ಕಲೆ ಅನಾವರಣಕ್ಕೆ ವೇದಿಕೆಯಾದ ಜನಪದ ಸಂಭ್ರಮ

 

ಬೀದರ್, ಜೂ.೧೬- ಅಹಿಲ್ಯಾಬಾಯಿ ಹೋಳ್ಕರ ಸಾಂಸ್ಕೃತಿಕ ಮಹಿಳಾ ಸಂಘವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿಯ ಕುಂಬಾರವಾಡ ರಸ್ತೆಯಲ್ಲಿ ಇರುವ ಕರುನಾಡ ಸಾಂಸ್ಕತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮವು ಜಾನಪದದ ವಿವಿಧ ಕಲೆಗಳ ಅನಾವರಣಕ್ಕೆ ವೇದಿಕೆಯಾಯಿತು. ಕಲಾವಿದರು ತಮ್ಮ ಕಲೆಗಳನ್ನು ಪ್ರದರ್ಶಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.

ಕಲಾವಿದ ಮಲ್ಲಿಕಾರ್ಜುನ ರಾಂಪುರೆ ವಚನ ಗಾಯನ, ಕರಬಸಪ್ಪ ವಿಶ್ವಕರ್ಮ ದಾಸರ ಪದ, ಮನೋಹರ ಹುಪಳಾ, ಮಲ್ಲಿಕಾರ್ಜುನ ಪಾಟೀಲ, ಅಂಜಲಿ, ಕೃಷ್ಣರಾಜ ಜಾನಪದ ಗೀತೆ, ಜಗದೇವಿ ವಡಗಾಂವ್ ಭಕ್ತಿ ಗೀತೆ, ಸಿದ್ರಾಮಯ್ಯ ಸ್ವಾಮಿ ಭಜನೆ ಪದ, ಕಾಶಿನಾಥ ಭಂಗೂರೆ ತತ್ವಪದ, ಇಂದುಮತಿ ಬೀಸುವ ಪದ, ಶೋಭಾವತಿ ಕುಟ್ಟುವ ಪದ, ಸುವರ್ಣಾ ಐರಾಣಿ ಪದ, ಸಂತೋಷಕುಮಾರ ಹಂತಿ ಪದ, ಸುಶೀಲಮ್ಮ ಮೋಹರಂ ಪದ, ಸಂಗಮ್ಮ ಸಾಂಪ್ರದಾಯಿಕ ಪದ ಹಾಡಿ ರಂಜಿಸಿದರು. ವಿದ್ಯಾನಗರ ಕಲಾ ತಂಡದ ಕಲಾವಿದರು ವಚನ ಗಾಯನ ಹಾಗೂ ಲಕ್ಷಿö್ಮ ತಂಡದವರು ಸಾಂಪ್ರದಾಯಿಕ ಪದ ಪ್ರಸ್ತುತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ್ ಅತಿವಾಳೆ ಅವರು ಮಾತನಾಡಿ, ಜಾನಪದ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಕಲೆ ಹಾಗೂ ಕಲಾವಿದರ ಬೆಳವಣಿಗೆಗೆ ಜಾನಪದ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಅವರು ಮಾತನಾಡಿ, ಜಾನಪದ ಕಲಾ ಪ್ರಕಾರಗಳ ಉಳಿವಿಗೆ ಯುವ ಶಕ್ತಿ ಆಸಕ್ತಿ ತೋರಬೇಕಿದೆ ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲೆ ಹಾಗೂ ಕಲಾವಿದರಿಗೆ ಉತ್ತೇಜನ ನೀಡುತ್ತಾ ಬಂದಿದೆ ಎಂದು ತಿಳಿಸಿದರು.

ಮುಖಂಡ ವಿಠ್ಠಲರಾವ್ ಭಂಗೂರೆ ಅವರು ಮಾತನಾಡಿದರು. ಚಿಂತಕಿ ಗಾಯತ್ರಿ ಮೇತ್ರೆ ಅವರು ವಿಶೇಷ ಉಪನ್ಯಾಸ ನೀಡಿದರು. ಜೈ ಭವಾನಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷಿö್ಮಬಾಯಿ ಚಿದ್ರಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷೆ ಕಾಂಚನಾ ಸ್ವಾಗತಿಸಿದರು. ಎಂ.ಪಿ. ವೈಜಿನಾಥ ನಿರೂಪಿಸಿದರು. ಅಂಜಲಿ ವಂದಿಸಿದರು.

Share This Article
Leave a Comment