ಕನ್ನಡ ಭವನದಲ್ಲಿ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ ಹಿರಿಯ ಪತ್ರಕರ್ತರಿಗೆ ಭವ್ಯ ಸನ್ಮಾನ.

 

ಕಲಬುರ್ಗಿ, ಮೇ 5: ನಗರದ ಕನ್ನಡ ಭವನದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಜಯತೀರ್ಥ ಪಾಟೀಲ, ಶೇಷಮೂರ್ತಿ ಅವಧಾನಿ, ಭವಾನಿಸಿಂಗ್ ಠಾಕೂರ, ಹೆಚ್. ಶೇಷಗಿರಿ, ಡಿ. ಶಿವಲಿಂಗಪ್ಪ, ಹಣಮಂತರಾವ ಭೈರಾಮಡಗಿ, ಶಿವರಾಯ ದೊಡ್ಡನಿ, ದೇವೀಂದ್ರಪ್ಪ ಕಪನೂರ, ಬಸವರಾಜ ಅಡಿವೆಪ್ಪ ಚಿನಿವಾರ್, ದೇವೇಂದ್ರಪ್ಪ ಆವಂಟಿ, ಮೋಹಿಯುದ್ದಿನ್ ಪಾಷಾ, ವಿ.ಎನ್. ಮಲ್ಲಿಕಾರ್ಜುನ ಹಾಗೂ ಚಂದ್ರಕಾಂತ ಹಾವನೂರ್ ಅವರನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶರಣು ಪಪ್ಪಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆಯನ್ನು ಶ್ಲಾಘಿಸಿ, ಭಾಷೆ ಮತ್ತು ಸಾಹಿತ್ಯದ ಅಭಿವೃದ್ದಿಗೆ ಪತ್ರಕರ್ತರ ಕೊಡುಗೆ ಮಹತ್ತರವಾಗಿದೆ ಎಂದು ಅಭಿಪ್ರಾಯಪಟ್ಟರು.

Share This Article
Leave a Comment