ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ್ದ ಮೈಸೂರಿನ ಉರಿಲಿಂಗ್ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ಎಲ್ಲ ವರ್ಗದ ಜನರು ಒಗ್ಗಟ್ಟಿನಿಂದ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು. “ಇಂದು ಸಂವಿಧಾನ ಹಾಗೂ ಅಂಬೇಡ್ಕರ್ ಜೀವಂತವಾಗಿರುವಂತೆ ಕಾಣುತ್ತಿರುವುದು ಅವರ ಚಿಂತನೆಗಳ ಶಕ್ತಿ. ಪಂಚಾಯತಿಯಿಂದ ಸಂಸತ್ತಿನವರೆಗೆ ನಡೆಯುವ ವ್ಯವಸ್ಥೆ ಅಂಬೇಡ್ಕರ್ ಅವರ ಪೆನ್ನಿನ ಫಲ. 140 ಕೋಟಿ ಜನರಿಗೆ ಮತದಾನದ ಹಕ್ಕು ನೀಡಿದ ಅವರನ್ನು ಮೆರವಣಿಗೆಯಲ್ಲಿ ಪೂಜಿಸುವುದಕ್ಕಿಂತ ಅವರ ವಿಚಾರಗಳನ್ನು ಪುಸ್ತಕದ ಮೂಲಕ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣ್ ಪಾಟೀಲ್, “ಮೂಢನಂಬಿಕೆ ಬಡತನಕ್ಕೆ ಮೂಲ ಕಾರಣ. ಅಜ್ಞಾನ ಭಯವನ್ನು ಹುಟ್ಟುಹಾಕುತ್ತದೆ, ಜ್ಞಾನ ಅದನ್ನು ದೂರ ಮಾಡುತ್ತದೆ. ಮಾಶಾಳ ಗ್ರಾಮದಲ್ಲಿ ಉತ್ತಮ ಗ್ರಂಥಾಲಯ ಸ್ಥಾಪನೆಗೆ ನಾನು ಬದ್ಧನಾಗಿದ್ದೇನೆ” ಎಂದು ಭರವಸೆ ನೀಡಿದರು.ಪ್ರಾಸ್ತಾವಿಕವಾಗಿ ಅರ್ಜುನ್ ಭದ್ರೆ ಮಾತನಾಡಿ, ಗೌತಮ ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಿತೀನ್ ಗುತ್ತೇದಾರ, ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ವಿಜೃಂಭಣೆಯಿಂದ ಆಚರಿಸಿರುವುದು ಸಂತಸದ ಸಂಗತಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು. ಜನರ ಸುಖ-ದುಃಖಗಳಲ್ಲಿ ಸದಾ ಭಾಗಿಯಾಗುವುದಾಗಿ ಹೇಳಿದರು.ವಿಶೇಷ ಉಪನ್ಯಾಸಕರಾದ ಡಾ. ವಿಜಯಕುಮಾರ್ ಸಾಲಿಮನಿ ಮಾತನಾಡಿ, ದ್ವೇಷ ಹಾಗೂ ಅಸೂಯೆ ತೊರೆದು ಎಲ್ಲರೂ ಒಂದಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜ್ಞಾನ ಪ್ರಕಾಶ ಸ್ವಾಮೀಜಿ, ಅರುಣ ಪಾಟೀಲ್, ನಿತೀನ ಗುತ್ತೇದಾರ, ಜೆ ಎಂ ಕೊರಬು,ಪಪ್ಪು ಪಟೇಲ್, ಅರ್ಜುನ್ ಭದ್ರೆ, ಪ್ರಕಾಶ ಜಮಾದಾರ, ಸಿದ್ದು ಸಿರಿಸಗಿ, ವಿಶ್ವನಾಥ ರೇವೂರ, ಲಚ್ಚಪ್ಪ ಜಮಾದಾರ, ಹಣಮಂತರಾಯ ದೊಡ್ಮನಿ, ಭೀಮರಾಯ ಗೌರ, ಸಾಲಿಮಾನಿ ಸರ್,ಚಿದಾನಂದ ಬಸರೀಗಿಡ, ಕಾಸಿನಾಥ ಟಕ್ಕಳಕಿ, ನಾಗೇಶ ಕೊಳ್ಳಿ, ಶಂಕರಗೌಡ ಪಾಟೀಲ್,ಶಿವಪುತ್ರ ಜಿಡ್ಡಗಿ,ಪ್ರವೀಣ್ ಕಲ್ಲೂರ, ಡಾ.ತಂಗಾ, ಮಹಾಂತೇಶ್ ಬಡದಾಳ,ರಾಜಕುಮಾರ ಬಬಲಾದ,ಮಹೇಶ್ ಅಲೆಗಾಂವ, ವೈಜಾನಾಥ ನಿಂಗದಳ್ಳಿ, ದತ್ತು ವಗ್ಗೆ, ಮರೆಪ್ಪ ಮುಗಳಿ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.