ಜೇವರ್ಗಿ, ಮೇ.೧೭- ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ದಂಧೆಗೆ ತಕ್ಷಣವೇ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು, ಬಳಿಕ ತಹಸಿಲ್ದಾರ್ ಮೂಲಕ ಅಬಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಗಲಾಟೆ ಮಾಡುತ್ತಿರುವುದರಿಂದ ಪ್ರತಿಭಟನೆಯ ನೇತೃತ್ವ ವಹಿಸಿ ತಾಲ್ಲೂಕು ಅಧ್ಯಕ್ಷರು ಮಾತನಾಡಿ, ಅಕ್ರಮ ಮದ್ಯ ಮಾರಾಟದಿಂದ ಸಾವಿರಾರು ಬಡ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಸಮಾಜದ ಆಂದೋಲ, ಸ್ವಾಸ್ಥ್ಯ ಕೆಡಿಸುತ್ತಿರುವ ಈ ದಂಧೆಗೆ ಯಡ್ರಾಮಿ ಪಟ್ಟಣ ಸೇರಿದಂತೆ ಅಧಿಕಾರಿಗಳು ಕೂಡಲೇ ಬ್ರೇಕ್ ಹಾಕಬೇಕು. ತಾಲ್ಲೂಕಿನ ೬೨ ಹಳ್ಳಿಗಳು ಹಾಕಬೇಕು ಎಂದು ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಸಾಗರ್ ಅವರು ಮಾತನಾಡುತ್ತಿರುವಾಗ ಮಾತಿನ ಚಕಮಕಿ ಉಂಟಾಯಿತು.
ತಾಲ್ಲೂಕಿನಲ್ಲಿ ಯುವಕರು ಕುಡಿತದ ದಾಸರಾಗಿದ್ದಾಎ. ತಾಲ್ಲೂಕು ಆಡಳಿತವು ಸಂಪೂರ್ಣವಾಗಿ ಕೈಕಟ್ಟಿಕೊಂಡು ಕುಳಿತಿದೆ. ಹಳ್ಳಿಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಶಾಪ್ ಹಾಗೂ ಡಾಬಾಗಳೇ ಅಕ್ರಮ ಮದ್ಯದ ಅಡ್ಡೆಗಳಾಗಿವೆ. ಭವಿಷ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಕೂಡಿಟ್ಟ ಹಣ, ಹೆಂಡತಿಯ ಚಿನ್ನಾಭರಣ ಮಾರಿ ಕುಡಿದು ಒಂದುಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರ ವಿರುದ್ಧ ಧ್ವನಿ ಎತ್ತಿದ ಹೋರಾಟಗಾರರ ಮೇಲೆಯೇ ಇತ್ತೀಚೆಗೆ ಹಲ್ಲೆಗಳು ನಡೆಯುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಸ್ಥಳಕ್ಕೆ ಬಂದ ಅಬಕಾರಿ ಅಧಿಕಾರಿಯ ಮುಂದೆಯೇ ಅಕ್ರಮ ಮದ್ಯದ ಬಾಟಲಿಗಳನ್ನು ಬೈಕ್‌ನೊಂದಿಗೆ ವಶಪಡಿಸಿಕೊಂಡು ಹೋರಾಟಗಾರರು ಪ್ರದರ್ಶಿಸಿದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಪರಮಾನಂದ್ ಯಲಗೋಡ್, ಸುರೇರ್ಶ ಗೆಜ್ಜೆ, ಮಹೇಶ್ ಅಂಬರಿಕೇಡ್, ಸಿದ್ದನಗೌಡ ಯಂಕAಚಿ, ರವಿ ರಾಮುನೂರ್, ರಾಕೇಶ್ ಗಂಗಾಕರ್, ಸಿದ್ದು ಯಲಗೋಡ, ಮೈಲಾರಿ, ಉಮೇಶ್ ನಾಗರಹಳ್ಳಿ, ಸೋಮರಾಯ್ ಹೊಸಮನಿ, ಗಿರೀಶ್ ಗುತ್ತೇದಾರ್, ಆಕಾಶ್ ಹಂಗರಗಿ ಕೆ., ಬಸವರಾಜ್ ಕಲಕೇರಿ, ಸೋಮಣ್ಣ ಹೊಸಮನಿ, ಗಂಗಕರ್, ಚಂದ್ರು ಶಿವಪುರು, ಮಹೇಶ್ ಅಂಬೆರಕೇಡ, ಸೂರ್ಯಕಾಂತ್ ದೊಡ್ಡಮನಿ, ಸಿದ್ದನಗೌಡ ಯಂಕAಚಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.