ಕಲಬುರ್ಗಿ, ಮೇ.೩೧- ಗುಲಬರ್ಗಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಭವನದಲ್ಲಿ ಇದೇ ಜೂನ್ ೬ ಮತ್ತು ಏಳರಂದು ಎರಡು ದಿನಗಳ ಕಾಲ ವಿಶ್ವ ಬಂಜಾರಾ ಸಾಹಿತ್ಯ ಹಾಗೂ ಸಮ್ಮೇಳನ-೨೦೨೬ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಬಿ.ಟಿ. ಅಂಗಡಿಯವರು ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಸಂತ ಶ್ರೀ ಸೇವಾಲಾಲ್ ಸಂಶೋಧನಾ ಹಾಗೂ ಅಧ್ಯಯನ ಪೀಠ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಬಂಜಾರಾ ಲೋಕ ಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ ಸಮ್ಮೇಳನ ಜರುಗಲಿದ್ದು, ಬಂಜಾರಾ ಜನಾಂಗದ ಶ್ರೀಮಂತ ಸಾಹಿತ್ಯ, ಗೋರ್ ಬೋಲಿ ಭಾಷೆ, ಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ ಎಂದರು. ಜೂನ್ ೬ರಂದು ಬೆಳಿಗ್ಗೆ ೧೦-೩೦ಕ್ಕೆ ಸಂತ ಶ್ರೀ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಹಾಗೂ ಸಮ್ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಉದ್ಘಾಟಿಸುವರು. ಕುಲಪತಿಗಳು ಅಧ್ಯಕ್ಷತೆಯನ್ನು ವಹಿಸುವರು. ಡಾ. ಬಾಬುಸಿಂಗ್, ಸಂಜಯ್ ಪಾಟೀಲ್ ರಾಠೋಡ್, ರುದ್ರಪ್ಪ ಲಮಾಣಿ, ಬಲರಾಮ್ ನಾಯಕ್ ಮುಂತಾದ ಗಣ್ಯಾತೀತ ಗಣ್ಯರು ಆಗಮಿಸುವರು. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಅವರು ಬಿಡುಗಡೆ ಮಾಡುವರು ಎಂದರು. ಸಮ್ಮೇಳನದಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ೬೦+ ಬಂಜಾರ ಕವಿಗಳಿಂದ ಕಾವ್ಯ ವಾಚನ ಮಾಡುವರು. ಜೂನ್ ೭ರಂದು ತಾಂಡಾ ಕುಸುರಿ ಕರಕುಶಲ ವಸ್ತು ಪ್ರದರ್ಶನ ಜರುಗಲಿದ್ದು, ಲಂಬಾಣಿ ಕಸೂತಿ, ಕನ್ನಡಿ ಕೆಲಸ, ಬೆಳ್ಳಿ ಆಭರಣ, ಗುಂಜ್ ಸ್ಟಾಲ್‌ಗಳನ್ನು ಹಾಕಲಾಘುತ್ತಿದೆ. ಸಾಂಸ್ಕೃತಿಕ ದೀವಟಿಗೆ ಲಂಬಾಣಿ ನೃತ್ಯ ಡಪ್ಪು ಕುಣಿತ, ಹಾಲಿಯಾ ನೃತ್ಯ, ಗೋರ್ ಜನಪದ ಗಾಯನ. ರಾಷ್ಟ್ರೀಯ ಖ್ಯಾತಿಯ ಲಂಗಾ-ಮಾAಗಣಿಯಾರ್ ಕಲಾವಿದರಿಂದ ಕಾರ್ಯಕ್ರಮ ಸಹ ನೆರವೇರಲಿದೆ ಎಂದು ಅವರು ಹೇಳಿದರು. ಗೋರ್ ಬೋಲಿ ಭಾಷೆಗೆ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸ್ಥಾನಮಾನ ನೀಡುವುದು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬಂಜಾರಾ ಅಧ್ಯಯನ ಪೀಠ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಐದು ಕೋಟಿ ರೂ.ಗಳ ಅನುದಾನ ಒದಗಿಸುವ ಕುರಿತು ಸಮಾವೇಶದಲ್ಲಿ ಪ್ರಮುಖ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು. ಸಮಾವೇಶಕ್ಕೆ ಉಚಿತ ಪ್ರವೇಶವಿದೆ. ಒಂದು ಸಾವಿರಕ್ಕೂ ಅಧಿಕ ಬಂಜಾರಾ ಸಮುದಾಯದವರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಮಚಂದ್ರ ಜಾಧವ್, ಸುಭಾಷ್ ರಾಠೋಡ್ ಮುಂತಾದವರು ಉಪಸ್ಥಿತರಿದ್ದರು.