ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಹಾಸ್ಟೆಲ್, ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಧರಣಿ

 

ಕಲಬುರ್ಗಿ, ಜೂ.೧೯- ಜನುಷ್ಠ ವೇತನ ಜಾರಿಗೊಳಿಸುವಂತೆ ಹಾಗೂ ಬಾಕಿ ವೇತನ ಪಾವತಿಸುವಂತೆ ಮತ್ತು ವಾರದ ರಜೆ ಕಡ್ಡಾಯವಾಗಿ ಕೊಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ಧರಣಿ ಸತ್ಯಾಗ್ರಹ ಮಾಡಿದರು.

ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಲ್ಲಮ್ಮ ಕೋಡ್ಲಿ, ಮೇಘರಾಜ್ ಕಠಾರೆ, ಬಾಬು ಹೊಸಮನಿ, ನರಸಮ್ಮ ಕೊಂಡAಪಳ್ಳಿ, ರವಿ ಯರಗೋಳ್, ನಾಗರತ್ನ ಮದನಕರ್, ನಾಗರಾಜ್ ಕಟ್ಟಿಮನಿ, ಮೊಹ್ಮದ್ ಜಮೀರುದ್ದೀನ್ ಬಾಬಾ, ಕಲ್ಯಾಣಿ ಪೂಜಾರಿ, ಪರಶುರಾಮ್ ಹಡಲಗಿ, ನರಸಮ್ಮ ಚಂದನಕೇರಾ, ಶಿವರಾಜ್ ಆಡಕಿ, ಅಲ್ಲಾ ಪಟೇಲ್ ವಾಡಿ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿಭಟನೆಕಾರರು ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕಳೆದ ಒಂದು ವರ್ಷಗಳಿಂದ ನಿರಂತರ ಹೋರಾಟದ ಫಲವಾಗಿ ಸರ್ಕಾರಿ ಕನಿಷ್ಟ ವೇತನ ೫೦ರಷ್ಟು ಶೇಕಡಾ ಹಚ್ಚಿಸಿ ಆದೇಶ ಹೊರಡಿಸಿದೆ. ಈ ಆದೇಶ ಹಿಂದುಳಿದ ವರ್ಗಗಳ ಮೇ ತಿಂಗಳಿAದ ಜಾರಿ ಮಾಡಿದೆ. ಆದರೆ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕ್ರೆöÊಸ್ತ ಇಲಾಖೆಯಲ್ಲಿ ಕಳೆದ ೩-೪ ತಿಂಗಳಿAದ ಬಾಕಿ ವೇತನ ಪಾವತಿಸಿಲ್ಲ ಎಂದು ಆರೋಪಿಸಿದರು.

ಬಿಸಿಎಂ ಇಲಾಖೆಯಲ್ಲಿ ಎಸ್‌ಎಲ್‌ಎನ್ ಬೆಂಗಳೂರಿನ ಮ್ಯಾನ್ ಪವಾರ್ ಎಜೆನ್ಸಿಯು ಪ್ರತಿ ತಿಂಗಳು ಪಾವತಿಯಲ್ಲಿಯೂ ೨೦೦ ಹಾಗೂ ೩೦೦ರೂ.ಗಳನ್ನು ಕಡಿಮೆ ಪಾವತಿಸಲಾಗುತ್ತಿದೆ. ಈ. ಹಿಂದೆ ಮೂರು ತಿಂಗಳ ಹಿಂದೆ ಹೋರಾಟದಲ್ಲಿ ಅಪರ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಸಭೆ ನಡೆಸಿ ವಾರಕ್ಕೊಂಡು ರಜೆ ಕೊಡುವರಾಗಿ ಹೇಳಿದ್ದು ಇನ್ನು ಜಾರಿಯಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಆದರೆ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕ್ರೆöÊಸ್ತ ಇಲಾಖೆಯ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಏಪ್ರಿಲ್ ೨೦೨೬ರ ಏಪ್ರಿಲ್ ೧ರಿಂದಲೆ ಜಾರಿ ಮಾಡುವಂತೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಾಕಿ ಇರುವ ೩೪ ತಿಂಗಳಿನ ವೇತನವನ್ನು ಪಾವತಿಸುವಂತೆ, ವಾರಕ್ಕೊಂದು ರಜೆ ಜಾರಿ ಮಾಡುವಂತೆ, ಹೊಸದಾಗಿ ಪ್ರಾರಂಭಿಸುವ ವಸತಿ ನಿಲಯಗಳಲ್ಲಿ ಈ ಹಿಂದೆ ಸೇವೆ ಸಲ್ಲಿಸಿರುವ ನೌಕರರಿಗೆ ಪುನ: ಕೆಲಸಕ್ಕೆ ತೆಗೆದುಕೊಳ್ಳುವಂತೆ, ವೇತನ ಹೆಚ್ಚಳವಾಗಿದ್ದರಿಂದ ನೌಕರರ ಮೇಲೆ ಕಿರುಕುಳ ಸುಳ್ಳು ಆರೋಪ ಹೊರಿಸಿ ಕೆಲಸದಿಂದ ತೆಗೆಯುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದರು.

Share This Article
Leave a Comment