ಜೇವರ್ಗಿ, ಮೇ.೧೧- ಇದೇ ಮೇ ೧೫,೧೬ ಮತ್ತು ೧೭ರಂದು ಪಟ್ಟಣದಲ್ಲಿ ಜರುಗಲಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೩೫ನೇ ಜಯಂತ್ಯುತ್ಸವ ಮತ್ತು ತಥಾಗತ ಗೌತಮ ಬುದ್ಧರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಸೂಕ್ತ ಪೋಲಿಸ್ ಬಂದೋಬಸ್ತ್ ಕಲ್ಪಿಸಬೇಕು ಎಂದು ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಪುಂಡಲೀಕ್ ಗಾಯಕವಾಡ್ ಅವರು ಮನವಿ ಮಾಡಿದರು.
ಈ ಕುರಿತು ಪಿಎಸ್‌ಐ ಗಜಾನಂದ್ ಬಿರಾದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಸೂಕ್ತ ಕ್ರಮಕ್ಕೆ ಕೋರಿದರು. ಈ ಸಂದರ್ಭದಲ್ಲಿ ಮಹಾದೇವ್ ಕೋಳಕರ್, ಸಿದ್ರಾಮ್ ಕಟ್ಟಿ, ವಿಶ್ವಾರಾಧ್ಯ ಮಾಯೆರ್, ರಾಯಪ್ಪ ಬಾರಿಗಿಡ, ಸಿದ್ದು ಕೆರೂರ್, ಸಿದ್ದು ಜನಿವಾರ್, ಭೀಮಾಶಂಕರ್ ಹರನಾಳ್ ಮುಂತಾದವರು ಉಪಸ್ಥಿತರಿದ್ದರು.