ವಡಗೇರಿಯಲ್ಲಿ ಭಾವೈಕ್ಯತೆಯ ಮಹಾಜಾತ್ರೆ: ಶ್ರೀ ಚಂದ ಸಾಬ್ ಮಹಿಮೆ

ಹಿಂದೂ-ಮುಸ್ಲಿಂ ಏಕತೆಯ ಸಂಕೇತವಾಗಿ ಸಾವಿರಾರು ಭಕ್ತರ ಹರಿದುಬಂದ ಭಕ್ತಿ ಪ್ರವಾಹ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ವಡಗೇರಿ ಗ್ರಾಮದಲ್ಲಿ ದಿನಾಂಕ 18:03:2026 ರಂದು ನಸುಕಿನ ಜಾವದಲ್ಲಿ ಗಂಧ ಕಾರ್ಯಕ್ರಮ ನೆರವೇರಿತು
ದಿನಾಂಕ 19:03:2026 ರಂದು ದೀಪ ಕಾರ್ಯಕ್ರಮ ಜರಗಿತು
ಹೀಗೆ ಎರಡು ದಿವಸಗಳ ವರೆಗೆ ನಡೆಯುವ ಶ್ರೀ ಚಂದಾ ಸಾಬ್ ರವರ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಜಾತ್ರೆಗೆ ಕೇವಲ ಕರ್ನಾಟಕ ಅಲ್ಲದೆ ಮಹಾರಾಷ್ಟ್ರ ಆಂಧ್ರ ತೆಲಂಗಾಣ ಮುಂತಾದ ಹೊರ ರಾಜ್ಯಗಳಿಂದ ಅನೇಕ ಭಕ್ತರು ಆಗಮಿಸಿ ದರ್ಶನ ಪಡೆದರು.
ಜಾತ್ರೆಗೆ ಬಂದು ಹೋಗುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆಧ್ಯಾತ್ಮಿಕ ಸಾಧಕ ಶ್ರೀ ಚಂದಾ ಸಾಹೇಬರು ಹುಟ್ಟಿದ 11 ವರ್ಷದೊಳಗೆ ಅನೇಕ ಪವಾಡಗಳನ್ನು ಮಾಡಿದ್ದಾರೆ ಶ್ರೀ ಚಂದಾಸಾಹೇಬರಿಗೆ ಅನ್ನ ಮತ್ತು ಮಾದಲಿ ಮಾತ್ರ ನೈವೇದ್ಯ ನಡೆಯುತ್ತದೆ.
ವಡಗೇರಿ ಗ್ರಾಮದ ಶ್ರೀ ಚಂದಾಸಾಬ್ ರವರು ಮತ್ತು ದುಮ್ಮಾದ್ರಿಯ ವರಹಳ್ಳಿ ರಾಯ ಇಬ್ಬರು ಅಪರೂಪದ ಗೆಳೆಯರಾಗಿದ್ದರು ಮುಂದೆ ಶ್ರೀ ಚಂದಾಸಾಬ ರವರು ವಡಗೇರಿ ಗ್ರಾಮದ ಹಳ್ಳದ ದಂಡೆಯ ಹತ್ತಿರ ಜೀವಂತ ಸಮಾಧಿಯಾಗಿರುವುದು ಇತಿಹಾಸವಿದೆ. ದುಮ್ಮಾದ್ರಿ ಗ್ರಾಮದ ವರ ಹಳ್ಳಿ ರಾಯರು ಕೂಡಾ ದುಮ್ಮಾದ್ರಿ ಯ ಹಳ್ಳದ ಹತ್ತಿರ ಐಕ್ಯ ಹೊಂದಿರುವ ಇತಿಹಾಸವಿದೆ.
ಈ ಹಿನ್ನೆಲೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಶ್ರೀ ಚಂದಾಸಾಬ್ ರವರ ಜಾತ್ರೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

Share This Article
Leave a Comment