ಜನಪದ ಸಂಸ್ಕೃತಿ ಉಳಿಸಲು ಕೆಕೆಆರ್‌ಡಿಬಿ ಅನುದಾನ ನೀಡಲಿ: ಪ್ರೊ. ಹೆಬ್ಬಾಳೆ

 

ಬೀದರ್, ಮೇ.೨೬- ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಲು ಉತ್ಸವಗಳು ಸಹಕಾರಿಯಾಗಿವೆ ಎಂದು ನವದೆಹಲಿಯ ವೆಂಕಟೇಶ್ವರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಉಮಾಕಾಂತ ಪಾಟೀಲ್ ಅವರು ತಿಳಿಸಿದರು.

ಕರ್ನಾಟಕ ಸಾಹಿತ್ಯ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಸಹಯೋಗದಲ್ಲಿ ಸಂಘದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ ಜನಪದ ಉತ್ಸವ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಕಲೆಯ ಉಳಿಯುವುದಕ್ಕೂ ಹಿರಿಯ ನಾಗರಿಕರಿಗೂ ಅವಿನಾಭಾವ ಸಂಬAಧವಿದೆ. ಶತಮಾನಗಳ ಹಿಂದಿನ ದೇಶಿ ಸಂಸ್ಕೃತಿ ಉಳಿಸಲು ಹಿರಿಯರು ಸಾಕಷ್ಟು ಶ್ರಮಿಸಿದ್ದಾರೆ. ಮುಂದಿನ ಪೀಳಿಗೆ ಅವರ ಹತ್ತಿರ ಹಾಡುಗಳನ್ನು ಕಲಿತು, ನಮ್ಮ ಜನಪದ ಸಂಸ್ಕೃತಿ, ಆಚಾರ ವಿಚಾರಗಳ ಕುರಿತು ಅಧ್ಯಯನ ಮಾಡಿ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಶಾಂತಕುಮಾರ್ ಪಾಟೀಲ್ ಅವರು ಮಾತನಾಡಿ, ಜನಪದ ಸಂಸ್ಕೃತಿ ಉಳಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಯುವಕರು ಪರಕೀಯ ಸಂಸ್ಕೃತಿ ಕಡೆಗೆ ವಾಲುತ್ತಾರೆ. ಆದ್ದರಿಂದ ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಶ್ರೀಮಂತ ಜನಪದ ಸಂಸ್ಕೃತಿ ಉಳಿಸಿ ಬೆಳೆಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ ಅವರು ಮಾತನಾಡಿ, ದೇಶದಲ್ಲಿ ೩೦೦ಕ್ಕೂ ಹೆಚ್ಚು ಜನಪದ ಕಲೆಗಳಿವೆ. ಅಂತಹ ಕಲಾಪ್ರದರ್ಶನ ಮಾಡುವ ಕಲಾವಿದರಿಗೆ ವೇದಿಕೆ ಒದಗಿಸದಿದ್ದರೆ ಜನಪದ ಅಳಿಯುತ್ತದೆ. ಕಲಾ ವೀಕ್ಷಣೆಯಿಂದ ಪರಂಪರೆ, ಸಂಸ್ಕೃತಿ, ಆಚಾರ ವಿಚಾರ ಉಳಿಯುತ್ತದೆ. ಕಲಾವಿದರು ತಮ್ಮ ಉಡುಗೆ, ಹಾವಭಾವ ಮತ್ತು ಪ್ರದರ್ಶನದ ವೈಖರಿಯಿಂದ ದೇಶ ವಿದೇಶಗಳಲ್ಲಿ ಅವಕಾಶ ಪಡೆದುಕೊಳ್ಳಬೇಕು. ಕೇವಲ ಮಾಶಾನಕ್ಕಾಗಿ ಕಲಾಪ್ರದರ್ಶನ ಮಾಡಬಾರದು. ಕಲೆಯನ್ನು ಉತ್ಕೃಷ್ಟವಾಗಿ ಬೆಳೆಸುವ, ಮನಸುಗಳನ್ನು ಕಟ್ಟುವ ಕಾರ್ಯ ಆಕರ್ಷಕವಾಗಿ ಮಾಡಬೇಕೆಂದರು. ಜೊತೆಗೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯು ರಸ್ತೆ, ನೀರು, ಚರಂಡಿ, ವಾಹನ, ಶಿಕ್ಷಣಕ್ಕೆ ಅನುದಾನ ಮೀಸಲಿಟ್ಟಂತೆ ಜನಪದ ಕಲೆ ಸಾಹಿತ್ಯ ಸಂವರ್ಧನೆಗೂ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದರು.

ರಾಷ್ಟಿçÃಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ್ ಹೆಬ್ಬಾಳೆ ಅವರು ಪ್ರಾಸ್ತಾವಿಕ ಮಾತನಾಡಿದರು. ವೇದಿಕೆ ಮೇಲೆ ಪ್ರೊ. ಎಸ್.ಬಿ.ಬಿರಾದಾರ್, ಬಸವಣಪ್ಪ ನೇಳಗಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಎಸ್.ಬಿ. ಕುಚಬಾಳ್ ನಿರೂಪಿಸಿದರು. ವೈಜಿನಾಥ ಪಾಟೀಲ್ ವಂದಿಸಿದರು. ಅಶ್ವಿನಿ ರಾಜಕುಮಾರ ಬಂಪಳ್ಳಿ ಹಾಗೂ ಗುರುದೇವ ಸಂಗಡಿಗರು ನಾಡಗೀತೆ ಹಾಗೂ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಕೊನೆಗೆ ಸುಮಾರು ೩೦ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಶ್ವಿನಿ ರಾಜಕುಮಾರ್ ಬಂಪಳ್ಳಿ ಜಾನಪದ ಹಾಡುಗಳು, ಮಹಾದೇವಿ ದಾನಾ ಹಾಗೂ ಸಂಗಡಿಗರಿAದ ಭಜನೆ ಹಾಡುಗಳು, ಗಂಗಮ್ಮಾ ಫುಲೆ ಹಾಗೂ ಸಂಗಡಿಗರಿAದ ಬುದ್ಧ ಭಜನೆ, ಶಿವಕುಮಾರ ದೊಡಮನಿ ಆಣದೂರ ಅವರಿಂದ ಬಂಜಾರಾ ನೃತ್ಯ ಹಾಗೂ ನಾಗಮ್ಮಾ ಸಂಗಡಿಗರಿAದ ಸೋಬಾನೆ ಹಾಡುಗಳನ್ನು ನಡೆಸಿಕೊಟ್ಟರು.

Share This Article
Leave a Comment