ಸಂಗೀತವು ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ: ಅರುಣಕುಮಾರ್ ಕದಂ

 

ಕಲಬುರ್ಗಿ, ಜೂ.೨೦- ಸಂಗೀತವು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಭಾರತೀಯ ಸಂಗೀತವು ವಿಶ್ವದಲ್ಲಿಯೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ನಮ್ಮ ಪೂರ್ವಜರು ಸಂಗೀತವನ್ನು ಒಂದು ಸಾಧನೆಯಾಗಿ ಪರಿಗಣಿಸಿದ್ದರು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅರುಣಕುಮಾರ್ ಕದಂ ಬೆಳಕೋಟಾ ಅವರು ಹೇಳಿದರು.

ಬೆಳಕೋಟಾ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಇತ್ತೀಚಿಗೆ ಶ್ರೀ ಗುರು ಕುಮಾರೇಶ್ವರ ಸಂಗೀತ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಜರುಗಿದ ಸಂಗೀತ ಸೌರಭ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತದ ಮೂಲಕ ಮಾನವನು ತನ್ನ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸಬಹುದು. ಅದು ಭಾಷೆ, ಜಾತಿ ಹಾಗೂ ಧರ್ಮದ ಎಲ್ಲ ಗಡಿಗಳನ್ನು ಮೀರಿ ಜನರನ್ನು ಒಂದಾಗಿಸುವ ಶಕ್ತಿಯನ್ನು ಹೊಂದಿದೆ. ಸಂಗೀತದಿAದ ಏಕಾಗ್ರತೆ, ಶಿಸ್ತು, ಆತ್ಮವಿಶ್ವಾಸ ಮತ್ತು ಸೃಜನಶೀಲತೆ ಬೆಳೆಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಂಕ್ರಯ್ಯ ಸ್ವಾಮಿ ಬೆಳಕೊಟಾ ಅವರು ಮಾತನಾಡಿ, ಸಂಗೀತವು ಕೇವಲ ಮನರಂಜನೆಯ ಸಾಧನವಲ್ಲ, ಬದಲಾಗಿ ಮನಸ್ಸಿಗೆ ಶಾಂತಿ, ಸಂತೋಷ ಮತ್ತು ನೆಮ್ಮದಿಯನ್ನು ನೀಡುವ ದೈವಿಕ ಕಲೆಯಾಗಿದೆ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗೋಣ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸುಭಾಶ್ಚಚಂದ್ರ ನಂದ್ಯಾಳ್ ಬೆಳಕೋಟಾ, ಸುನೀಲ್ ಬಟಗೇರಾ, ಶರಣಬಸಪ್ಪ ಬಸಗೊಂಡೆ ಕಮಲಾಪೂರ್, ಸಂಸ್ಥೆ ಅಧ್ಯಕ್ಷ ಅಣವೀರಯ್ಯ ವಸ್ತçದ್ ಮುಂತಾದವರು ಉಪಸ್ಥಿತರಿದ್ದರು.

ಆಕಾಶವಾಣಿ ಕಲಾವಿದರಾದ ಮಲ್ಲಯ್ಯ ಕೆ. ಚಿಕ್ಕಮಠ, ಪವಿತ್ರಾ ವಿ. ರಾಜನಾಳ್, ವೀರಭದ್ರಯ್ಯ ಸ್ಥಾವರಮಠ, ವೇ. ಉದಯಕುಮಾರ ಶಾಸ್ತಿçÃ, ಸವಿತಾ ವಿ.ಎಸ್, ಇರ್ಫಾನ್ ಪಟೇಲ್ ಬೆಳಕೋಟಾ, ಗುರುಶಾಂತಯ್ಯ ಸ್ಥಾವರಮಠ, ಜ್ಞಾನೇಶ್ವರ ಬೆಳಕೋಟಾ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ಎ. ವಸ್ತçದ್ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Share This Article
Leave a Comment