ಕಲಬುರ್ಗಿ, ಮೇ.೧೫- ಜಿಲ್ಲೆಯ ಕೆರೂರ್ ಗ್ರಾಮದ ಸರ್ವೆ ನಂಬರ್ ೫೫/೮ರಲ್ಲಿನ ಒಂದು ಎಕರೆ ಜಮೀನಿನಲ್ಲಿ ಶಾಸಕ ಬಸವರಾಜ್ ಮತ್ತಿಮೂಡ್ ಅವರ ಪುತ್ರ ಆಕಾಶ್ ಅವರ ಹೆಸರಿನಲ್ಲಿದ್ದು, ಅಕ್ರಮ ಕಲ್ಲುಗಣಿಗಾರಿಕೆಗೆ ಸಂಬಂಧಿಸಿದಂತೆ ಐದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಜೆಎಂಎಫ್‌ಸಿಯಲ್ಲಿ ದೂರು ದಾಖಲಿಸಿದ್ದು, ಕಳೆದ ಏಪ್ರಿಲ್ ೨೩ರಂದು ವಿಚಾರಣೆ ಕೈಗೊಂಡಿದ್ದು, ಆಕಾಶ್ ಹಾಜರಾಗಿಲ್ಲ ಎಂದು ಸಮಾಜ ಸೇವೆಕ ರಾಮ್ ತಂದೆ ಬಾಬು ರಾಠೋಡ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದರೂ ಸಹ ಸದರಿ ಜಮೀನು ಅತೀಕ ಪಾಶಾ ಜುನೇದಿ ತಂದೆ ಫೀರಪಾಶಾ ಜುನೇದಿ ಇವರಿಗೆ ಮಾರಾಟ ಮಾಡಿದ್ದು ಅದರ ನೋಂದಣಿ ಸಂಖ್ಯೆ ಜಿಎಲ್ ಬಿ-೧-೧೮೮೭೯-೨೦೨೪-೨೫ ದಿನಾಂಕ ೨೨-೦೧-೨೦೨೫. ಇರುತ್ತದೆ. ಇದು ಕಾನೂನು ಬಾಹಿರವಾಗಿದೆ ಎಂದು ಅವರು ದೂರಿದರು.
ಅತೀಕ ಪಾಶಾ ಜುನೇದಿ ಇತನು ಸೋಮಶೇಖರ್ ತಂದೆ ಬಸವರಾಜ್ ಮೇತ್ರಿ ಅವರಿಗೆ ಮಾರಾಟ ಮಾಡಿದ್ದು ಅದರ ನೋಂದಣಿ ಸಂಖ್ಯೆ ಜಿಎಲಬಿ-೧-೧೫೦೫೯-೨೦೨೫-೨೬ ದಿನಾಂಕ ೧೭-೧೦-೨೦೨೫ ಇರುತ್ತದೆ. ಈ ರೀತಿಯಾಗಿ ತಮಗೆ ಬೇಕಾದ ವ್ಯಕ್ತಿಗಳ ಹೆಸರಿಗೆ ಸದರಿ ಜಮೀನು ವರ್ಗಾವಣೆ ಮಾಡುತ್ತಾ ನ್ಯಾಯಾಲಯದಲ್ಲಿನ ಪ್ರಕರಣ ಹಾಗೂ ಲೋಕಾಯುಕ್ತ ಪ್ರಕರಣ ಚಾಲ್ತಿಯಲ್ಲಿದೆ. ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಿಗೂ ಸಹ ಅರ್ಜಿ ಸಲ್ಲಿಸಿರುವೆ. ಇಷ್ಟು ಇದ್ದರೂ ಸಹಿತ ಸದರಿ ಜಮೀನು ತಮ್ಮ ಲಾಭಕ್ಕಾಗಿ ತಮಗೆ ಬೇಕಾದವರ ಹೆಸರಿಗೆ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿ ತನ್ನ ಮಗನಿಗೆ ಉಳಿಸುವ ಸಲುವಾಗಿ ಈ ರೀತಿಯಾಗಿ ಜಮೀನು ವರ್ಗಾವಣೆ ಮಾಡಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಇದರಲ್ಲಿ ನೋಂದಣಾಧಿಕಾರಿಗಳು ಕಾನೂನು ಬಾಹಿರವಾಗಿ ಸದರಿಯವರಿಗೆ ಪ್ರೋತ್ಸಾಹಿಸಿದ್ದು ಅವರ ಮೇಲೆ ಕೂಡಾ ಕಾನೂನು ಕ್ರಮ ಜರುಗಿಸಬೇಕು. ಸದರಿಯವರ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ನಡೆದಿರುತ್ತದೆ. ಸಂಬAದಪಟ್ಟ ಪೊಲೀಸ್ ಠಾಣೆಯವರು ಬಸವರಾಜ್ ಮತ್ತಿಮೂಡ್ ಅವರ ಮನೆಗೆ ಹೋದರೆ ಇದು ನಮ್ಮ ವಿಳಾಸದ ಇರುವುದಿಲ್ಲ ಎಂದು ಹೇಳಿ ಅವರಿಗೆ ವಾಪಾಸ ಕಳಿಸಿದ್ದಾರೆ. ರಾಜಕಾಣಿಗಳಿಗೆ ಒಂದು ನ್ಯಾಯ ಮತ್ತು ಜನ ಸಾಮಾನ್ಯರಿಗೆ ಒಂದು ನ್ಯಾಯ. ಇದರ ಬಗ್ಗೆ ಕೂಲಂಕುಶವಾಗಿ ತನಿಖೆ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.