ಕಲಬುರ್ಗಿ, ಜು.೧೪- ಲಕ್ಷಾಂತರ ಜನರಲ್ಲಿ ಒಬ್ಬರಿಗೆ ಮಾತ್ರ ಸ್ಟಾಂಡಿಲೋಎಪಿಫೈಸಿಯಲ್ ಡಿಸ್ಥಾಸಿಯಾ ಎಂಬ ಹಿಪ್ ಜಾಯಿಂಟ್ (ಸೊಂಟದ ಕೀಲು ನೋವು) ಕಾಯಿಲೆಯಿಂದ ಬಳಲುತ್ತಿದ್ದ ಯುವಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಹಾಗೂ ಆರ್ಥೋಪೆಡಿಕ್ಸ್ ತಜ್ಞ ವೈದ್ಯ ಡಾ. ಆದಿತ್ಯ ಕಾಜಾ ಅವರು ಹೇಳಿದರು.
ಆಸ್ಪತ್ರೆಯಲ್ಲಿ ಭಾನುವಾರ ಗುಣಮುಖವಾದ ಯುವಕನೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಪ್ ಜಾಯಿಂಟ್ ಎಂಬ ಅಪರೂಪದ ದ್ವಿಪಾರ್ಶೀಯ ಸ್ಪಾಂಡಿಲೋಎಪಿಫೈಸಿಯಲ್ ಡಿಸ್ಟಾಸಿಯಾ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯು ಹಲವು ವರ್ಷಗಳಿಂದ ತೀವ್ರ ನೋವು, ನಡೆಯಲು ತೊಂದರೆ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಸಂಕಷ್ಟ ಅನುಭವಿಸುತ್ತಿದ್ದರು. ಈ ಕಾಯಿಲೆ ಸುಮಾರು ಒಂದು ಲಕ್ಷದಿಂದ ಎರಡು ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಕಂಡುಬರುವ ಅಪರೂಪದ ಕಾಯಿಲೆಯಾಗಿದೆ ಎಂದರು.
ಚಿಕಿತ್ಸೆಗಾಗಿ ರೋಗಿಯು ಕಲಬುರ್ಗಿ, ಸೊಲ್ಲಾಪುರ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರೂ, ಸ್ಥಳೀಯವಾಗಿ ಈ ರೀತಿಯ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಮುಂಬೈನಿAದ ತಜ್ಞ ವೈದ್ಯರನ್ನು ಕರೆಸಿ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂಬ ಸಲಹೆಯನ್ನೂ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸ್ನೇಹಿತರ ಸಲಹೆಯ ಮೇರೆಗೆ ರೋಗಿಯು ಆದಿತ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು ಎಂದು ರೋಗಿಯು ತಿಳಿಸಿದ್ದರು. ನಂತರ ನಮ್ಮ ನೂರಿತ ವೈದ್ಯರ ತಂಡ ರೋಗಿಯನ್ನು ಸಮಗ್ರವಾಗಿ ಪರೀಕ್ಷಿಸಿ, ರೋಗವನ್ನು ಪತ್ತೆಹಚ್ಚಲಾಯಿತು ಸರಿಯಾದ ರೋಗನಿರ್ಣಯ ಮಾಡಿ ಚಿಕಿತ್ಸೆಯ ಯೋಜನೆ ರೂಪಿಸಿದರು ಎಂದು ಅವರು ತಿಳಿಸಿದರು.
ರೋಗಿಯ ಎರಡೂ ಜಾಯಿಂಟ್‌ಗಳು ಹಾನಿಗೊಳಗಾಗಿದ್ದರಿಂದ ಮೊದಲು ಹೆಚ್ಚು ಸಮಸ್ಯೆ ಇದ್ದ ಎಡಭಾಗದ ಹಿಪ್ ಜಾಯಿಂಟ್ ಅಕ್ಟೋಬರ್ ತಿಂಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ರೋಗಿ ಉತ್ತಮವಾಗಿ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಬಲಭಾಗದ ಹಿಪ್ ಜಾಯಿಂಟಗಳೂ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಎರಡೂ ಹಿಪ್ ಜಾಯಿಂಟ್‌ಗಳ ಟೋಟಲ್ ಹಿಪ್ ರಿಪ್ಲೇಸ್ಟೆಂಟ್ ಯಶಸ್ವಿಯಾಗಿ ನೆರವೇರಿದ್ದು, ಪ್ರಸ್ತುತ ರೋಗಿಯು ನೋವಿನಿಂದ ಮುಕ್ತನಾಗಿ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ ಎಂದುಅವರು ತಿಳಿಸಿದರು.
