ಅಲ್ಲಮಪ್ರಭು ಪಾಟೀಲ್‌ರಿಗೆ ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ, ವರಿಷ್ಠರ ಬಳಿಗೆ ಸ್ವಾಮೀಜಿ ನಿಯೋಗ..!

 

ಕಲಬುರ್ಗಿ, ಜೂ.೯- ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಜನಪರ ಕೆಲಸಗಾರರು, ಅನುಭವಿಗಳು, ತನ್ನ ೪ ದಶಕಗಳ ರಾಜಕೀಯದಲ್ಲಿ ಸದಾಕಾಲ ಜನಸೇವೆ ಮಾಡುತ್ತಿದ್ದಾರೆ. ಇಂತಹವರು ಡಿ.ಕೆ. ಶಿವಕುಮಾರ್ ಅವರ ಸರ್ಕಾರದಲ್ಲಿ ಮಂತ್ರಿಗಳಾಗಬೇಕು. ಇದಕ್ಕಾಗಿ ನಾವು ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಬಳಿ ನಿಯೋಗ ಹೋಗಬೇಕು ಎಂದು ಚಿಣಮಗೇರಿ ಸಿದ್ದರಾಮ ಶಿವಾಚಾರ್ಯರು ಹೇಳಿದರು.

ಮೇಳಕುಂದಾ ಬಿ ಗ್ರಾಮದಲ್ಲಿ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆ ಅಡಿಯಲ್ಲಿ ಶ್ರೀ ಸಿದ್ದಯ್ಯಪ್ಪ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಎಲ್ಲರಿಗೂ ಅದಿಕಾರ ಬೇಕು, ಹೊಸಬರು ಮಂತ್ರಿಯಾಗಬೇಕು. ಇದರಿಂದ ಹೆಚ್ಚಿನ ಜನಸೇವೆಯಾಗುತ್ತದೆ. ಅಲ್ಲಂಪ್ರಭು ಪಾಟೀಲರು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಸಿರಿವಂತರಾಗಿರುವ ರಾಜಕಾರಣಿಯಾಗಿದ್ದಾರೆ. ಅವರನ್ನುತುಂಬ ವರ್ಷದಿಂದ ಬಲ್ಲೆ.ಇಂಥವರು ಮಂತ್ರಿಯಾದಲ್ಲಿ ಹೆಚ್ಚಿನ ಜನರ ಕೆಲಸಗಳಾಗುತ್ತವೆ, ಧಾರ್ಮಿಕವಾಗಿಯೂ ಮಠ, ಮಂದಿರಗಳನ್ನು ಅವರು ಪೋಷಿಸುತ್ತಾರೆಂದರು.

ವೇದಿಕೆಯಲ್ಲಿದ್ದ ಶಾಸಕ ಅಲ್ಲಂಪ್ರಭು ಪಾಟೀಲರನ್ನೇ ಉದ್ದೇಶಿಸಿ ನೀವು ಯಾವಾಗ ಕರೆದರು ನಾವು ನಿಮ್ಮೊಂದಿಗೆ ನಿಯೋಗದಲ್ಲಿ ಬರಲು ಸಿದ್ಧ. ಮುಖ್ಯಮಂತ್ರಿ, ಹೈಕಮಾಂಡ್ ಎಲ್ಲರಿಗೂ ಭೇಟಿಮಾಡಿ ನಿಮಗೆ ಮಂತ್ರಿಗಿರಿ ಯಾಕೆ ಕೊಡಬೋಕು ಎಂಬುದನ್ನು ನಾವು ತಿಳಿಸುತ್ತೇವೆಂದು ಸಿದ್ದರಾಮಯ ಶಿವಾಚಾರ್ಯರು ಹೇಳಿದರು.

ಪಾಳಾದ ಕಟ್ಟಿಮನಿ ಹಿರೇಮಠದ ಡಾ. ಗುರುಮೂರ್ತಿ ಶಿವಾಚಾರ್ಯರು ಕೂಡಾ ಮಾತನಾಡಿ, ಅಲ್ಲಂಪ್ರಬು ಪಾಟೀಲರಿಗೆ ಮಂತ್ರಿಗಿರಿ ಸಿಗಬೇಕು. ನೂತನ ಸರ್ಕಾರದಲ್ಲಿ ಅವರಿಗೆ ಮಂತ್ರಿಯಾಗಿಸುವ ಬಗ್ಗೆ ಸ್ವೀಮಜಿಗಳು ಪಕ್ಷದ ಉನ್ನತ ಹಂತದಲ್ಲಿ ಆಗ್ರಹಿಸಲು ಇದು ಸಕಾಲವೆಂದರು. ಮೇಳಕುಂದಾ ಗ್ರಾಮದಲ್ಲಿ ಭೋಗಲಿಂಗೇಶ್ವರ ಮಂದಿರ ಜೀರ್ಣೋದ್ಧಾರಕ್ಕೆ ಅಲ್ಲಂಪ್ರಭು ಅವರ ಕೊಡುಗೆ ಅಪಾರವೆಂದರು.

