ಕಾಶಿ ಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಉಚಿತ ಸಾಮೂಹಿಕ ವಿವಾಹ ಹಾಗೂ ಭವ್ಯ ಧಾರ್ಮಿಕ ಕಾರ್ಯಕ್ರಮ.

 

ಅಫಜಲಪೂರ : ಪಟ್ಟಣದಲ್ಲಿ ಹಜರತ ದಾವಲಮಲೀಕರ ವರಪುತ್ರ ಹಜರತ ಮಲ್ಲಿಕಾರ್ಜುನ ದಾವಲಮಲೀಕ ಮುತ್ಯಾರವರ ದಿವ್ಯ ಸಂಕಲ್ಪದಂತೆ ಉಚಿತ ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪಟ್ಟಣದ ಜಹಾಗೀರದಾರ ಫಂಕ್ಷನ್ ಹಾಲ್‌ನಲ್ಲಿ ಭವ್ಯವಾಗಿ ಜರುಗಿದವು.

ಆಶ್ರಮದ ಪೀಠಾಧಿಪತಿ ಶ್ರೀ ಹಜರತ ಮಲ್ಲಿಕಾರ್ಜುನ ದಾವಲಮಲೀಕ ಮುತ್ಯಾರವರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ, ಕಾಶಿ ಪೀಠದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಕರ ದಿವ್ಯ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ ನೆರವೇರಿಸಲ್ಪಟ್ಟವು. ಸಮಸ್ತ ಹರಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಸಾಮೂಹಿಕ ವಿವಾಹದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಜೊತೆಗೆ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಹ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶ್ರೀ ಷ. ಬ್ರ. ಶ್ರೀಕಂಠ ಶಿವಾಚಾರ್ಯರು, ಬಮ್ಮಲಿಂಗೇಶ್ವರ ಬೃಹನ್ಮಠ, ರೇವೂರ (ಬಿ) ವಹಿಸಿದರು.

ಮುಖ್ಯ ಅತಿಥಿಗಳಾಗಿ ಜ್ಯೋತಿ ಅರುಣ ಕುಮಾರ ಪಾಟೀಲ್, ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ ಸೇರಿದಂತೆ ಅನೇಕ ರಾಜಕೀಯ ಗಣ್ಯರು, ಸರ್ಕಾರಿ ಅಧಿಕಾರಿಗಳು, ನ್ಯಾಯವಾದಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಲೂಕು ಹಾಗೂ ಜಿಲ್ಲೆಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಸಂಜೀವಕುಮಾರ ದಾಸರ, ಮುಖಂಡರಾದ ಜೆ ಎಂ ಕೊರಬು, ಮಕಬುಲ್ ಪಟೇಲ್, ಎಸ್ ಎಸ್ ಪಾಟೀಲ್,

ಲಚಪ್ಪ ಜಮಾದಾರ, ಕೆ. ಜಿ. ಪೂಜಾರಿ, ಶಂಕು ಮ್ಯಾಕೇರಿ, ಮಹಾಂತೇಶ ಪಾಟೀಲ್, ಮಳೇಂದ್ರ ಡಾಂಗೆ, ಅರ್ಜುನ ಕೆರೂರ, ಪ್ರಭಾವತಿ ಮೇತ್ರೆ, ವಕೀಲರಾದ ಎಂ. ಎಲ್. ಪಟೇಲ್ ಬಳೂಂಡಗಿ, ವಾಸಿಮ್ ಅಬ್ದುಲ್ ಜಾಗೀರದಾರ, ಚಂದ್ರಶೇಖರ ಕರಜಗಿ,ಶ್ರೀದೇವಿ ಪಾಟೀಲ್, ಬಿ ಎಂ ರಾವ, ಗುರುದೇವ ಪೂಜಾರಿ,ಬಾಬುಮಿಯಾ ಪುಲಾರಿ, ಭೀಮರಾಯ ಗೌರ, ನಾಗೇಶ ಕೊಳ್ಳಿ,ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Share This Article
Leave a Comment