ಕಲಬುರಗಿ,ಜೂ.14+ಜಿಲ್ಲೆಯ ಆಳಂದ ತಾಲೂಕಿನ ಸಂಗೋಳಗಿ(ಸಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಬಳಕೆಯಲ್ಲಿಲ್ಲದ ಕೊಠಡಿ) ಮೇಲ್ಚಾವಣಿಯ ಪದರು ಭಾನುವಾರ ಬೆಳಿಗ್ಗೆ ಏಕಾಏಕಿ ಕುಸಿದು ಬಿದ್ದಿದ್ದು, ಯಾವುದೇ ಅವಘಡ ಸಂಭವಿಸಿಲ್ಲ ಎಂದು ಶಾಲೆಯ ಮುಖ್ಯಗುರುಗಳು ಮತ್ತು ಚಿಂಚನಸೂರು ಸಿ.ಆರ್.ಪಿ ಅವರು ತಿಳಿಸಿದ್ದಾರೆ.
ಭಾನುವಾರ ರಜೆ ದಿನವಾಗಿದ್ದರಿಂದ ಶಾಲೆಯಲ್ಲಿ ಮಕ್ಕಳು, ಶಿಕ್ಷಕರು ಯಾರು ಇರಲಿಲ್ಲ. ಬೆಳಿಗ್ಗೆ ಸುಮಾರು 6 ಗಂಟೆಗೆ ಬಳಕೆಯಲ್ಲಿಲ್ಲದ ಈ ಕೊಠಡಿ ಅವಘಡಕ್ಕೆ ತುತ್ತಾಗಿದೆ. ಸುಮಾರು 60-70 ವರ್ಷದ ಹಳೇ ಕಟ್ಟಡವಾಗಿದ್ದರಿಂದ ಪ್ಲಾಸ್ಟರ್ ಪದರು ಕುಸಿದಿರಬಹುದು ಎಂದು ಮುಖ್ಯಗುರು ಪುಷ್ಪಾ ಮತ್ತು ಸಿ.ಆರ್.ಪಿ ಧರ್ಮರಾಯ ಅವರು ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ನೀಡಿದ್ದಾರೆ.
ಮೇಲ್ಚಾವಣಿಯ ಪದರು ಕುಸಿದ್ದ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸಿ.ಆರ್.ಪಿ ಮತ್ತು ಸಹ ಶಿಕ್ಷಕರೊಂದಿಗೆ ಶಾಲೆಗೆ ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದ ಮುಖ್ಯಗುರುಗಳು, ಸದರಿ ಸ್ಥಳದ ಹತ್ತಿರ ಸಾರ್ವಜನಿಕರು, ಮಕ್ಕಳು ಸೇರಿದಂತೆ ಯಾರು ಹೋಗದಂತೆ ತಿಳಿ ಹೇಳಲಾಗಿದೆ ಎಂದಿದ್ದಾರೆ.