ಬಡದಾಳ್ ತೇರಿನ ಮಠದ ಚೆನ್ನಮಲ್ಲ ಶಿವಾಚಾರ್ಯರು ಮಾತನಾಡಿ, ಮೇಳಕುಂದಾದಲ್ಲಿ ಬೇಗ ಮಠದ ಕಟ್ಟಡ ತಲೆ ಎತ್ತಲಿ. ಧಾರ್ಮಿಕವಾಗಿ ಈ ನೆಲದಲ್ಲಿ ಚಟುವಟಿಕೆಗಳು ಶುರುವಾಗಲಿ ಎಂದು ಹರಸಿದರು. ಆಂದೋಲಾ ಸಿದ್ದಲಿಂಗ ಶ್ರೀಗಳು ಮಾತನಾಡಿ, ಶಾಸಕ ಅಲ್ಲಂಪ್ರಭು ಪಾಟೀಲರು ಮೇಳಕುಂದಾದಲ್ಲಿ ಮಠ ನಿಮ್ರಾಣಕ್ಕೆ ನೀಡುತ್ತಿರುವ ಸಹಕಾರವನ್ನು ಮೆಚ್ಚಿಕೊಡರು. ತಾವು ಹಾಗೂ ಅಲ್ಲಂಪ್ರಭು ಇಬ್ಬರೂ ಜೇವರ್ಗಿಯಲ್ಲಿ ೨೦೦೪ ರವರೆಗೂ ವೇದಿಕೆಯಲ್ಲಿ ಜಗಳವಾಡಿದ ಸಂದರ್ಭಗಳನ್ನು ಮೆಲಕು ಹಾಕಿದರು. ಜೇವರ್ಗಿಯಲ್ಲೇ ಇದ್ದಿದ್ರೆ ಇವರು ರಾಜಕೀಯವಾಗಿ ಬೆಳೆಯುತ್ತಿರಲಿಲ್ಲ. ಅವರು ಕಲಬುರ್ಗಿಗೆ ಬಂದು ಬೆಳೆದಿದ್ದಾರೆ. ೨೦೨೮ರಲ್ಲಿ ಮತ್ತೆ ಇವರೊಂದಿಗೆ ಜಗಳವಾಡುತ್ತೇನೆಂದು ಸಿದ್ದಲಿಂಗ ಸ್ವಾಮೀಜಿ ಹೇಳುತ್ತ ಶಿವಸೇನೆಯ ರಾಜ್ಯಾಧ್ಯಕ್ಷರಾಗಿರುವ ತಾವೂ ಅಸೆಂಬ್ಲಿ ಚುನಾವಣೆ ಕಣದಲ್ಲಿ ಇಳಿಯುವ ಸುಳಿವು ಕೊಟ್ಟಾಗ ಜನ ಕರತಾಡನ ಮಾಡಿದರು.

ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ಮಾತನಾಡಿ, ಧಾರ್ಮಿಕ ಸಾಮರಸ್ಯ ಸಮಾಜದಲ್ಲಿರಬೇಕು. ಮಠ, ಮಂದಿರಗಳಿAದ ಸಮಾಜ ಸುಂದರವಾಗಿರುತ್ತದೆ. ಮೇಳಕುಂದಾದಲ್ಲಿ ಶಶಿಕುಮಾರ ದೇವರ ನೇತೃತ್ವದಲ್ಲಿ ಆದಷ್ಟು ಬೇಗ ಹೊಸ ಮಠ, ಗುರುಭವನ ನಿರ್ಮಾಣವಾಗಲಿ, ಎಲ್ಲರೂ ಸೇರಿ ಇಲ್ಲೊಂದು ಗುರುಸ್ಥಳ ಮಾಡಿ ಪಾವನರಾಗೋಣ. ತಾವು ಶಾಸಕರಾಗಿ ಕೈಗೊಂಡ ಪ್ರಗತಿ ಕೆಲಸಗಳನ್ನು ಪಟ್ಟಿ ಮಾಡಿದರು.ಕೆಲಸದ ಗುಣಮಟ್ಟದಲ್ಲಿ ರಾಜೀ ಬೇಡ. ಪ್ರಸನೆ ಮಾಡಿರೆಂದು ಸೇರಿದ್ದ ಜನರಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸಿದ್ದಯ್ಯಪ್ಪ ಮಠದ ಗುರುಭವನ ನಿರ್ಮಾಣ ಯೋಜನೆಗೆ ಕೈ ಜೋಡಿಸಲು, ದೇಣಿಗೆನೀಡಲು ಭಕ್ತರಿಗೆ ಗುರುಗಳು ದೇಣಿಗೆ ಪುಸ್ತಕ ಕೊಟ್ಟು ಹರಸಿದರು.

ಸಿದ್ದಯ್ಯಪ್ಪ ಮಂದಿರದ ಧಾರ್ಮಿಕ ಗುರುಗಳಾದ ಶಶಿಕುಮಾರ್ ದೇವರು ವೇದಿಕೆಯಲ್ಲಿದ್ದ ಸರ್ವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿಶಶಿಕುಮಾರ್ ದೇವರು, ಮೇಳಕುಂದ ಬಿ. ಮರಳಸಿದ್ದ ದೇವರು, ಜೋಗುರು, ಗ್ರಾಮದ ಮುಖಂಡರು, ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಗ್ರಾಮಸ್ಥರು ಪಾಲ್ಗೊಂಡಿದ್ದರು.

Share This Article
Leave a Comment