ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ಸಂಸ್ಥಾಪಕರ ದಿನಾಚರಣೆ: ೮೫ ಜನರ ನೇತ್ರ ಉಚಿತ ತಪಾಸಣೆ

 

ಬೀದರ್, ಜೂ.೭- ವೆಲ್‌ಮೆಗ್ನಾ ಗುಡ್ ನ್ಯೂಸ್ ಸೋಸೈಟಿ ಸಂಚಾಲಿತ ಇಲ್ಲಿಯ ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ಸಂಸ್ಥಾಪಕರ ದಿನಾಚರಣೆ ನಿಮಿತ್ತ ಶನಿವಾರ ಆಯೋಜಿಸಿದ್‌ದ ಶಿಬಿರದಲ್ಲಿ ೮೫ ಜನರ ನೇತ್ರ ತಪಾಸಣೆ ಮಾಡಲಾಯಿತು. ತಪಾಸಣೆಗೆ ಒಳಗಾದವರ ಪೈಕಿ ೨೬ ರೋಗಿಗಳನ್ನು ಕ್ಯಾಟರಾಕ್ಸ್ ಉಚಿತ ಶಸ್ತçಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ಶಿಬಿರಕ್ಕೆ ಚಾಲನೆ ನೀಡಿದ ವೆಲ್ ಮೆಗ್ನಾ ಗುಡ್ ನ್ಯೂಸ್ ಸೋಸೈಟಿಯ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ಅವರು ಮಾತನಾಡಿ, ಡಾ. ಸಾಲಿನ್ಸ್ ಆಸ್ಪತ್ರೆಯು ಬೀದರ್, ಕಲಬುರ್ಗಿ ಜಿಲ್ಲೆ ಹಾಗೂ ನೆರೆಯ ತೆಲಂಗಾಣ ಸೇರಿದಂತೆ ಒಟ್ಟು ೧೦ ಶಾಖೆಗಳನ್ನು ಹೊಂದಿದ್ದು, ಪ್ರತಿ ವರ್ಷ ನಾಲ್ಕು ಸಾವಿರಕ್ಕೂ ಅಧಿಕ ನೇತ್ರ ಶಸ್ತçಚಿಕಿತ್ಸೆ ಮಾಡುತ್ತಿದೆ ಎಂದು ಹೇಳಿದರು.

ವೆಲ್ ಮೆಗ್ನಾ ಗುಡ್ ನ್ಯೂಸ್ ಸೋಸೈಟಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರು ಸಮುದಾಯ ಅಭಿವೃದ್ಧಿ ಕೇಂದ್ರಗಳು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ ಎಂದು ಅವರು ತಿಳಿಸಿದರು.

ಸಂಸ್ಥೆಯಿAದ ಚಟ್ನಳ್ಳಿಯಲ್ಲಿ ನವಜೀವನ ಕುಷ್ಠರೋಗ ಕೇಂದ್ರ ನಡೆಸುತ್ತಿದ್ದು, ಅಲ್ಲಿಯ ೫೦ ಮನೆಗಳಲ್ಲಿ ೧೦ ಕುಷ್ಠರೋಗಿಗಳು ಇದ್ದಾರೆ. ಅವರಿಗೆ ಅಗತ್ಯ ಔಷಧಿ ಹಾಗೂ ಆಹಾರ ಧಾನ್ಯ ಉಚಿತವಾಗಿ ಒದಗಿಸಲಾಗುತ್ತಿದೆ. ಕುಷ್ಠರೋಗಿಗಳ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಫಿಲೋಮೆನ್‌ರಾಜ್ ಪ್ರಸಾದ್, ಡಾ. ಜ್ಯೋತಿ, ವೆಲ್‌ಮೆಗ್ನಾ ಆಡಳಿತಾಧಿಕಾರಿ ವಿತೀನ್, ಡಾ. ವೀರೇಂದ್ರ ಪಾಟೀಲ್, ಸತೀಶ್, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು. ಪುಟ್ಟರಾಜ್ ಬಲ್ಲೂರಕರ್ ಅವರು ಕಾರ್ಯಕ್ರಮ ನಿರೂಪಿಸಿದರು.

Share This Article
Leave a Comment