ಜೇವರ್ಗಿ ತಾಲೂಕಿನ ಸಿದ್ದನಾಳ ಗ್ರಾಮದಲ್ಲಿ ಶ್ರೀ ಸಿದ್ಧಮುನಿ ಪಾದುಕ ಆಶ್ರಮ ಟ್ರಸ್ಟ್ ವತಿಯಿಂದ ಪುರುಷೋತ್ತಮ ಮಾಸದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗುರುಪುಷ್ಯಮೃತ ಯೋಗದ ಪ್ರಯುಕ್ತ ಇಂದು ಸಿದ್ದನಾಳದಲ್ಲಿ ದತ್ತಾತ್ರೇಯ ಯಾಗ ಹಾಗೂ ಮಹಾಪ್ರಸಾದ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ತದನಂತರ ಸುದ್ದಿಗಾರ ದೊಂದಿಗೆ ಮಾತನಾಡಿದ ಸಿದ್ದಿಮುನಿ ಪಾದುಕ ಆಶ್ರಮ ಟ್ರಸ್ಟ್ ಅಧ್ಯಕ್ಷರಾದ ಗುರುನಾಥ್ ಕುಲಕರ್ಣಿ ಸಿದ್ದನಾಳವು ಗ್ರಾಮವು ತುಂಬಾ ಜಾಗೃತ ವಾದ ದತ್ತ ಕ್ಷೇತ್ರಇದೆ. ಈ ಸ್ಥಾನದಲ್ಲಿ ಗುರು ಚರಿತ್ರೆಯು ಪ್ರಾರಂಭವಾಗಿದೆ ನಾಮದಾರಕನು ಈ ಸ್ಥಾನದಲ್ಲಿ ಸಿದ್ದಮನಿಗಳನ್ನು ಭೇಟಿಯಾಗಿದ್ದಾರೆ . ನರಸಿಂಹ ಸರಸ್ವತಿಗಳು ಸಿದ್ಧಮುನಿಗಳ ಅವತಾರದಲ್ಲಿ ನಾಮಧಾರೆಕನಿಗೆ ಈ ಸ್ಥಾನದಲ್ಲಿಯೇ ಗುರು ಚರಿತ್ರೆಯನ್ನು ಬೋಧಿಸಿದ್ದಾರೆ ಈ ಸ್ಥಾನದಲ್ಲಿ ಗುರುಪಾದಕ ಮತ್ತು ಸಿದ್ಧಮುನಿಗಳಿಂದ ಸ್ಥಾಪಿತವಾದ ಈಶ್ವರ ಲಿಂಗ ಇದೆ ನಾಮದಾರಕನು ಗುರು ಚರಿತ್ರೆಯ ಲೇಖಕರು ಎಂದು ಮಾತನಾಡಿದರು
ಇದೇ ಸಂದರ್ಭದಲ್ಲಿ ನಾಳೆ ಪವಮಾನ ಹೋಮ ಹಾಗೂ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಆಶ್ರಮ ಟ್ರಸ್ಟ್ ವತಿಯಿಂದ ತಿಳಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಆಶೀರ್ವಾದ ಪಡೆಯುವಂತೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಬಾಲಚಂದ್ರ ಕುಲಕರ್ಣಿ ಅತ್ರಿಕುಮಾರ್ ಕುಲಕರ್ಣಿ ವಾಮನರಾವ್ ಕುಲಕರ್ಣಿ
ಪ್ರಿಯಾಂಕ ಪೂಜಾರಿ ಪ್ರಖ್ಯಾತ ಪೂಜಾರಿ ಪ್ರಸಾದ್ ಪೂಜಾರಿ ಫರ್ಫುಲ್ ಪೂಜಾರಿ ಭರತ್ ಪೂಜಾರಿ ಪ್ರತೀಕ ಪೂಜಾರಿ ಶ್ಲೋಕ ಪೂಜಾರಿ ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ್ ಗ್ರಾಮದ ಹಿರಿಯರಾದ ಹುಲೆಪ್ಪ ಹೇರೂರು ಇಟಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಯಲ್ಲಪ್ಪ ಬಂಕಲಗಿ
ಹಾಗೂ ಸಿದ್ದನಾಳ ಗ್ರಾಮದ ಗ್ರಾಮಸ್ಥರು ಉಪಸ್ಥಿರಿದ್ದರು