ಮೇ 5 ರಂದು ಶ್ರೀ ಕಾಡಸಿದ್ದೇಶ್ವರ ಸನ್ನಿದಿ ಸುಕ್ಷೇತ್ರ ಕಾರಭೋಸಗಾದಲ್ಲಿ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ.

 

ಅಫಜಲಪೂರ: ತಾಲೂಕಿನ ಕಾರಭೋಸಗಾ ಗ್ರಾಮದಲ್ಲಿ ಮೇ 5 ರಂದು ಉಜ್ಜಯಿನಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.

ಶ್ರೀ ಕಾಡಸಿದ್ದೇಶ್ವರರ ದೈವಿ ಪುರುಷ, ತಪೋನಿಧಿ ಪೂಜ್ಯ ಶ್ರೀ ಲಕ್ಷ್ಮೀಪೂತ್ರ ಮುತ್ಯಾ ಅವರ ದಿವ್ಯ ನೇತೃತ್ವದಲ್ಲಿ, ಶ್ರೀಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ಶ್ರೀ 1008 ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಾಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 5 ರಂದು ಸಂಜೆ 4 ಗಂಟೆಗೆ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿನ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಲಿದೆ. ನಂತರ ಧಾರ್ಮಿಕ ಸಭೆ ನಡೆಯಲಿದೆ ಎಂದರು.

ಇದೇ ವೇಳೆ, ಮೇ 6ರಂದು ಬೆಳಿಗ್ಗೆ ಚಕ್ಕಡಿ ಗಾಡಿಗಳ ಸ್ಪರ್ಧೆ ಮತ್ತು ಮೇ 7ರಂದು ಟ್ರಾಕ್ಟರ್ ಜಗ್ಗುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎರಡು ವಿಭಾಗಗಳಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಎಲ್ಲಾ ಕಾಡಸಿದ್ದೇಶ್ವರ ಭಕ್ತರಿಗೆ ಅವರು ಮನವಿ ಮಾಡಿದ್ದಾರೆ.

Share This Article
Leave a Comment