ಕಲಬುರ್ಗಿ, ಜು.೧೪- ನಗರದ ಕರುಣೇಶ್ವರ ನಗರದ ಶ್ರೀ ಜೈ ವೀರ ಹನುಮಾನ ಮಂದಿರದಲ್ಲಿ ಕಳೆದ ಒಂದು ತಿಂಗಳಿನಿAದ ನಿರಂತರವಾಗಿ ನಡೆದಿದ್ದ ಅಧಿಕಮಾಸದ ಭಜನೆ, ಪಾರಾಯಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ಅಧಿಕಮಾಸ ಮಂಗಳ ಮಹೋತ್ಸವ ಭಾನುವಾರ ಅತ್ಯಂತ ವಿಜೃಂಭಣೆಯಿAದ ಜರುಗಿತು.
ಅಧಿಕಮಾಸದ ಪ್ರಯುಕ್ತ ಶ್ರೀ ಜೈ ವೀರ ಹನುಮಾನ್ ಭಜನಾ ಮಂಡಳಿಯ ಸದಸ್ಯರು ಪ್ರತಿದಿನ ಭಕ್ತಿಭಾವದಿಂದ ೩೩ ಭಜನಾ ಹಾಡುಗಳ ಗಾಯನ, ಅರಿಶಿನ-ಕುಂಕುಮ ವಿತರಣೆ, ದವಸ-ಧಾನ್ಯ ದಾನ, ದೇವತಾ ಪೂಜಾ ಸಾಮಗ್ರಿಗಳ ದಾನ ಹಾಗೂ ಧಾರ್ಮಿಕ ಪುಸ್ತಕಗಳ ವಿತರಣೆಯಂತಹ ಪುಣ್ಯಕಾರ್ಯಗಳನ್ನು ಹಮ್ಮಿಕೊಂಡು ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದರು.
ಮಂಗಳ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ವಿಷ್ಣು ಸಹಸ್ರನಾಮ ಮಹಾಯಾಗ ಹಾಗೂ ವಿಶೇಷ ಪೂಜೆಗಳು ನೆರವೇರಿದವು. ನಂತರ ಭಜನಾ ಮಂಡಳಿಯ ಮಹಿಳೆಯರು ಶ್ರೀಗೌರಿಯೊಂದಿಗೆ ಗ್ರಾಮಪ್ರದಕ್ಷಿಣೆ ನಡೆಸಿ ಭಕ್ತಿಗೀತೆಗಳ ಗಾಯನ, ನೃತ್ಯ ಹಾಗೂ ಸಾಂಪ್ರದಾಯಿಕ ಕೋಲಾಟದ ಮೂಲಕ ಭಕ್ತರನ್ನು ರಂಜಿಸಿದರು.ಬಳಿಕ ಭವ್ಯ ಪಲ್ಲಕ್ಕಿ ಉತ್ಸವ, ರಥೋತ್ಸವ, ಮಹಾಮಂಗಳಾರತಿ ಹಾಗೂ ಭಕ್ತರಿಗೆ ತೀರ್ಥ-ಪ್ರಸಾದ ವಿತರಣೆ ಕಾರ್ಯಕ್ರಮಗಳು ಭಕ್ತಿಪೂರ್ವಕ ವಾತಾವರಣದಲ್ಲಿ ಜರುಗಿದವು. ದೇವಸ್ಥಾನ ಆವರಣದಲ್ಲಿ ದಿನವಿಡೀ ಭಕ್ತರ ಸಂಭ್ರಮ ಮತ್ತು ಭಜನಾ ನಿನಾದಗಳು ಮೊಳಗಿದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಳೆದ ಒಂದು ತಿಂಗಳಿನಿAದ ಸೇವೆ ಸಲ್ಲಿಸಿದ ಭಜನಾ ಮಂಡಳಿಯ ಸದಸ್ಯರನ್ನು ಅಭಿನಂದಿಸಿ ಸ್ಮರಣ ಸಂಚಿಕೆಗಳನ್ನು ವಿತರಿಸಿ ಗೌರವಿಸಲಾಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಅವಿನಾಶ್ ಕುಲಕರ್ಣಿ, ಭಜನಾ ಮಂಡಳಿಯ ಪ್ರಮುಖರಾದ ಸವಿತಾ ಕುಲಕರ್ಣಿ, ವಿನುತಾ ಆರ್. ಕುಲಕರ್ಣಿ, ವೀಣಾ ಸಾತಖೇಡ್, ಗೀತಾ ಜಾಹಗಿರದಾರ್, ವೈಷ್ಣವಿ ಗೋಗಲೆ, ವಾಸುಕಿ ಕುಲಕರ್ಣಿ, ಮಾಲಿನಿ ಮಟಮಾರಿ, ಕವಿತಾ ಶರ್ಮಾ, ರಂಜನಾ ಸರಾಫ್, ಉಷಾ ಮಲಗತ್ತಿ, ಗೀತಾ ಪಾಟೀಲ್, ಸುನಂದಾ ಜೋಶಿ, ಅನುರಾಧಾ ಜೋಶಿ, ದೀಪಾ ಕುಲಕರ್ಣಿ, ವೀಣಾ ಮಲಗತ್ತಿ ಸೇರಿದಂತೆ ಭಜನಾ ಮಂಡಳಿಯ ಸದಸ್ಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು