ದುಬಾರಿ ದರಕ್ಕೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡುವ ಮಳಿಗೆಗಳ ವಿರುದ್ಧ ಕ್ರಮಕ್ಕೆ ಕರ್ನಾಟಕ ಜನಸೈನ್ಯ ಒತ್ತಾಯ ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಎಚ್ಚರಿಕೆ

 

 

ಅಫಜಲಪುರ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ನಿಗದಿತ ದರಕ್ಕಿಂತ ದುಬಾರಿ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಜನಸೈನ್ಯ ಸಂಘಟನೆಯ ತಾಲೂಕ ಅಧ್ಯಕ್ಷ ಉಮೇಶ ಎಸ್, ಅಂದೋಡಗಿ ಒತ್ತಾಯಿಸಿದ್ದಾರೆ,

 

ಮುಂಗಾರು ಹಂಗಾಮು ಆರಂಭವಾಗಿದ್ದು, ತಾಲ್ಲೂಕಿನ ಹಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಮರ್ಪಕ ಪ್ರಮಾಣದಲ್ಲಿ ರಸಗೊಬ್ಬರ ಲಭ್ಯವಿಲ್ಲ. ಇದರಿಂದ ರೈತರು ಖಾಸಗಿ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ. ಡಿ, ಎ, ಪಿ ರಸಗೊಬ್ಬರದ ನಿಗದಿತ ದರ ರೊ.1350 ಇದ್ದರೂ, ಕೆಲ ವ್ಯಾಪಾರಿಗಳು ರೊ . 1800 ರಿಂದ ರೊ. 2000 ನೀಡಿದರೆ ಮಾತ್ರ ರಸಗೊಬ್ಬರ ಕೂಡುವುದಾಗಿ ಹೇಳುತ್ತಿದಾರ. ಹೆಚ್ಚುವರಿ ಹಣ ನೀಡಲು ಒಪ್ಪದ ರೈತರಿಗೆ ದಾಸ್ತಾನು ಇಲ್ಲ ಎಂದು ಹೇಳಿ ವಾಪಸ್ ಕಳುಹಿಸಲಾಗುತ್ತಿದೆ, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಕೊಡಲೇ ಪರಿಶೀಲನೆ ನಡೆಸಿ ತಪ್ಪಿಸ್ಥರ ಮಳಿಗೆಗಳ ವಿರುದ್ಧ ಕೃಷಿ ನಿರ್ದೇಶಕ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಂತಹ ಮಳಿಗೆಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕುರೈತರಿಗೆ ನಿಗದಿತ ದರದಲ್ಲಿ ರಸಗೊಬ್ಬರ ದೊರೆಯಬೇಕು ಒಂದು ವೇಳೆ ದೊರೆಯದೆ ಹೋದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುತ್ತಿಗೆ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವುದಾಗಿ, ಕರ್ನಾಟಕ ಜನಸೈನ್ಯ ಸಂಘಟನೆ ಅಫಜಲಪುರ ತಾಲೂಕ ಅಧ್ಯಕ್ಷ ಉಮೇಶ ಎಸ್, ಅಂದೋಡಗಿ ಎಚ್ಚರಿಕೆ ನೀಡಿದ್ದಾರೆ,

Share This Article
Leave a Comment