವಾರ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಾಂತಲಿAಗೇಗೌಡ ಪಾಟೀಲ್ ಕೋಳಕೂರ್ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸೋಮಶೇಖರ್ ಪಾಟೀಲ್ ತೇಗಲತಿಪ್ಪಿ ಸತೀಶ್ ಪಾಟೀಲ್,ಆಲಗೂಡ್ ಸಿದ್ಧಾರೂಢ ಮಲಶೆಟ್ಟಿ, ಪಂಪಣ್ಣ ಪಾಟೀಲ್, ಬಸವಂತರೇಗೌಡ ತೇಗಲತಿಪ್ಪಿ ಮುಂತಾದವರು ಉಪಸ್ಥಿತರಿದ್ದರು.