ಅಫಘಾತ ವಲಯವಾಗಿ ಮಾರ್ಪಡಾದ ಅಳ್ಳಗಿ ಕೆ ಕ್ರಾಸ್. ಕೂಡಲೇ ಗಿಡ ಗಂಟಿಗಳ ತೇರವಿಗೆ ಜಯ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರ ಆಗ್ರಹ.

 

 

ಅಫಜಲಪೂರ : ತಾಲೂಕಿನ ಅಳ್ಳಗಿ ಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಫಜಲಪುರ-ಶಿರವಾಳ ಮಾರ್ಗದ ಮುಖ್ಯ ರಸ್ತೆ ಅಫಘಾತ ವಲಯವಾಗಿ ಮಾರ್ಪಟ್ಟಿದೆ. ಈ ಕುರಿತು ಮಾತನಾಡಿದ ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಉಪಾಧ್ಯಕ್ಷ ಮುತ್ತು ಕುರಿಮನಿ ತಾಲೂಕಿನ ಪಿ ಡಬ್ಲ್ಯೂ ಡಿ ಇಲಾಖೆಯ ಅಧಿಕಾರಿ ಲಕ್ಷ್ಮಿಕಾಂತ್ ಬಿರಾದಾರ ಅವರಿಗೆ ಮನವಿ ಮಾಡಿದ್ದೂ ಕೂಡಲೇ ಅಳ್ಳಗಿ ಕ್ರಾಸ್ ಹತ್ತಿರ ಬೆಳೆದಿರುವ ಗಿಡ ಗಂಟಿಗಳನ್ನು ತೇರವು ಗೊಳಿಸಿ ಅಫಘಾತವಾಗುವದನ್ನ ತಡೆಗಟ್ಟುವಂತ ಕೆಲಸ ಮಾಡಬೇಕು ಎಂದರು. ಲಕ್ಷ್ಮೀಕಾಂತ ಅವರು ಹಲವು ಬಾರಿ ಅನ್ಯ ಕಾರ್ಯಗಳಿಗಾಗಿ ದೂರವಾಣಿ ಕರೆ ಮಾಡಿದರೆ ಸ್ವೀಕಾರ ಮಾಡುವದಿಲ್ಲ ಹಾಗಾಗಿ ಬಹಳಷ್ಟು ನಿರ್ಲಕ್ಷತನ ವಹಿಸುವುದು ಕಂಡುಬಂದಿರುವದರಿಂದ ಕೂಡಲೇ ಇಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅಳ್ಳಗಿ ಕೆ ಗ್ರಾಮ ಘಟಕದ ಅಧ್ಯಕ್ಷ ರಾಹುಲ್ ಸಿಂದೆ ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಪಕ್ಕದಲ್ಲಿ ಬಹಳಷ್ಟು ಗಿಡ ಘಂಟಿಗಳು ಬೆಳದಿವೆ, ವಾರದಲ್ಲಿ ಒಂದಲ್ಲ ಒಂದು ಅಫಘಾತ ಸಂಭವಿಸುತ್ತಿವೆ ಹಾಗಾಗಿ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಗಿಡ ಗಂಟಿಗಳನ್ನು ತೆರವುಗೊಳಿಸಿ ಅಫಘಾತವಾಗುವದನ್ನು ತಡೆಗಟ್ಟಬೇಕು ಎಂದರು.ಈ ಸಂದರ್ಭದಲ್ಲಿ ಸದಾಶಿವ ಕ್ಷತ್ರಿಯ, ಮುತ್ತು ಕುರಿಮನಿ, ಅಳ್ಳಗಿ ಕೆ ಗ್ರಾಮದಲ್ ಘಟಕದ ಅಧ್ಯಕ್ಷ ರಾಹುಲ್ ಶಿಂದೆ, ಸೈದಪ್ಪ ಮುಗಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share This Article
Leave a Comment