*​ಜೂನ್ 28 ರಿಂದ ಕಲಬುರಗಿ ಜಿಲ್ಲಾದ್ಯಂತ* *ಪಲ್ಸ್ ಪೋಲಿಯೋ ಅಭಿಯಾನದಲ್ಲಿ 3.51 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ*

ಕಲಬುರಗಿ, ಜೂ.24 – ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಜೂ.28 ರಿಂದ ಜುಲೈ. 01 ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ 0-5 ವರ್ಷದೊಳಗಿನ ಮಕ್ಕಳು ಲಸಿಕೆಯನ್ನು ಕಡ್ಡಾಯವಾಗಿ ಹಾಕಿಕೊಳ್ಳಿ ‘ಹೈರಿಸ್ಕ್’ ಪ್ರದೇಶಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಹೆದ್ದಾರಿಗಳ ಚೆಕ್‌ಪೋಸ್ಟ್ಗಳ ಮೇಲೆ ತೀವ್ರ ನಿಗಾವಹಿಸಿ ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

 

ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಟಾಸ್ಕ್ ಪೋರ್ಸ್- 2 ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೊದಲ ದಿನ ಜಿಲ್ಲೆಯಾದ್ಯಂತ ನಿಗದಿಪಡಿಸಲಾದ ಲಸಿಕಾ ಕೇಂದ್ರಗಳು ಅಂಗನವಾಡಿ, ಸಮುದಾಯ ಭವನ, ಬಸ್ ನಿಲ್ದಾಣಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುತ್ತದೆ.

 

ಬೂತ್ ದಿನದಂದು ಲಸಿಕೆಯಿಂದ ವಂಚಿತರಾದ ಮಕ್ಕಳನ್ನು ಪತ್ತೆಹಚ್ಚಲು ಅಭಿಯಾನದ ಮುಂದಿನ 3 ದಿನಗಳ ಕಾಲ ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂ ಸೇವಕರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿದ್ದಾರೆ ಎಂದು ಹೇಳಿದರು.

 

ಪೋಲಿಯೋ ಲಸಿಕೆ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಲು ವಿವಿಧ ಇಲಾಖೆಗಳ ವಾಟ್ಸಾಪ್ ಗ್ರೂಪ್‌ಗಳಲ್ಲಿ ಸಂದೇಶಗಳನ್ನು ಕಳುಹಿಸುವಂತೆ ಹಾಗೂ ಶಾಲೆಗಳಲ್ಲಿ ಪ್ರಭಾತ ಫೇರಿ (ಜಾಗೃತಿ ರ‍್ಯಾಲಿ) ಹಮ್ಮಿಕೊಳ್ಳುವಂತೆ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.

 

ನಂತರ ಸರ್ವಲೆನ್ಸ್ ಅಧಿಕಾರಿ ಡಾ. ಅನಿಲ ಕುಮಾರ ತಾಳಿಕೋಟಿ ಅವರು ಮಾತನಾಡಿ,

ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಇಂದಿಗೂ ವೈಲ್ಡ್ ಪೋಲಿಯೋ ವೈರಸ್ (Wild Polio Virus) ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ 2026ರ ಜೂನ್ 28 ರಂದು “ಪೋಲಿಯೋ ಮುಕ್ತ ಭಾರತ

ಪೋಲಿಯೋ ಮುಕ್ತ ಕರ್ನಾಟಕ” ಘೋಷದೊಂದಿಗೆ

ಲಸಿಕೆ ಹಾಕುವ ಗುರಿ ಹೊಂದಿದೆ

ಎಂದು ನಡೆದ ಸಭೆಯಲ್ಲಿ ಮಾಹಿತಿ ನೀಡಿದರು.

 

ಜಿಲ್ಲೆಯ ಪಲ್ಸ್ ಪೋಲಿಯೋ ಕ್ರಿಯಾ ಯೋಜನೆ ವಿವರ ಇಂತಿದೆ:

ಒಟ್ಟು ಜನಸಂಖ್ಯೆ29,54,807, ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ3,51,716, ಒಟ್ಟು ಲಸಿಕಾ ಕೇಂದ್ರಗಳು (ಮೊದಲ ದಿನ)1,519, ಮನೆ ಭೇಟಿ ತಂಡಗಳು (ಉಳಿದ ಮೂರು ದಿನಗಳು)1,453, ಟ್ರಾನ್ಸಿಟ್ ಲಸಿಕಾ ತಂಡಗಳು132, ಸಂಚಾರಿ ತಂಡಗಳು (Mobile Teams)31, ಒಟ್ಟು ತಂಡಗಳು1,682, ಮೇಲ್ವಿಚಾರಕರ ಸಂಖ್ಯೆ (Supervisors)333,ಲಸಿಕೆ ಹಾಕುವವರ ಸಂಖ್ಯೆ3,364 ಈ ರೀತಿಯಾಗಿರುತ್ತದೆ.

 

ವೇದಿಕೆ ಮೇಲೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಆರ್ ಸಿ ಎಚ್ ಅಧಿಕಾರಿ ಡಾ. ಸಿದ್ದು ಪಾಟೀಲ್. ಜಿಲ್ಲಾ ಸರ್ವೇಕ್ಷಣ ಅನುಷ್ಠಾನ ಅಧಿಕಾರಿ ಡಾ.ರಾಕೇಶ್ ಕಾಂಬಳೆ. ತಾಲೂಕು ಆರೋಗ್ಯ ಅಧಿಕಾರಿ ಡಾ. ಮಾರುತಿ ರಾವ್ ಕಾಂಬಳೆ.ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು

Share This Article
Leave a Comment