ಕಲಬುರ್ಗಿ ರೈಲು ನಿಲ್ದಾಣದ ಮುಂದೆ ಅನಧಿಕೃತ ಪ್ರತಿಭಟನೆ: ಕಾನೂನು ಕ್ರಮಕ್ಕೆ ಆಗ್ರಹ

 

 

ಕಲಬುರ್ಗಿ, ಜೂ.೪- ಅನಧಿಕೃತ ಪ್ರತಿಭಟನೆ, ರಸ್ತೆ ತಡೆ, ಕಾನೂನುಬಾಹಿರ ಬೈಕ್ ರ‍್ಯಾಲಿ ನಡೆಸಿ ಸಾರ್ವಜನಿಕರಿಗೆ ಅಡ್ಡಿಪಡಿಸಿದ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್, ಹಿರಿಯ ಮಾಹಿತಿ ಹಕ್ಕು ಕಾರ್ಯಕರ್ತ ಸಿದ್ಧರಾಮಯ್ಯ ಹಿರೇಮಠ್ ಅವರು ಒತ್ತಾಯಿಸಿದ್ದಾರೆ.

ಕಳೆದ ಮೂರರಂದು ರಾತ್ರಿ ೮ರಿಂದ ೯ ಗಂಟೆಯ ಸುಮಾರಿಗೆ ನಗರದ ರೈಲು ನಿಲ್ದಾಣದ ಎದುರಿನ ರಸ್ತೆಯ ಸುತ್ತಮುತ್ತ ನಡೆದ ಗಂಭೀರ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಯಾಗಿದೆ. ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ, ನೂರಾರು ಜನರಿದ್ದ ಗುಂಪೊAದು ಮೇಲಿನ ಸ್ಥಳದಲ್ಲಿ ಕಾನೂನುಬಾಹಿರವಾಗಿ ಜಮಾಯಿಸಿತ್ತು. ಈ ವ್ಯಕ್ತಿಗಳು ಈ ಕೆಳಗಿನ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಜಂಟಿ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಅನಧಿಕೃತ ಪ್ರತಿಭಟನೆ ಮತ್ತು ಜೋರಾದ ಘೋಷಣೆಗಳು: ಬೃಹತ್ ಜನಸಮೂಹವು ಕಾನೂನುಬಾಹಿರವಾಗಿ ಒಟ್ಟುಗೂಡಿ, ಭಾರೀ ಗದ್ದಲವನ್ನು ಸೃಷ್ಟಿಸಿ, ಜೋರಾಗಿ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟುಮಾಡಿದ್ದಲ್ಲದೆ, ಸ್ಥಳೀಯ ನಿವಾಸಿಗಳಲ್ಲಿ ಭೀತಿಯನ್ನು ಮೂಡಿಸಿದೆ. ರಸ್ತೆ ತಡೆ (ರಾಸ್ತಾ ರೋಕೋ): ಪ್ರತಿಭಟನಾಕಾರರು ರೈಲ್ವೆ ಸ್ಟೇಷನ್ ಮುಖ್ಯ ರಸ್ತೆಯನ್ನು ಉದ್ದೇಶಪೂರ್ವಕವಾಗಿ ತಡೆದು, ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. ಸಾರ್ವಜನಿಕರ ಕಾನೂನುಬಾಹಿರ ತಡೆಹಿಡಿಯುವಿಕೆ: ಹಠಾತ್ ರಸ್ತೆ ತಡೆಯಿಂದಾಗಿ ಪ್ರಯಾಣಿಕರು, ಆಂಬ್ಯುಲೆನ್ಸ್ಗಳು ಮತ್ತು ಶಾಲಾ ವಾಹನಗಳು ದೀರ್ಘಕಾಲದವರೆಗೆ ಸಿಲುಕಿಕೊಳ್ಳುವಂತಾಯಿತು. ಇದು ನಾಗರಿಕರ ಮುಕ್ತ ಸಂಚಾರದ ಹಕ್ಕನ್ನು ಉಲ್ಲಂಘಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನುಬಾಹಿರ ಬೈಕ್ ರ್ಯಾಲಿ: ಈ ಗುಂಪು ಮುಖ್ಯ ರಸ್ತೆಯಲ್ಲಿ ಅನಧಿಕೃತ ಬೈಕ್ ರ‍್ಯಾಲಿ ನಡೆಸಿ, ಬೇಜವಾಬ್ದಾರಿಯಿಂದ ವಾಹನ ಚಲಾಯಿಸುವ ಮೂಲಕ ಪಾದಚಾರಿಗಳ ಮತ್ತು ಇತರ ವಾಹನ ಸವಾರರ ಜೀವಕ್ಕೆ ಅಪಾಯವನ್ನು ಉಂಟುಮಾಡಿದೆ. ಇಡೀ ಘಟನೆಯು ಸಾರ್ವಜನಿಕರಿಗೆ ತೀವ್ರ ತೊಂದರೆಯನ್ನು ಉಂಟುಮಾಡಿದೆ ಮತ್ತು ಆ ಪ್ರದೇಶದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತಂದಿದೆ. ಕಾರಣ ಘಟನೆಯನ್ನು ಆಯೋಜಿಸಿದ ಸಂಘಟಕರು ಮತ್ತು ದಾಂಧಲೆ ನಡೆಸಿದ ಪ್ರತಿಭಟನಾಕಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ ೧೮೯, ೧೨೬, ೨೮೫, ೨೯೨, ೩೫೧ ಮತ್ತು ಮೋಟಾರು ವಾಹನ ಕಾಯ್ದೆಯ ಸಂಬAಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಿ, ಪ್ರಕರಣದ ತನಿಖೆ ನಡೆಸಿ, ಆದಷ್ಟು ಬೇಗ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಹಾನಗರ ಪಾಲಿಕೆಯ ಸದಸ್ಯರಾದ ಗೌಸ್ ಮುತ್ತೇಮುದು, ಸೈಯದ್ ಅಹ್ಮದ್, ಹಮೀದ್, ಹಮ್ಜಾ ತಂದೆ ಅಬ್ದುಲ್ ಹಮೀದ್ ರೆಹಮತನಗರ, ಆಲಂದಾರ್ ಜೈದಿ, ಅಜೀಮ್ ಶಿರ್ನಿಫಿರೋಶ್, ನ್ಯಾಯವಾದಿ ಉಮರ್ ಜುನೈದಿ, ಫೈಜ್ ತಾಷ್ಕಂತ್ ಬೇಗ್, ಫಿರೋಜ್ ಗಂಗಾಪುರಿ ಸೇರಿದಂತೆ ನೂರಾರು ಜನರು ಕಾನೂನು ಉಲ್ಲಂಘನೆ ಮಾಡಿರುವ ಕುರಿತು ಸಾಕ್ಷಿಗಳ ಸಮೇತ ದೂರುಗಳನ್ನು ಅವರು ಸಲ್ಲಿಸಿದ್ದಾರೆ.

Share This Article
Leave a Comment