ಚಿತ್ತಾಪುರದಲ್ಲಿ ಕಾಶಿ ಗಂಗಾ ಆರತಿ ವೈಭವ..! ಅಧಿಕ ಮಾಸದ ನಿಮಿತ್ಯ ೫೦೧ ದಂಪತಿಗಳಿಗೆ ಸಹಸ್ರ ಲಿಂಗಾರ್ಚನೆ:

 

ಚಿತ್ತಾಪುರ, ಮೇ.೨೮- ಪ್ರಪಂಚದ ಸೃಷ್ಟಿಯ ನಿಯಮವೇ ಬದಲಾವಣೆ. ಸಮಾಜದಲ್ಲಿ ಯಾವುದು ಇದ್ದ ಹಾಗೆ ಇರುವುದಿಲ್ಲ, ನಿರಂತರವಾಗಿ ಪರಿವರ್ತನೆ ಹೊಂದುತ್ತಿರುತ್ತದೆ. ಈ ಅನಿವಾರ್ಯ ಬದಲಾವಣೆಯನ್ನು ಮನುಷ್ಯ ಅರಿಯಬೇಕು ಎಂದು ತಾಳಿಕೋಟಿಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ನುಡಿದರು.

ಪಟ್ಟಣದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವೇದಮೂರ್ತಿ ಕರಬಸಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಸೋಮವಾರ ನಡೆದ ಅಧಿಕ ಮಾಸದ ವಿಶೇಷ ಪೂಜಾ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಬದುಕು ಸಾವು-ನೋವುಗಳ ಸಮ್ಮಿಲನ. ಅನಿವಾರ್ಯವಾದ ಸಾವು ಮತ್ತು ಬದುಕಿನ ಕಷ್ಟಗಳನ್ನು ಕಂಡು ಮನುಷ್ಯ ಕಂಗೆಡಬಾರದು. ಧೈರ್ಯದಿಂದ ನಿಲ್ಲಬೇಕು. ಬಾಳಿನ ಕಹಿ ಘಟನೆಗಳನ್ನು, ನೋವಿನ ನೆನಪುಗಳನ್ನು ಮರೆತು, ಒಳ್ಳೆಯದನ್ನು ಮಾತ್ರ ಮನದಲ್ಲಿ ಇರಿಸಿಕೊಂಡಾಗ ಮಾತ್ರ ಮನಸ್ಸು ಹಗುರವಾಗುತ್ತದೆ, ಶಾಂತಿ ನೆಲೆಸುತ್ತದೆ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆಯೇ ಸುಖದ ಮೂಲ ಎಂಬುದನ್ನು ಒತ್ತಿ ಹೇಳಿದರು.

ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಶ್ರೀ ಸಿದ್ದಲಿಂಗ ದೇವರ ವಿಚಾರಗಳು ನಾಡಿನೆಲ್ಲೆಡೆ ಪಸರಿಸಿವೆ. ಇಂತಹ ಅದ್ಭುತ ಕಾರ್ಯಕ್ರಮವನ್ನು ಅಲ್ಪಾವಧಿಯಲ್ಲಿ ಯಶಸ್ವಿಯಾಗಿ ಆಯೋಜಿಸಿದ ಶಾಸ್ತ್ರೀಗಳ ಸೇವಾ ನಿಷ್ಠೆ ಅಭಿನಂದನೀಯ ಎಂದು ಬಣ್ಣಿಸಿದರು.

ವಿಶೇಷ ಆಕರ್ಷಣೆಯಾಗಿದ್ದ ೫೦೧ ದಂಪತಿಗಳ ಸಹಸ್ರ ಲಿಂಗಾರ್ಚನೆ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವ, ಹೊನ್ನಕಿರಣಗಿ ಮಠದ ಶಾಲಾ ವಿದ್ಯಾರ್ಥಿನಿಯರಿಂದ ಪ್ರದರ್ಶಿತವಾದ ‘ಕಾಶಿ ಗಂಗಾ ಆರತಿ’ ನೆರೆದಿದ್ದ ಭಕ್ತರ ಕಣ್ಮನ ಸೆಳೆಯಿತು.

