ರಾಷ್ಟಿಯ ಸದ್ಬಾವನಾ ಪ್ರಶಸ್ತಿಗೆ ಡಾ. ಸುನೀತಾ ಮಹೇಶ್ವರಿ ಆಯ್ಕೆ

ಬೀದರ್, ಮೇ.೨೭- ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ತನ್ನ ೮ ನೇ ವಾರ್ಷಿಕೋತ್ಸವ ನಿಮಿತ್ಯ ಹೆಸರಾಯಿತು ಕರ್ನಾಟಕ ಉಸಿರಾಗಲ್ಲಿ ಕನ್ನಡ ರಾಜ್ಯ ಮಟ್ಟದ ಸಾಹಿತ್ಯ ಗೋಷ್ಠಿ ಸಾಂಸ್ಕೃತಿಕ ಕಲಾಸಿರಿ ಸಂಗೀತಾ ಕನ್ನಡ ಹಾಡುಗಳ ಗಾಯನ ಪ್ರತಿಭಾ ಸತ್ಕಾರ ಸಮಾರಂಭ ಕಾರ್ಯಕ್ರಮವನ್ನು ವಿಶ್ವ ಪರಿಸರ ದಿನಾಚರಣೆ ಜೂನ್ ೫ರಂದು ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸೇವೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ರಾಷ್ಟç ಮಟ್ಟದ ಕರ್ನಾಟಕ ಕಾಯಕ ರತ್ನ ರಾಷ್ಟಿçÃಯ ಪ್ರಶಸ್ತಿಗೆ ಬೀದರ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಉಪಾನ್ಯಾಸಕಿ ಡಾ. ಸುನೀತಾ ಮಹೇಶ್ವರಿಯವರಿಗೆ ಆಯ್ಕೆ ಮಾಡಲಾಗಿದೆಯೆಂದು ಸಂಸ್ಥೆ ಕರ್ನಾಟಕ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ ಅವರು ಘೋಷಿಸಿದ್ದಾರೆ. ಡಾ. ಸುನೀತಾ ಮಹೇಶ್ವರಿ ಅವರು ಹೈದ್ರಾಬಾದ್ ಕರ್ನಾಟಕದ ಲಂಬಾಣಿ ಸಂಸ್ಕೃತಿ ಹಾಗೂ ಗುರು ಪರಂಪರೆ ಪ್ರಬಂಧ ಬರೆದಿದ್ದು, ೮ ಅಂತರಾಷ್ಟಿಯ ಮಟ್ಟದ ಲೇಖನಗಳು ೫೦ಕ್ಕೂ ಹೆಚ್ಚು ಬಿಡಿಲೇಖನಗಳು ಲಂಬಾಣಿ ಸಾಹಿತ್ಯ ಸಂಗ್ರಹ, ಲಂಬಾಣಿ ಗುರು ಪರಂಪರೆ ಪ್ರಕಟಿತ ಕೃತಿಗಳಾಗಿವೆ.

Share This Article
Leave a Comment