ಬೆಂಗಳೂರಿನಲ್ಲಿ ಮೇ ೩೧ರಂದು ರಾಜ್ಯ ಮಟ್ಟದ ವಿಶ್ವಕರ್ಮ ಮಕ್ಕಳ ಪ್ರತಿಭಾ ಪುರಸ್ಕಾರ

 

ಕಲಬುರ್ಗಿ, ಮೆ.೧೫- ಬೆಂಗಳೂರಿನ ಹೃದಯಭಾಗದಲ್ಲಿರುವ ಟೌನ್ ಹಾಲ್ (ಪುಟ್ಟಣ್ಣ ಚಟ್ಟಿ ಭವನ)ದಲ್ಲಿ ಮೇ ೩೧ರಂದು ಮಧ್ಯಾಹ್ನ ೧೨ ಗಂಟೆಗೆ ರಾಜ್ಯ ಮಟ್ಟದ ವಿಶ್ವಕರ್ಮ ಮಕ್ಕಳ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಶೋಕ್ ಎಸ್. ಪೊದ್ದಾರ್ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಅವರ ಘನ ಸಾರಥ್ಯದಲ್ಲಿ, ವಿಶ್ವಕರ್ಮ ಸಮಾಜದ ಮಠಾಧೀಶರು ಮತ್ತು ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸಮಾರಂಭ ಜರುಗಲಿದೆ ಎಂದರು.

೨೦೨೫-೨೬ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ (ದ್ವಿತಿಯ ವರ್ಷ) ತರಗತಿಗಲ್ಲಿ ಶೇಕಡಾ ೭೫ರಷ್ಟು ಮತ್ತು ಹೆಚ್ಚಿನ ಅಂಕಗಳನ್ನು ಪಡೆದು ಉತ್ತಿರ್ಣರಾದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರು, ತಮ್ಮ ತಮ್ಮ ಮಾರ್ಕ್ಸ್ ಕಾರ್ಡ್(ಅಂಕ ಪಟ್ಟಿ), ಟಿ.ಸಿ. ಅಥವಾ ಜಾತಿ ಪ್ರಮಾಣ ಪತ್ರ (ಕಾಸ್ಟ್ ಕಮ್ ಇನ್ ಕಮ್)ದ ದಾಖಲಾತಿಗಳು ಮತ್ತು ಭರ್ತಿ ಮಾಡಿದ ಪ್ರತಿಭಾ ಪುರಸ್ಕಾರ ನೊಂದಣಿ ಅರ್ಜಿ ಫಾರ್ಮ್ ಸ್ಕ್ಯಾನ್ ಮಾಡಿ ಅದರ ಸ್ಕ್ಯಾನ್ ಕಾಪಿ, ಸುಂದರ್ ಜಿ. ಬೆಂಗಳೂರು ಮೊಬಾಯಿಲ್ ಸಂಖ್ಯೆ ೯೮೮೬೪ ೨೩೯೩೫ ಅವರಿಗೆ ವ್ಯಾಟ್ಸ್ ಆಪ್ ಮುಖಾಂತರ ಕಳುಹಿಸಿಕೊಡಬೇಕು ಎಂದು ಅವರು ಕೋರಿದರು.

ಜಿಲ್ಲೆಯ ಪ್ರತಿಯೊಂದು ತಾಲ್ಲೂಕು, ಹೊಬಳಿ ಮತ್ತು ಗ್ರಾಮಗಳಲ್ಲಿರುವ ಮಹಾಸಭಾದ ತಾಲ್ಲೂಕು ಅಧ್ಯಕ್ಷರುಗಳು, ಹೊಬಳಿ ಮುಖಂಡರುಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ವಿಶ್ವಕರ್ಮ ಸಮಾಜದ ಮುಖಂಡರುಗಳು ಪ್ರತಿಯೊಂದು, ಹಳ್ಳಿಯಲ್ಲಿರುವ ಪ್ರತಿಭಾನ್ವಿತ ಮಕ್ಕಳಿಗೆ ಮಾಹಿತಿ ತಿಳಿಸಿ ಕಾರ್ಯಕ್ರಮದ ಲಾಭ ಪಡೆದುಕೊಳ್ಳಲು ನೆರವಾಗಿ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸುಲೇಪೇಟ್ ವಿಶ್ವಕರ್ಮ ಏಕದಂಡಗಿ ಮಠದ ದೊಡ್ಡೇಂದ್ರ ಮಹಾಸ್ವಾಮೀಜಿ, ಕಾಳಿದಾಸ್ ವಿಶ್ವಕರ್ಮ, ಭಾಗೇಶ್ ವಿಶ್ವಕರ್ಮ, ಸುಧಾಕರ್ ಎಸ್. ಪೋದ್ದಾರ್, ಅಭಿಷೇಕ್ ವಿಶ್ವಕರ್ಮ, ರಾಮಚಂದ್ರ ವಿಶ್ವಕರ್ಮ, ಗುಂಡಪ್ಪ ವಿಶ್ವಕರ್ಮ, ನಾಗಮೂರ್ತಿ ವಿಶ್ವಕರ್ಮ, ಶ್ರೀಮತಿ ಶಿವಲೀಲಾ ವಿಶ್ವಕರ್ಮ, ಶಿವಾನಂದ್ ಕಲ್ಲೂರ್ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment