ಅಭಿವೃಧ್ಧಿ ನಿರ್ಲಕ್ಷö್ಯ: ಶಾಸಕ ಅಲ್ಲಮಪ್ರಭು ಪಾಟೀಲ್ ವಿರುದ್ಧ ಬಿಜೆಪಿ ಪ್ರತಿಭಟನೆ

 

ಕಲಬುರ್ಗಿ, ಜು.೧೪- ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ ೪೭ ಹಾಗೂ ೪೮ರಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಕುಂಠಿತಗೊAಡಿರುವುದನ್ನು ಖಂಡಿಸಿ, ಬಿಜೆಪಿ ದಕ್ಷಿಣ ಮಂಡಲ ಹಾಗೂ ಸ್ಥಳೀಯ ನಾಗರಿಕರ ನೇತೃತ್ವದಲ್ಲಿ ಶಹಾಬಾದ್ ಕ್ರಾಸ್ ಸಮೀಪ ಬೃಹತ್ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ದಕ್ಷಿಣ ಕ್ಷೇತ್ರದ ವಾರ್ಡ್ಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಾರ್ಡ್ಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರಯ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ವೀರಣ್ಣ ಹೊನ್ನಳ್ಳಿ, ಹೊನ್ನಮ್ಮ ಬಾಬು ಹಾಗರಗಿ, ವಿಶಾಲ್ ಧರ್ಗಿ, ಶಂಭು ಪಾಟೀಲ್ ಬಾಳಬಟ್ಟಿ, ಮಲ್ಲು ಊದನೂರ್, ಮುಖಂಡರಾದ ರವಿ ಹಾಗರಗಿ, ಸಿದ್ರಾಮ ಮಹಾಂತಗೋಳ್, ಸಿದ್ದಣ್ಣ ಬುಳ್ಳಾ, ಪ್ರಕಾಶ ಪಾಟೀಲ್ ಹಿರಾಪುರ, ರಾಜು ವಾಡೇಕರ್, ಜಗನ್ನಾಥ ಪಟ್ಟಣಶೆಟ್ಟಿ, ಮಹಾದೇವ ಬೆಳಮಗಿ, ವಿಜಯಲಕ್ಷ್ಮಿ ಗೊಬ್ಬೂರಕರ್, ಜ್ಯೋತಿ ಪಾಟೀಲ್, ಶ್ರೀನಿವಾಸ್ ದೇಸಾಯಿ, ವಿಶ್ವನಾಥ ಸಾಲಿಮಠ, ರಾಜಶೇಖರ್ ನಂದೂರ್, ಅಮಿತ ಚಿಟ್ಟಗುಪ್ಪಿ, ಗುಂಡು ಮಹಾಂತಗೋಳ್, ಚನ್ನು ಬಿರಾದಾರ್, ಅಪ್ಪಾಸಾಬ್ ಜಂಗ್ಳೆ, ಉದಯ ರೇಷ್ಮಿ, ಮಲ್ಲಿಕಾರ್ಜುನ್ ಜಿನಕೇರಿ, ರಾಜು ಕಟ್ಟಿಮನಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು. ಪ್ರತಿಭಟನೆಯ ವೇಳೆ ವಾರ್ಡ್ಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Share This Article
Leave a Comment