ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು, ವೈದ್ಯಕೀಯ ಅಧೀಕ್ಕರು ಹಾಗೂ ಪ್ರಾಂಶುಪಾಲರು ಇವರ ಮಾರ್ಗದರ್ಶನದಲ್ಲಿ ದಂತ ವಿಭಾಗದ ಪ್ರಾದ್ಯಾಪಕರ ಹಾಗೂ ಮುಖ್ಯಸ್ಥರು ಡಾ|| ಅರ್ಚನಾ ಎಸ್ ರವರು ದಂತ ವಿಭಾಗದ ಸಿಬ್ಬಂದಿಯವರೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆ ಮೇ-31, 2026 ನ್ನು ದಿನಾಂಕ: 11.06.2026 ರಂದು ಬೆಳಿಗ್ಗೆ 10:30 ಗಂಟೆಗೆ ಜಿಮ್ಸ್ ಆಸ್ಪತ್ರೆಯ 10 ನೇ ಮಹಡಿಯ ಸಭಾಂಗಣದಲ್ಲಿ ಸಸಿಗೆ ನೀರೆರೆಯುವ ಮೂಲಕ ಪ್ರಾರಂಭಿಸಲಾಯಿತು.
ಡಾ|| ಅಜಯ್ ಕುಮಾರ ಜಿ. ಪ್ರಾಂಶುಪಾಲರು ಜಿಮ್ಸ್ ರವರು “ ನಿಕೋಟಿನ್ ಮತ್ತು ತಂಬಾಕು ವ್ಯಸ್ನವನ್ನು ಎದುರಿಸುವ ಮನವಿಯನ್ನು ಮರೆಮಾಚುವುದು” ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ|| ಶಿವಕುಮಾರ ಸಿ.ಆರ್. ವೈದ್ಯಕೀಯ ಅಧೀಕ್ಷಕರವರು “ ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತನು ನಮ್ಮ ಸಮಾಜವನ್ನು ತಂಬಾಕು ಹಾಗೂ ತಂಬಾಕು ವ್ಯಸನಗಳ ಉತ್ಪನ್ನದಿಂದ ಮುಕ್ತ ಮಾಡಲು ರಾಯಭಾರಿಯಾಗಿ ಕಾರ್ಯನಿರ್ವಹಿಸಬೇಕು, ಸರಕಾರ ಅವುಗಳ ಉತ್ಪಾದನೆಯನ್ನು ನಿರ್ಬಂದಿಸಿಬೇಕು ಎಂದು ತಿಳಿಸಿದರು. ಡಾ|| ರುಖೀಯ ಅಸ್ನಾ ರಬಾ, ಜಿಲ್ಲಾ ಶ್ತ್ರಜ್ಞರು ಹಾಗೂ ಅಧೀಕ್ಷಕರು, ಜಿಮ್ಸ್ ರವರು ತಂಬಾಕು ಹಾಗೂ ಅದರ ಉತ್ಪನ್ನಗಳ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು. ಡಾ|| ಸೈಯ್ಯದ್ ಝಕಾಉಲ್ಲಾಹ, ಪ್ರಾಂಶುಪಾಲರು., ಅಲಬದರ್ ಡೆಂಟಲ್ ಕಾಲೇಜು ಇವರು ತಂಬಾಕು ಮತ್ತು ನಿಕೋಟಿನ್ ಉದ್ಯಮಿಗಳ ಆಕರ್ಷಕ ಉತ್ಪನ್ನಗಳ ಹಿಂದಿರುವ ಕರಾಳ ಉದ್ದೇಶಗಳ ಬಗ್ಗೆ ಅರಿವು ಮೂಡಿಸಿದರು. ದಂತ ವಿಭಾಗದ ಮುಖ್ಯಸ್ಥರಾದ ಡಾ|| ಅರ್ಚನಾ ಎಸ್. ರವರು ಕಾರ್ಯಕ್ರಮದ ಪ್ರಾಸ್ತವಿಕ ನುಡಿಯಲ್ಲಿ –ದಂತ ವಿಭಾಗದಲ್ಲಿ ಮಾಡುವ Nicotine Replacement Therapy ಹಾಗೂ ತಂಬಾಕು ವ್ಯಸನಿಗಳಿಗೆ, ವ್ಯಸನ ಮುಕ್ತಗೊಳಿಸಲು ತಿಂಗಳಿಗೆ ಸುಮಾರು 200-300 ವ್ಯಕ್ತಿಗಳಿಗೆ ಸಮಾಲೋಚನೆ ಮಾಡಲಾಗುವದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಡಾ|| ಪ್ರಭುಕಿರಣ ಗೋಗಿ, ಮುಖ್ಯಸ್ಥರು ಮನೋಶಾಸ್ತ್ರ ವಿಭಾಗರವರು “ ನಿಕೋಟಿನ್ ಮಾನವನ ಮೆದುಳನ್ನು ದುರ್ಬಳಕೆ ಮಾಡಿಕೊಂಡು ಹೇಗೆ ವ್ಯಸನಿಯನ್ನಾಗಿ ಮಾಡಬಹುದು” ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸವನ್ನು ನೀಡಿದರು. ಶ್ರೀಮತಿ ಸುಜಾತಾ ಪಾಟೀಲ್, ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಕಲಬುರಗಿ ಇವರು “ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ಹಾಗೂ COTPA ಕಾಯ್ದೆ” ಬಗ್ಗೆ ತಿಳಿಸಿಕೊಟ್ಟರು.
