ಕಲಬುರಗಿ: ಬಸವ ಜಯಂತಿ ಅಂಗವಾಗಿ ನಗರದಲ್ಲಿ ಬಸವ ಮಿತ್ರ ಮಂಡಳಿಯ ವತಿಯಿಂದ ಭವ್ಯ ಕಾರು ರ್ಯಾಲಿ ಆಯೋಜಿಸಲಾಗಿದ್ದು, ಶರಣಬಸವೇಶ್ವರ ದೇವಸ್ಥಾನ ಆವರಣದಿಂದ ಅದಕ್ಕೆ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.
ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ರ್ಯಾಲಿಗೆ ಚಾಲನೆ ನೀಡಿ, ಬಸವಣ್ಣನವರ ತತ್ವಗಳು ಸಮಾನತೆ, ಸಹಿಷ್ಣುತೆ ಮತ್ತು ಮಾನವೀಯತೆಯನ್ನು ಸಾರುವ ಮಹತ್ವವನ್ನು ಒತ್ತಿಹೇಳಿದರು. ಸಮಾಜದಲ್ಲಿ ಎಲ್ಲರೂ ಒಗ್ಗೂಡಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ರ್ಯಾಲಿಯಲ್ಲಿ ಬಸವ ಭಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಸವ ಜಯಂತಿಯ ಉತ್ಸಾಹವನ್ನು ವ್ಯಕ್ತಪಡಿಸಿದರು. ನಗರದೆಲ್ಲೆಡೆ ರ್ಯಾಲಿ ಸಂಚರಿಸಿ ಬಸವಣ್ಣನವರ ಸಂದೇಶವನ್ನು ಜನರಿಗೆ ತಲುಪಿಸಿತು.
ಈ ಸಂದರ್ಭದಲ್ಲಿ ಡಾ. ಶರಣಪ್ರಕಾಶ ಪಾಟೀಲ, ಬಿ.ಆರ್. ಪಾಟೀಲ, ಬಿ.ಜಿ. ಪಾಟೀಲ, ಬಸವರಾಜ ದೇಶಮುಖ, ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ಶಶೀಲ ನಮೋಶಿ, ಡಾ. ಅಜಯಸಿಂಗ್, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ದತ್ತಾತ್ರೇಯ ಪಾಟೀಲ ರೇವೂರ, ಚಂದು ಪಾಟೀಲ, ಪ್ರವೀಣ ಪಾಟೀಲ ಹರವಾಳ, ಅರುಣಕುಮಾರ್ ಎಂ.ವೈ. ಪಾಟೀಲ, ಅಮರನಾಥ ಪಾಟೀಲ, ಡಾ. ಕಿರಣ ದೇಶಮುಖ, ಶರಣು ಮೋದಿ, ಸಂತೋಷ ಪಾಟೀಲ ದುಧನಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಈ ಕಾರು ರ್ಯಾಲಿ ಮೂಲಕ ಬಸವಣ್ಣನವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ವ್ಯಾಪಕವಾಗಿ ಹರಡಲಾಯಿತು.