ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ರಾಜೀನಾಮೆಗೆ ಕರ್ನಾಟಕ ಪ್ರದೇಶ್ ವಿಕಾಸ್ ಶೀಲ್ ಇನ್ಸಾನ ಪಾರ್ಟಿ ರಾಜ್ಯ ಸಂಚಾಲಕರಾದ ಶಾಂತಪ್ಪ.A. ಕೂಡಿ

 

ಅಯೋದ್ದೆಯಲ್ಲಿ ನಿರ್ಮಾಣವಾದ ಶ್ರೀ ರಾಮ ಮಂದಿರ ದೇವಸ್ಥಾನದ ದೇಣಿಗೆಯಲ್ಲಿ ನೂರಾರು ಕೋಟಿ ರೂ.ಹಾಗೂ ಬೆಳ್ಳಿ ಬಂಗಾರ ಹಗರಣದ ಹೊಣೆ ಹೊತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ರಾಜೀನಾಮೆಗೆ ಕರ್ನಾಟಕ ಪ್ರದೇಶ್ ವಿಕಾಸ್ ಶೀಲ್ ಇನ್ಸಾನ ಪಾರ್ಟಿ ರಾಜ್ಯ ಸಂಚಾಲಕರಾದ ಶಾಂತಪ್ಪ.A. ಕೂಡಿ ಒತ್ತಾಯಿಸಿದರೆ

ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುವ ಅವರು ಭಾರತ ದೇಶದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಾವಿರಾರು ಹಿಂದೂ ಕಾರ್ಯಕರ್ತರು ಶ್ರೀ ರಾಮನ ಭಕ್ತರು ತಮ್ಮ ಜೀವ ಪಣ ಇಟ್ಟು ಹಾಗೂ ಜೀವ ಕೊಟ್ಟು ಮತ್ತು ಭಾರತ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಶ್ರೀ ರಾಮ ಮಂದಿರ ನಿರ್ಮಾಣ ವಾಗಬೇಕೆಂಬ ಆಸೆಯಿಂದ ದೇಶದ ಮೂಲೆ ಮೂಲೆಯಿಂದ ಭಕ್ತಿಯಿಂದ ಸಾವಿರಾರು ಕೋಟಿ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ ಅದೇ ರೀತಿಯಾಗಿ ಬಂಗಾರದ ಇಟ್ಟಿಗೆ ಬೆಳ್ಳಿಯ ಇಟ್ಟಿಗೆ ಸುಮಾರು ನೂರಾರು ಕೆಜಿ ಬೆಳ್ಳಿ ಬಂಗಾರ ಅರ್ಪಿಸಿದ್ದಾರೆ ಆದರೆ ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟಿನ ಕೆಲ ಮುಖ್ಯಸ್ಥರು ಹಾಗೂ RSS ನ ಮುಖ್ಯಸ್ಥರು ಬಿಜೆಪಿಯ ಕೆಲವು ರಾಷ್ಟ್ರೀಯ ನಾಯಕರು ಹಗರಣದಲ್ಲಿ ಭಾಗಿಯಾಗಿರುವರೆಂದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ ಅದಕ್ಕಾಗಿ ಸಮಗ್ರ ಹಗರಣದ ತನಿಖೆಯನ್ನು CBI ಗೆ ಅಥವಾ ಒಬ್ಬ ದಿಟ್ಟ ನಿಷ್ಟೂರವಾದಿ ಸುಪ್ರೀಂಕೋರ್ಟಿನ ನ್ಯಾಯಾಧೀಶರಿಂದ ತನಿಕೆಗೆ ಆದೇಶಿಸಬೇಕೆಂದು ದೇಶದ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಲ್ಲಿ ಮನವಿ ಮಾಡಿಕೊಳ್ಳಲಾಗುವುದು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ವಜಗೊಳಿಸಿ ನಿಷ್ಪಕ್ಷವಾಗಿ ಮಂದಿರದ ಹಗರಣದ ಸತ್ಯವಂಶವನ್ನು ಹೊರಬರಲು ಪತ್ರದ ಮೂಲಕ ಅಗ್ರಪಡಿಸಿದ್ದಾರೆ ಎಂದು ಶಾಂತಪ್ಪ A. ಕೂಡಿ ಸಂಚಾಲಕರು ಕರ್ನಾಟಕ ಪ್ರದೇಶ್ ವಿಕಾಸ್ ಶೀಲ್ ಇನ್ಸಾನ ಪಾರ್ಟಿಯ ಪತ್ರಿಕ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ

Share This Article
Leave a Comment