ವಿಶ್ವ ತಂಬಾಕು ರಹಿತ ದಿನಾಚರಣೆ ಮೇ-31, 2026 ಅಂಗವಾಗಿ ಜೂನ್-2, 2026 ರಂದು ಜಿಲ್ಲಾ ಪಂಚಾಯತ, ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿರವರ ಸಂಯೋಗದೊಂದಿಗೆ ಜಿಲ್ಲಾ ಆಸ್ಪತ್ರೆಯ ಆವರಣದಿಂದ ಪ್ರಾರಂಭಿಸಿ, ಜಗತ್ ವೃತ್ತದವರೆಗೆ ತಂಬಾಕು ನಿಷೇಧ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ವೈದ್ಯ & ಅರೆವೈದ್ಯಕೀಯ ವಿದ್ಯಾರ್ಥಿಗಳ ಪ್ರಭಾತ್ ಪೇರಿ ಮಾಡಲಾಗಿತ್ತು. ಮುಂದುವರೆದು, ದಿನಾಂಕ: 08.06.2026 ರಂದು ಜಿ̧ಮ್ಸ್, ESIC, HKES, ಹಾಗೂ ಅಲಬದರ್ ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಬಂಧ ಬರಹ ಹಾಗೂ ಬಿತ್ತಿ ಚಿತ್ರ (Poster) ಪ್ರದರ್ಶನ ಸ್ಪರ್ದೆ ಆಯೋಜಿಸಲಾಯಿತು. ಅತ್ಯುತ್ತಮ 03 ಪ್ರದರ್ಶನ ಹಾಗೂ 03 ಪ್ರಬಂಧಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಡಾ|| ಆರ್.ಎಸ್. ಗುಗವಾಡ, ಲೈಸೆನ್ ಅಧಿಕಾರಿಗಳು ಜಯದೇವ ಆಸ್ಪತ್ರೆ, ಡಾ|| ಹರ್ಷದ್ ಹುಸೇನ್, ಉಪ ಪ್ರಾಂಶುಪಾಲರು ಅಲ್ ಬದರ್ ಡೆಂಟಲ್ ಕಾಲೇಜು, ಡಾ|| ವೀರೇಂದ್ರ ಪಾಟೀಲ್, ಉಪಪ್ರಾಂಶುಪಾಲರು, ನಿಜಲಿಂಗಪ್ಪ ಡೆಂಟಲ್ ಕಾಲೇಜು, ಡಾ|| ಉಮೇಶ ಅಲ್ಲದ್, KMC Member ಹಾಗೂ ವೈದ್ಯಕೀಯ ಅಧೀಕ್ಷಕರು ನಿಜಲಿಂಗಪ್ಪ ಡೆಂಟಲ್ ಕಾಲೇಜು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಕಾರ್ಯಕ್ರಮದಲ್ಲಿ ಜಿಮ್ಸ್ ವೈದ್ಯಕೀಯ ಉಪ ಅಧೀಕ್ಷಕರು, ಆಡಳಿತ ಅಧಿಕಾರಿಗಳು, ಎಲ್ಲಾ ವಿಭಾಗದ ಮುಖ್ಯಸ್ಥರು, ವೈದ್ಯಾಧಿಕಾರಿಗಳು, GIMS ಹಾಗೂ 03 ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪಾಲ್ಗೋಂಡರು.
ಕಾರ್ಯಕ್ರಮದಲ್ಲಿ ವಿಶ್ವ ತಂಬಾಕು ರಹಿತ ದಿನದ ಬಿತ್ತಿ ಚಿತ್ರ ಬಿಡುಗಡೆಗೊಳಿಸಲಾಯಿತು. ಹಾಗೂ ಉಪಸ್ಥಿತರಿದ್ದ ಎಲ್ಲರಿಗೂ ತಂಬಾಕು ಮುಕ್ತ ಸಮಾಜ ಕಟ್ಟಲು ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ|| ನಾಗರಾಜ ಬಿ. ಪಾಟೀಲ್, ಸ್ಥಾನಿಕ ವೈದ್ಯಾಧಿಕಾರಿಳು ಹಾಗೂ NOHP Nodal Officer ಡಾ|| ರಾಜು ಬಿ. ರಾಂಪುರೆ ದಂತ ವಿಭಾಗದ ಸಹ ಪ್ರಾದ್ಯಾಪಕರಾದ ಡಾ|| ಅಶೋಕ ಸತ್ಯನಾರಾಯಣ, ಡಾ|| ಮೋಹನ ಬೀದಿಮನಿ, ಸಹಾಯಕ ಪ್ರಾದ್ಯಾಪಕರಾದ ವೀರಭದ್ರ ಕಲ್ಯಾಣಿ, ಸೋಷಿಯಲ್ ವರ್ಕರ್ ಆರತಿ ಧನಶ್ರೀ. ಸೈಕ್ಯಾಟ್ರಿಕ್ ಕೋನ್ಸೆಲರ್ ಮಂಜುನಾಥ ಕಂಬಾಳಿಮಠ್ ಉಪಸ್ಥಿತರಿದ್ದರು.
ಮುಖ್ಯ ದಂತ ವೈದ್ಯಾಧಿಕಾರಿಗಳಾದ ಡಾ|| ಸಂಗಮ್ಮ ಕೆ. ತಿಪ್ಪಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು, ಡಾ|| ಅಮೃತಾ ದೇಶಪಾಂಡೆರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಡಾ|| ರಾಜು ಬಿ. ರಾಂಪುರೆ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.