ಕಲಬುರ್ಗಿ, ಜೂ.೧೩- ಅಲ್ಪಸಂಖ್ಯಾತ ಸಮುದಾಯದ ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಬೇಕು ಎಂದು ಅಹಿಂದ್ ಚಳುವಳಿ ರಾಜ್ಯ ಸಂಚಾಲಕ ತಿಪ್ಪಣ್ಣ ಒಡೆಯರಾಜ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇಕಡಾ ೧೪ರಷ್ಟು ಮುಸ್ಲಿಂ ಬಾಂಧವರ ಮತದಾರರಿದ್ದು, ಅಂದು ದಿ. ಖಮರುಲ್ಲ ಇಸ್ಲಾಂ ಅವರು ಸತತ ೦೪ ಬಾರಿ ಶಾಸಕರಾಗಿ ೦೧ ಬಾರಿ ಸಚಿವರಾಗಿ ಕೆಲಸ ನಿರ್ವಹಿಸಿಸಿದ್ದಾರೆ. ತದನಂತರ ೦೩ ಬಾರಿ ಅವರ ಪತ್ನಿ ಶ್ರೀಮತಿ ಕನೀಜ್ ಫಾತಿಮಾ ಅವರು ಉತ್ತರ ಮತಕ್ಷೇತ್ರದ ಶಾಸಕರಾಗಿ ನಿಗಮ ಮಂಡಳಿಯ ಅಧ್ಯಕ್ಷರಾಗಿ ಯಾವುದೇ ಕಪ್ಪು ಚುಕ್ಕಿ ಇಲ್ಲದೇ, ಅಧಿಕಾರವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ ಎಂದರು.
ಒಮ್ಮೆ ಗಂಗಾಧರ ನಮೋಶಿ ಮತ್ತು ಎಸ್.ಕೆ. ಕಾಂತಾ ಅವರು ಎಂಟು ವರ್ಷಗಳ ಅವಧಿ ಹೊರತುಪಡಿಸಿದರೆ, ನಜೀರ್ ಅಹ್ಮದ್ ಅವರ ನಂತರ ದಿ. ಖಮರುಲ್ಲ ಇಸ್ಲಾಂ ಅವರು ಪಕ್ಷೇತರಾಗಿ ಮುಸ್ಲಿಂ ಲೀಗ್‌ನಿಂದ ಜನತಾದಳ ಮತ್ತು ಸತತವಾಗಿ ಕಾಂಗ್ರೆಸ್ ಪಕ್ಷದಿಂದ ಇಲ್ಲಿಯವರೆಗೆ ಅವರ ಮನೆತದವರೇ ನಗರದಲ್ಲಿ ನಿರಂತರವಾಗಿ ಶಾಸಕರಾಗಿ ಎಲ್ಲ ಜಾತಿ ಧರ್ಮದ ಬಡ ಕಾರ್ಮಿಕರ ದೀನ ದಲಿತರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲೆಯ ೯ ಮತಕ್ಷೇತ್ರಗಳಲ್ಲಿ ಶೇಕಡಾ ೨೦ರಷ್ಟು ಮತಗಳನ್ನು ಕಾಂಗ್ರೇಸ್ ಪಕ್ಷಕ್ಕೆ ಒಟ ಬ್ಯಾಂಕಾಗಿ ಮತ ಚಲಾಯಿಸಿದ್ದಾರೆ. ಕಳೆದ ಬಾರಿ ಲೋಕಸಭೆ ಅಭ್ಯರ್ಥಿ ಗೆಲ್ಲಲು ನಿರ್ಣಾಯಕ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೇ ನಿರಂತರವಾಗಿ ಕಾಂಗ್ರೇಸ್ ಪಕ್ಷ ಗೆಲ್ಲಲೂ ಇವರ ಪಾತ್ರ ಅತಿ ಮತ್ವದ್ದು. ೯ ಮತಕ್ಷೇತ್ರಗಳಲ್ಲಿ ಸೋಲು, ಗೆಲುವು ಕಂಡAತಹ ಕ್ಷೇತ್ರಗಳಲ್ಲಿನವರಿಗೆ ಸಚಿವರನ್ನಾಗಿ ಮಾಡಿದ್ದು ಸ್ವಾಗತಾರ್ಹ. ಸತತವಾಗಿ ಗೆಲುವು ಪಡೆದ ಏಕೈಕ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ ಅವರನ್ನೂ ಸಹ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ಪಕ್ಷದ ವರಿಷ್ಠರಿಗೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಜಾಕ್ ಚೌಧರಿ, ಸುಭಾಷ್ ಎಲ್. ಗುತ್ತೇದಾರ್, ಮೋಹನ್ ವಿಟಕರ್, ಶ್ರೀಹರಿ ಜಾಧವ್, ಸುಭಾಷ್ ಭನ್ನಪಟ್ಟೆ, ರಾಜು ಎಂ. ಮೊರೆ, ವಿದ್ಯಾನಂದ್ ಒಡೆಯರಾಜ್, ಅಮೀರ್ ಪಟೇಲ್ ಜೇವರ್ಗಿ ಮುಂತಾದವರು ಉಪಸ್ಥಿತರಿದ್ದರು.