ರಾಜ್ಯಮಟ್ಟದ ಕನ್ನಡ ಜಾಗೃತಿ ಸಮಾವೇಶ: ಭಿತ್ತಿಪತ್ರ ಬಿಡುಗಡೆ

 

ಬೀದರ್, ಜೂ.೮- ಕನ್ನಡ ಸೇನೆ ಕರ್ನಾಟಕ ಸಂಘಟನೆಯಿAದ ನಗರದಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ದ್ವಿತೀಯ ಗಡಿನಾಡು ಕನ್ನಡ ಜಾಗೃತಿ ಸಮಾವೇಶದ ಭಿತ್ತಿ ಪತ್ರವನ್ನು ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟಿçÃಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ಅವರು ನೌಬಾದ್‌ನ ಔದುಂಬರಲಿAಗ ಆಶ್ರಮದಲ್ಲಿ ಬಿಡುಗಡೆ ಮಾಡಿದರು.

ಜೂನ್ ೧೯ರಂದು ಸಂಜೆ ೪.೩೦ಕ್ಕೆ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಸಮಾವೇಶ ಜರುಗಲಿದೆ. ಸಂಘಟನೆಯ ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾವೇಶ ಯಶಸ್ವಿಗೆ ಭರದ ಸಿದ್ಧತೆ ನಡೆದಿದೆ ಎಂದು ಸಂಘಟನೆಯ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ಜಿ. ತಿಳಿಸಿದರು.

ಸಾಹಿತಿ ರಮೇಶ್ ಬಿರಾದಾರ್, ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಅಡೆಪ್ಪ, ನಗರ ಘಟಕದ ಅಧ್ಯಕ್ಷ ಶಿವಕುಮಾರ, ಉಪಾಧ್ಯಕ್ಷ ಸೂರ್ಯಕಾಂತ ರಾಂಪುರೆ, ಕಾರ್ಯಕರ್ತರಾದ ತುಳಸಿ ವಾಘಮಾರೆ, ಅಶೋಕ ಗಾದಗಿ, ಡಾ. ಮಾರುತಿ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment