ಕಲಬುರ್ಗಿ, ಮೇ.೧೫- ಲಾರಿ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಆಳಂದ ಚೆಕ್ ಪೋಸ್ಟ್ ಹತ್ತಿರ ಬೆಳಿಗ್ಗೆ ೮ಗಂಟೆ ಸುಮಾರಿಗೆ ಸಂಭವಿಸಿದೆ. ಮೃತಳನ್ನು ನಗರದ ಎಂಎಸ್‌ಕೆಮಿಲ್ ಡಬರಾಬಾದ್ ನಿವಾಸಿ ಖೈರುನಬಿ ಗಂಡ ಚಾಂದ್ ಪಟೇಲ್ (೫೩) ಎಂದು ಗುರುತಿಸಲಾಗಿದೆ.
ಆಳಂದ ಚೆಕ್ ಪೋಸ್ಟ್ ಬಳಿ ಇರುವ ಉಪ್ಪಿಟ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಎಂದಿನAತೆ ಬೆಳಿಗ್ಗೆ ಸಹ ಕೆಲಸಕ್ಕೆ ಹೋಗಲೆಂದು ಆಳಂದ ಚೆಕ್ ಪೋಸ್ಟ್ ಬಳಿ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಸಂಚಾರಿ ಪೊಲೀಸ್ ಠಾಣೆ-೨ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