ಕಲಬುರ್ಗಿ, ಜೂ.೯- ಕೇಂದ್ರ ಬಿಜೆಪಿ ಸರ್ಕಾರ ಗ್ಯಾಸ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಮಂಗಳವಾರ ನಗರದ ಅನ್ನಪೂರ್ಣ ಕ್ರಾಸ್ ಬಳಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮರಾವ್ ಟಿ.ಟಿ., ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ್ ರಾಠೋಡ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ್ ಹರವಾಳ, ಡಾ. ಕಿರಣ ದೇಶಮುಖ, ರಾಜಗೋಪಾಲ ರೆಡ್ಡಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ರೇಣುಕಾ ಸಿಂಗೆ, ಈರಣ್ಣ ಝಳಕಿ, ಶಕೀಲ್ ಸರಡಗಿ, ಶಿವು ಹೊನಗುಂಟಿ, ಧರ್ಮರಾಜ್ ಹೇರೂರ್, ಕಾರ್ತಿಕ ನಾಟಿಕಾರ್, ಪರಶುರಾಮ್ ನಾಟೇಕರ್, ಫಾರುಕ್ ಮಾನಿಯಾಲ್, ನಯಿಂ ಖಾನ್, ಫಾರೂಕ್ ಪಟೇಲ್ ಮುದುಬಾಳ್, ಮೋದಿನ್ ಪಟೇಲ್ ಅಣಬಿ, ಶಿವಾನಂದ ತೋರವಿ, ಶ್ರೀಹರಿ ಜಾದವ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.