ಅಸ್ಸಾಂ ಸಿಎಂ ಶರ್ಮಾ ಹೇಳಿಕೆಗೆ ಆಕ್ಷೇಪ: ಭಾರತದ ರಾಯಭಾರಿಗೆ ಬಾಂಗ್ಲಾ ಸಮನ್ಸ್

 

 

ಢಾಕಾ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಇತ್ತೀಚೆಗೆ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು, ಭಾರತದ ಹಂಗಾಮಿ ಹೈಕಮಿಷನ‌ರ್ ಪವನ್ ಭಾದೆ ಅವರಿಗೆ ಸಮನ್ಸ್ ನೀಡಿದೆ.

ದಕ್ಷಿಣ ಏಷ್ಯಾ ಮಹಾನಿರ್ದೇಶಕಿ ಇಶ್ರತ್ ಜಹಾನ್‌ ಅವರು ಬಾಂಗ್ಲಾದೇಶದ ನಿಲುವನ್ನು ಭಾರತೀಯ ರಾಜತಾಂತ್ರಿಕರಿಗೆ ಗುರುವಾರ ತಿಳಿಸಿದರು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ.

ಕಳೆದ ವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಶರ್ಮಾ ಅವರು ‘ಕೆಟ್ಟ ಜನರಿಗೆ ಮೃದು ಭಾಷೆ ಅರ್ಥವಾಗುವುದಿಲ್ಲ. 20 ಅಕ್ರಮ ವಲಸಿಗರನ್ನು ಅಸ್ಸಾಂನಲ್ಲಿ ಬಂಧಿಸಿ, ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಲಾಗಿದೆ’ ಎಂದು ಹೇಳಿದ್ದರು.

 

ಈ ರೀತಿಯ ಹೇಳಿಕೆಗಳು ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಹಾಳುಮಾಡುತ್ತವೆ ಎಂದು ಬಾಂಗ್ಲಾದೇಶ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಇಶ್ರತ್ ಭಾರತೀಯ ರಾಜತಾಂತ್ರಿಕರಿಗೆ ತಿಳಿಸಿದ್ದಾರೆ.

Share This Article
Leave a Comment