ಕಲಬುರ್ಗಿ, ಜೂ.೧೮- ಮಹಾನಗರ ಪಾಲಿಕೆಯ ಟೌನ್ ಹಾಲ್ ಆವರಣದಲಿ ್ಲರುವ ರಾಷ್ಟçಪಿತ ಮಹಾತ್ಮಾಗಾಂಧಿ ಪ್ರತಿಮೆ ಎದುರುಗಡೆ ಕಳೆದ ೮೬೨ ದಿನಗಳಿಂದ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಸತ್ಯಾಗ್ರಹವನ್ನು ರಮೇಶ್ ಆರ್. ದುತ್ತರಗಿ ಅವರು ಆರಂಭಿಸಿದ್ದು, ಬೇಡಿಕೆಗೆ ಸ್ಪಂದನೆ ಇರದೇ ಇರುವುದರಿಂದ ಇನ್ನು ಮುಂದೆ ಅನಿರ್ಧಿಷ್ಟಾವಧಿಯವರೆಗೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಸತ್ಯಾಗ್ರಹ” (ಸಮಯ ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧೨ಗಂಟೆಯವರೆಗೆ) ನಡೆಸಲಾಗುತ್ತದೆ ಎಂದು ಪ್ರತಿಭಟನೆಕಾರರು ತಿಳಿಸಿದ್ದಾರೆ.
ಚುನಾವಣೆಯಲ್ಲಿನ ವ್ಯವಸ್ಥೆಯನ್ನು ಸುಧಾರಿಸಿ, ಭ್ರಷ್ಟಾಚಾರ ನಿಯಂತ್ರಿಸಿ ದೇಶ ಉಳಿಸಿ ಹಾಗೂ ಚುನಾವಣೆಗಳಲ್ಲಿ ಹಣ ಬಲ ನಿಯಂತ್ರಿಸಿ ಪ್ರಜಾಪ್ರಭುತ್ವ ಉಳಿಸಿ ಎಂಬ ಒಟ್ಟು ೧೨ ಬೇಡಿಕೆಗಳನ್ನು ಮುಂದಿಟ್ಟುಕೊAಡು ಕಳೆದ ೮೬೨ ದಿನಗಳಿಂದಲೂ ಗಾಂಧಿ ಪ್ರತಿಮೆಯ ಬಳಿ ರಮೇಶ್ ಆರ್. ದುತ್ತರಗಿ ಅವರು ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಸತ್ಯಾಗ್ರಹ ಮಾಡುತ್ತಿದ್ದು, ಬೇಡಿಕೆಗಳಿಗೆ ನಿರ್ಲಕ್ಷಿಸಿದ್ದರಿಂದ ಹೋರಾಟವನ್ನು ಅನಿರ್ಧಿಷ್ಟ ಅವಧಿಯವರೆಗೆ ಮುಂದುವರೆಸಿದ್ದಾರೆ.
ಟಿ.ಎನ್. ಶೇಷನ್ ಅವರು ಮುಖ್ಯ ಚುನಾವಣಾ ಆಯುಕ್ತರಿದ್ದಾಗ ಚುನಾವಣಾ ಆಯೋಗದ ಸಂಪೂರ್ಣ ಅಧಿಕಾರವನ್ನು ಬಳಸಿಕೊಂಡು ಚುನಾವಣೆ ನಡೆಸುವ ಮೂಲಕ ರಾಜಕೀಯ ಪಕ್ಷಗಳಿಗೆ ಹಾಗು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸಿಂಹ-ಸ್ವಪ್ನರಾಗಿದ್ದರು. ಚುನಾವಣಾ ಆಯೋಗಕ್ಕೆ ಇಷ್ಟೊಂದು ಅಧಿಕಾರ ಇದೆ ಎಂದು ಈ ದೇಶದ ಜನತೆಗೆ ಗೊತ್ತಾಗಿದ್ದು ಅದೇ ಮೊದಲು. ಅಲ್ಲಿಯವರೆಗೆ ಚುನಾವಣಾ ಕೇವಲ ನಾಮಕಾವಾಸ್ತೆ ಆಗಿತ್ತು, ತದನಂತರ ಇಲ್ಲಿಯವರೆಗೆ ಮತ್ತೆ ಚುನಾವಣಾ ಆಯೋಗ ಅಷ್ಟೊಂದು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಆಯೋಗದ ೭೫ ವರ್ಷಗಳ ಇತಿಹಾಸದಲ್ಲಿ ಟಿ.ಎನ್. ಶೇಷನ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ನಡೆಸಿದ ಚುನಾವಣೆಗಳು ಅತ್ಯಂತ ವಿಶೇಷವಾಗಿವೆ. ದೇಶದ ಜನತೆ ಅವರನ್ನು ನೆನಪಿಸಿಕೊಳ್ಳುತ್ತಾರೆ. ಇತ್ತೀಚೆಗೆ ಚುನಾವಣೆಗಳಲ್ಲಿ ಹಣದ ಪ್ರಭಾವ ಹೆಚ್ಚುತ್ತಿದ್ದು, ಆಡಳಿತ ಯಂತ್ರದಲ್ಲಿ ಭ್ರಷ್ಟಾಚಾರವೂ ಹೆಚ್ಚುತ್ತಿದೆ. ಹೀಗಾಗಿ ಚುನಾವಣಾ ಸುಧಾರಣೆಗಾಗಿ ನಾನು ಅನಿರ್ಧಿಷ್ಟ ಸತ್ಯಾಗ್ರಹ ಹಮ್ಮಿಕೊಂಡಿದ್ದಾಗಿ ಅವರು ಹೇಳಿದರು.