*ಅಪಾಯಕಾರಿ ಕ್ರೀಡೆಗಳಲ್ಲಿ ಅಲ್ಪ ವಯಸ್ಸಿನ ಮಕ್ಕಳು ಭಾಗವಹಿಸದಂತೆ ಸೂಚನೆ*

 

ಕಲಬುರಗಿ,ಜೂನ್.10.(ಕರ್ನಾಟಕ ವಾರ್ತೆ)-ರಾಜ್ಯದ ಜಿಲ್ಲೆ, ತಾಲೂಕು ಹಾಗೂ ಗ್ರಾಮಗಳಲ್ಲಿ ನಡೆಸಲಾಗುವ ಜಲ್ಲಿ ಕಟ್ಟು, ಕಂಬಳ, ಮಂಜು ವಿರಟ್ಟು, ಗೂಳಿ ಕಾಳಗ, ಎತ್ತಿನ ಬಂಡಿ ಓಟ, ಟಗರು ಕಾಳಗ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ/ ವೀಕ್ಷಣೆ ಅಪಾಯಕಾರಿಯಾಗಿದ್ದು, ಇಂತಹ ಅಪಾಯಕಾರಿ ಕ್ರೀಡೆಗಳಲ್ಲಿ ಅಲ್ಪ ವಯಸ್ಸಿನ ಮಕ್ಕಳು ಭಾಗವಹಿಸದಂತೆ ಮತ್ತು ಕಿರಿಯ ವಯಸ್ಸಿನ ಮಕ್ಕಳು ಹಾಗೂ 16 ವರ್ಷದೊಳಗಿನ ಮಕ್ಕಳು ವೀಕ್ಷಣೆಗಾಗಿ ಅಥವಾ ಆಟದ ಸ್ಥಳದಲ್ಲಿ ಬಾರದಂತೆ ನಿರ್ಭಂಧಿಸಬೇಕೆಂದು ಪೋಷಕರು ಹಾಗೂ ಸಾರ್ವಜನಿಕರಿಗೆ ಕಲಬುರಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

 

ಇಂತಹ ಆಟೋಟ ಸ್ಪರ್ಧೆಗಳಲ್ಲಿ ಪ್ರಾಣಿಗಳನ್ನು ಬಳಸುತ್ತಿದ್ದು, ಪ್ರಾಣಿಗಳು ಉತ್ತೇಜನಗೊಂಡು ಕೆಲವೊಮ್ಮೆ ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ಸಂದರ್ಭಗಳು ಉಂಟಾಗಿದ್ದು, ಇಂತಹ ಸಂದರ್ಭದಲ್ಲಿ ಮಕ್ಕಳು ತೀವ್ರ ರೀತಿಯ ಹಲ್ಲೆಗೆ ಒಳಗಾಗುತ್ತಿರುವುದು, ಕೆಲವೊಮ್ಮೆ ಮಾರಣಾಂತಿಕವಾಗಿಯೂ ಹಲ್ಲೆಗೊಳಗಾಗಿ ಸಾವು ಸಂಭವಿಸುವ ಸಂಭವವಿರುತ್ತದೆ ಎಂದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment