ಕಲಬುರ್ಗಿ, ಮೇ.೧೭- ಪತ್ರಾದಲ್ಲಿದ್ದ ಕಿರಾಣಿ ಅಂಗಡಿಯ ಸಾಮಾನುಗಳನ್ನು ಪತ್ರಾಗಳನ್ನು ಮುರಿದು ಕಳ್ಳತನ ಮಾಡಿದ ಘಟನೆ ನಗರದ ಬಿದ್ದಾಪುರ ಕಾಲೋನಿಯ ಹನುಮಾನ್ ಗುಡಿ ಪಕ್ಕದಲ್ಲಿ ವರದಿಯಾಘಿದೆ. ಕೋಟನೂರ್(ಡಿ) ಗ್ರಾಮದ ಕಿರಾಣಿ ವ್ಯಾಪಾರಿ ವಿನೋದಕುಮಾರ್ ತಂದೆ ಈಶ್ವರ್ ಪಟ್ನಾಯಕ್ ಅವರ ಅಂಗಡಿಯಲ್ಲಿಯೇ ಕಳ್ಳತನವಾಗಿದೆ.
ಪತ್ರಾಸನ ನಟ್ ಬೋಲ್ಟ್ಗಳನ್ನು ಬಿಚ್ಚಿ, ಪತ್ರಾಗಳನ್ನು ಮುರಿದು ಒಳಗೆ ಹೋದ ಕಳ್ಳರು ನಾಲ್ಕು ಬಾಕ್ಸ್ ಗೋಲ್ಡ್ ಫ್ಲಾö್ಯಕ್ ಲೈಟ್ ಸಿಗರೇಟ್, ಮೂರು ಬಾಕ್ಸ್ ಗೋಲ್ಡ್ ಪ್ಯಾಕ್ ಸ್ಮಾಲ್ ಸಿಗರೇಟರಿ, ಎರಡು ಬಾಕ್ಸ್ ಪ್ಲೇಯರ್ಸ್ ಸಿಗರೇಟ್, ಮೂರು ಬಾಕ್ಸ್ ಬ್ರಿಸ್ಟಲ್ ಸಿಗರೇಟ್, ಬಿಗ್ ಆರ್‌ಎಂಡಿಯ ಐದು ಬಾಕ್ಸ್ಗಳು, ಸ್ಮಾಲ್ ಆರ್‌ಎಂಡಿಯ ಐದು ಬಾಕ್ಸ್ಗಳು ಹಾಗೂ ೨೦೦ರೂ.ಗಳು, ವಿಮಲ್ ಗುಟಕಾದ ಐದು ಪ್ಯಾಕೆಟ್‌ಗಳು, ಆರ್‌ಆರ್ ಗುಟಕಾದ ಎರಡು ಪ್ಯಾಕೆಟ್‌ಗಳು, ಲೂಸ್ ಸಿಗರೇಟ್‌ನ ಐದು ಬಾಕ್ಸ್ಗಳನ್ನು ದೋಚಿದ್ದಾರೆ ಎಂದು ದೂರು ಸಲ್ಲಿಸಿದ್ದು, ಈ ಕುರಿತು ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.