ಜಿಲ್ಹಾ ವಿಜ್ಞಾನ ಕೇಂದ್ರದಲ್ಲಿ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ ಆಚರಣೆ

ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ, ದಿನಾಂಕ: 16 ರಿಂದ 18 ಮೇ 20206ರವರೆಗೆ “ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ” ಪ್ರಯುಕ್ತವಾಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಅವುಗಳಲ್ಲಿ ಮೊದಲನೇ ದಿನ ಅಂದರೆ 16 ರಂದು ವಿದ್ಯಾರ್ಥಿಗಳಿಗೆ ಮತ್ತು ವೀಕ್ಷಕರಿಗೆ ವಾಸ್ತು ಸಂಗ್ರಹಾಲಯಗಳ ಮಹತ್ವದ ಕುರಿತು ಚಲನಚಿತ್ರವನ್ನು ತೋರಿಸಲಾಯಿತು.

ಹಾಗೆಯೇ ಎರಡನೇ ದಿನ ಮಕ್ಕಳಿಗೆ “ನನ್ನ ವಸ್ತುಸಂಗ್ರಹಾಲಯ, ನನ್ನ ಸಂಸ್ಕೃತಿ” ಎಂಬ ತತ್ವದ ಮೇಲೆ ಡ್ರಾಯಿಂಗ್ ಮತ್ತು ಪೇಂಟಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಇದರಲ್ಲಿ ಹಲವಾರು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು

ಹಾಗೆಯೇ ಕೊನೆಯ ದಿನದಂದು ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿರುವ ಹಳೆಯ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು ಇದನ್ನು ಡಾ. ಎಮ್. ಎಸ್. ಜೋಗದ ನಿವೃತ ಪ್ರಾಂಶುಪಾಲರು ಎಸ್. ಬಿ. ಕಾಲೇಜ್ ಆಫ್ ಸೈನ್ಸ್ ಕಲಬುರಗಿ ಮತ್ತು ಕರ್ನಾಟಕ ಭೌತಶಾಸ್ತ್ರ ಸಂಘದ ಉಪಾಧ್ಯಕ್ಷರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹೀಗೆಯೇ ಸತತ ಮೂರು ದಿನಗಳಿಂದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ “ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನವನ್ನು” ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಜಿಲ್ಲಾ ವಿಜ್ಞಾನ ಕೇಂದ್ರ ಅಧಿಕಾರಿಗಳಾದ ಎನ್. ಪೊನ್ನರಸನ ರವರು ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರದ ಸಿಬ್ಬಂದಿಗಳೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದರು.

Share This Article
Leave a Comment