ಪ್ರೊ. ಕೃಷ್ಣಪ್ಪರ ಜನ್ಮದಿನ: ಕಲಬುರ್ಗಿಯಲ್ಲಿ ಅನ್ನಸಂತರ್ಪಣೆ

 

ಕಲಬುರ್ಗಿ, ಜೂ.೯- ದಲಿತ ಚಳುವಳಿಯ ಪಿತಾಮಹ ಹಾಗೂ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಸಂಸ್ಥಾಪಕ ಪ್ರೋ. ಬಿ. ಕೃಷ್ಣಪ್ಪ ಅವರ ೮೮ನೇ ಜನ್ಮದಿನದ ಅಂಗವಾಗಿ ಮುಖಂಡರಾದ ಹನುಮಂತ ಕಡೆಹಳ್ಳಿ ಹಾಗೂ ರುಕ್ಕಪ್ಪ ಟಿ. ಕಾಂಬಳೆ ಅವರ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಜರುಗಿತು.

ನಗರದ ಡಾ. ಬಾಬು ಜಗಜೀವನ್ ರಾಮ್ ಪುತ್ತಳಿ ಎದುರು ನಡೆದ ಕಾರ್ಯಕ್ರಮಕ್ಕೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ತಾರಫೈಲ್ ಅವರು ಚಾಲನೆ ನೀಡಿ ಮಾತನಾಡಿ, ಪ್ರೋ. ಬಿ. ಕೃಷ್ಣಪ್ಪ ಅವರು ದಲಿತ ಸಮುದಾಯದ ಹಕ್ಕುಗಳಿಗಾಗಿ ನಡೆಸಿದ ಹೋರಾಟ, ಸಾಮಾಜಿಕ ನ್ಯಾಯಕ್ಕಾಗಿ ನೀಡಿದ ಕೊಡುಗೆ ಹಾಗೂ ಶೋಷಿತ ವರ್ಗಗಳ ಏಳಿಗೆಗಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಯಿತು. ಅವರ ಆದರ್ಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಡಾ. ದತ್ತು ಭಾಸಗಿ, ಚಂದ್ರಕಾAತ ನಾಟೇಕರ್, ಶಿವಶರಣ ಲಿಂಗದಳ್ಳಿ, ರಮೇಶ್ ಕಟ್ಟಿಮನಿ, ರಿಯಲ್ ಶಾಂತು ತಾರಾಫೈಲ್, ರೇವಣಸಿದ್ದ ಕಟ್ಟಿಮನಿ, ಮೈಲಾರಿ ರತ್ನಡಗಿ, ಶ್ರೀಮಂತ ಬಂಡಾರಿ, ರಮೇಶ್ ಚಿತ್ತಾಪುರ, ರವಿ ಸೇರಿದಂತೆ ಅನೇಕ ಗಣ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಅನ್ನ ಸಂತರ್ಪಣೆ ಮೂಲಕ ನೂರಾರು ಜನರಿಗೆ ಊಟ ವಿತರಿಸಿ, ಪ್ರೋ. ಬಿ. ಕೃಷ್ಣಪ್ಪ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

Share This Article
Leave a Comment