ಸೇಡಂ ಶಿವಶಂಕರ ಮಠದ ಶಿವಶಂಕರ ಶಿವಾಚಾರ್ಯರು, ಹೊನ್ನಕಿರಣಗಿ ಚಂದ್ರಗುAಡ ಶಿವಾಚಾರ್ಯರು, ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಅಳ್ಳೋಳ್ಳಿ ಸಂಗಮನಾಥ ದೇವರು, ದಂಡೋತಿ ಬಾಲಯೋಗಿನಿ ಜಯಶ್ರೀ ಮಾತಾಜಿ, ದಿಗ್ಗಾಂವ್ ಕಂಚಗಾರಹಳ್ಳದ ಮಲ್ಲಯ್ಯಸ್ವಾಮಿ ಸ್ಥಾವರಮಠ, ಮಾಲಗತ್ತಿಯ ಡಾ. ಚನ್ನಬಸವ ಶರಣರು ಸಾನಿಧ್ಯ ವಹಿಸಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ನಾಗರಾಜ್ ಭಂಕಲಗಿ, ದೇವಸ್ಥಾನದ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ್ ದೇಶಮುಖ್, ಪ್ರಮುಖರಾದ ಶಿವಶರಣಯ್ಯಸ್ವಾಮಿ ಪುರದಯ್ಯನಮಠ, ಕರಣಯ್ಯ ಶಾಸ್ತ್ರಿಗಳು ಸ್ಥಾವರಮಠ, ಸೋಮನಾಥ ಶಾಸ್ತ್ರಿಗಳು, ಬಸವರಾಜ್ ಬೊಮ್ಮನಳ್ಳಿ, ನಾಗರಾಜ್ ರೇಷ್ಮಿ, ರಮೇಶ್ ಬೊಮ್ಮನಳ್ಳಿ, ದೇವಿಂದ್ರಪ್ಪ ಸಜ್ಜನಶೆಟ್ಟಿ, ದಶರಥ ದೊಡ್ಡಮನಿ, ಸುರೇಶ್ ಅಲ್ಲೂರ್, ರಾಜಶೇಖರ್ ಸಿಂಪಿ, ಮಾರುತಿರಾವ್ ಪೂಜಾರಿ, ಬಸವರಾಜ್ ಮಾಡಗಿ, ಅಂಬರೀಷ್ ಸುಲೇಗಾಂವ್ ಮುಂತಾದವರು ಉಪಸ್ಥಿತರಿದ್ದರು.

ಶಿವಕುಮಾರ ಹಿರೇಮಠ, ವೃಷಬೇಂದ್ರ ಶಾಸ್ತ್ರೀಗಳು, ತೋಟಯ್ಯ ಶಾಸ್ತ್ರೀಗಳು, ವಿನೋದ್ ಶಾಸ್ತ್ರಿ ಮಠಪತಿ ಧಾರ್ಮಿಕ ವಿಧಿವಿಧಾನಗಳು ನೆರವೇರಿಸಿಕೊಟ್ಟರು. ಅನಿತಾ ಡಾ. ಮಹಾಂತಗೌಡ ಪಾಟೀಕ್, ಸುವರ್ಣ ಅನಿಲಕುಮಾರ್ ವಡ್ಡಡಗಿ, ಪ್ರಿಯಾಂಕಾ ರಮೇಶ್ ಹಡಪದ, ಮೀನಾಕ್ಷಿ ರಾಜಶೇಖರ ಯದಲಾಪೂರ್, ಸವಿತಾ ಜಗನ್ನಾಥ ರಾಠೋಡ, ಬಸವರಾಜ್ ಪೋಲಿಸ್ ಪಾಟೀಲ್, ಜಯಲಕ್ಷ್ಮೀ ಶಿವರೆಡ್ಡಿಗೌಡ ಪಾಲಪ ಮತ್ತು ಸೈಯದ್ ಅಮೀನ್ ಉದ್ದೀನ್ ಅವರು ತುಲಾಭಾರ ಮತ್ತು ಬಾಗಿನ ಸೇವೆಗಳನ್ನು ಸಲ್ಲಿಸಿದರು.

ವೀರೇಶ್ ಶಾಸ್ತ್ರಿಗಳು ನಿರೂಪಣೆ ಮಾಡಿದರು.

Share This Article
Leave a Comment