ಮೂಳೆ ಮತ್ತು ಸಂಧಿ ಚಿಕಿತ್ಸಾ ಕ್ಷೇತ್ರದಲ್ಲಿ ತಮ್ಮದೇ ಆದ ಭಾವ ಮೂಡಿಸಿರುವ ಮೂಳೆ ಕಲ್ಲ ಡಾ. ಆದಿತ್ಯ ಅವರು ದೇಶ-ವಿದೇಶಗಳಲ್ಲಿ ಪಡೆದ ಅನುಭವದ ಮೂಲಕ ರೋಗಿಗಳಿಗೆ ಅತ್ಯಾಧುನಿಕ ಮತ್ತು ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ. ಎಂ.ಎಸ್. (ಆರ್ಥೋಸೆಡಿಕ್ಸ್) ಪದವಿ ಪೂರ್ಣಗೊಳಿಸಿದ ಬಳಿಕ, ಡಾ. ಅದಿತ್ಯ ಅವರು ಹೈದರಾಬಾದಲ್ಲಿ ಪಡೆದು ಆಧುನಿಕ ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳನ್ನು ಅಧ್ಯಯನ ಮಾಡಿದರು. ಅನಂತರ ಅವರು ಯುನೈಟೆಡ್ ಕಿಂಗಮ್ (ಯುಕೆ) ನಲ್ಲಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಅಂತರರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೇವೆ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಪರಿಣತಿ ಪಡೆದರು. ವಿದೇಶದಲ್ಲಿ ಪಡೆದ ಜ್ಞಾನ ಮತ್ತು ಅನುಭವವನ್ನು ಈಗ ತಮ್ಮ ತವರು ಭಾಗದ ಜನರಿಗೆ ತಲುಪಿಸುವ ಉದ್ದೇಶದಿಂದ ಅತ್ಯಾಧುನಿಕ ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿದ್ದಾರೆ. ಯುವಕನ ಚಿಕಿತ್ಸೆಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು ಎಂದು ಅವರು ಹೇಳಿದರು.
ಮೂಳೆ ಮುರಿತ, ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ, ಕ್ರೀಡಾ ಗಾಯಗಳು ಹಾಗೂ ಸಂಧಿವಾತ ಸಮಸ್ಯೆಗಳ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಡಾ. ಆದಿತ್ಯ ಅವರು ರೋಗಿ ಕೇಂದ್ರಿತ ಚಿಕಿತ್ಸೆಗೆ ಆದ್ಯತೆ ನೀಡುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಚಿಕಿತ್ಸೆ ಕಲಬುರಗಿ ಜಿಲ್ಲೆಯ ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು” ಎಂಬ ಧೈಯದೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಇಂತಹ ಕಿರಿಯ ವಯಸ್ಸಿನ ರೋಗಿಗಳಲ್ಲಿ ಹಿಪ್ ರಿಪ್ಲೇಸೈಂಟ್ ಶಸ್ತ್ರಚಿಕಿತ್ಸೆ ಮಾಡುವುದು ಸುಲಭದ ನಿರ್ಧಾರವಲ್ಲ. ಆದರೆ ರೋಗಿಯ ಜೀವನಮಟ್ಟ ತೀವ್ರವಾಗಿ ಕುಸಿದಿದ್ದು, ನಿರಂತರ ನೋವು ಮತ್ತು ನಡೆಯಲು ತೊಂದರೆ ಅನುಭವಿಸುತ್ತಿದ್ದ ಕಾರಣ ಇಂಗ್ಲೆAಡ್‌ನ ಹಿರಿಯ ತಜ್ಞ ವೈದ್ಯರೊಂದಿಗೆ ಸಮಾಲೋಚನ ನಡೆಸಿದ ಬಳಿಕ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು. ಇದೀಗ ರೋಗಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಬಾಲ್ಯಾವಸ್ಥೆಯಲ್ಲಿಯೇ ಈ ಕಾಯಿಲೆಯ ಲಕ್ಷಣಗಳು ಕಂಡುಬರುತ್ತವೆ. ನಡೆಯುವಾಗ ಸಮಸ್ಯೆ ಉದ್ಭವಿಸುತ್ತದೆ ಎಂದು ಹೇಳಿದ ಅವರು, ಯುವಕನ ಚಿಕಿತ್ಸೆಗೆ ಆಸ್ಪತ್ರೆಯಿಂದ ೪೦,೦೦೦ರೂ.ಗಳನ್ನು ಮಾತ್ರ ಪಡೆಯಲಾಗಿದೆ. ಉಳಿದಂತೆ ಇನ್‌ಫ್ಲಾö್ಯಂಟ್ ಚೆನ್ನೆöÊಯಿಂದ ಬರಬೇಕು. ಆ ವೆಚ್ಚವನ್ನು ಯುವಕ ಭರಿಸಿದ್ದಾರೆ ಎಂದು ತಿಳಿಸಿದರು.
ರೋಗಿಗಳು ಸಾಮಾನ್ಯವಾಗಿ ಸೊಂಟ ನೋವು, ಬೆನ್ನು ನೋವು, ನಡೆಯಲು ತೊಂದರೆ, ಕೀಲುಗಳ ಬಿಗಿತ ಹಾಗೂ ಕಡಿಮೆ ಎತ್ತರದಂತಹ ಲಕ್ಷಣಗಳನ್ನು ಅನುಭವಿಸಬಹುದು. ಕೆಲವರಲ್ಲಿ ವಯಸ್ಸಿಗೆ ಮುನ್ನವೇ ಕೀಲು ಸವತದ ಸಮಸ್ಯೆಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬಾಲ್ಯದಲ್ಲಿಯೇ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ಆರಂಭಿಸಿದರೆ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಗಂಭೀರ ಸಮಸ್ಯೆಗಳನ್ನು ತಡೆಗಟ್ಟಬಹುದು. ಆದ್ದರಿಂದ ಮಕ್ಕಳಲ್ಲಿ ನಡೆಯುವವ ವಿಧಾನದಲ್ಲಿ ಬದಲಾವಣೆ, ಆಗಾಗ್ಗೆ ಕಾಲು ಅಥವಾ ಸೊಂಟ ನೋವು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ತಕ್ಷಣ ಮೂಳೆ ತಜ್ಞರನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕಾಂಬಳೆ, ಡಾ. ಆದಿತ್ಯ ಮುಂತಾದವರು ಉಪಸ್ಥಿತರಿದ್ದರು.