ಮನೆ ಮನೆಗೂ ಅಂಬೇಡ್ಕರ್ ಅರಿವು ತಲುಪಲಿ: ನೆಲೋಗಿ ಶ್ರೀಗಳು.

 

ಜೇವರ್ಗಿ, ಮೇ,೧೭- ಪುರೋಹಿತಶಾಹಿ ಕಪಿಮುಷ್ಠಿಯಲ್ಲಿ ಸಿಲುಕಿ ಮೂಢನಂಬಿಕೆಗಳಲ್ಲಿ ಮುಳಗಿರುವ ಜನರಿಗೆ ಅಂಬೇಡ್ಕರ್ ಬಗ್ಗೆ ಮತ್ತು ಸಂವಿಧಾನದ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಆಯೋಜಿಸುವ ಮೂಲಕ ಜನರಲ್ಲಿ ಪ್ರಜ್ಞೆ ತುಂಬಬೇಕು ಎಂದು ನೆಲೋಗಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.

ತಥಾಗತ ಗೌತಮ ಬುದ್ಧರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತ್ಯುತ್ಸವ ಅಂಗವಾಗಿ ಜಯಂತ್ಯುತ್ಸವ ಸಮಿತಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ಅಂಬೇಡ್ಕರ್ ಅರಿವು ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ೮೦೦ ವರ್ಷ ಮೊಗಲರು, ೨೦೦ ವರ್ಷ ಬ್ರಿಟಿಷ್ ರು ಆಳಿದ ಈ ದೇಶದಲ್ಲಿ ಜಾತಿಯತೆ, ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರಗಳು ಉಳಿದುಕೊಂಡು ಬಂದಿದ್ದು, ರಾಮಬಾಣಕ್ಕೆ ಭೀಮಬಾಣವೇ ಮದ್ದು ಎಂದು ತಿಳಿಸಿದರು.

ಮುಖ್ಯ ಭಾಷಣಕಾರ ಸುರೇಶ್ ಗೌತಮ್ ಅವರು ಮಾತನಾಡಿ, ಅಂಬೇಡ್ಕರ್ ಕೇವಲ ದಲಿತರಿಗಾಗಿ ದುಡಿಯಲಿಲ್ಲ. ಮಹಿಳೆ, ಹಿಂದುಳಿದ ವರ್ಗದವರ ಏಳಿಗೆಗೆ ದುಡಿದರು. ಸ್ವಾತಂತ್ರ‍್ಯ ಸಂದರ್ಭದಲ್ಲಿ ನಮ್ಮೆಲ್ಲ ಸಮಸ್ಯೆಗಳಿಗೆ ಬ್ರಿಟಿಷರೇ ಕಾರಣ ಎಂಬAತಿದ್ದ ಕಾಲದಲ್ಲಿ ಸಮಾಜದಲ್ಲಿನ ಶ್ರೇಣಿಕೃತ ವ್ಯವಸ್ಥೆ ಕೂಡ ಶೋಷಣೆಗೆ ಕಾರಣ ಎಂದು ಅಂತಹ ಅನಿಷ್ಟಗಳ ವಿರುದ್ದ ಡಾ. ಅಂಬೇಡ್ಕರ್ ಅವರು ಹೋರಾಡಿದರು ಎಂದರು. ಅಣದೂರು ಬುದ್ಧ ವಿಹಾರದ ಭಂತೆ ವರಜ್ಯೋತಿ ಇನ್ನಿತರ ಭಂತೇಜಿಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ರಾಜ್ಯ ಸದಸ್ಯ ರಾಜಶೇಖರ್ ಸೀರಿ ಅವರು ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ, ಮರೆಪ್ಪ ಹಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಲಿಂಗಪ್ಪಗೌಡ ಮಾಲಿಪಾಟೀಲ್, ಚನ್ನಮಲ್ಲಯ್ಯ ಹಿರೇಮಠ, ಬಾಪೂಗೌಡ ಪಾಟೀಲ್ ಬಿರಾಳ್, ವಸಂತ ನರಿಬೋಳ್, ಕೆರೆಪ್ಪ ಹಿಪ್ಪರಗಿ, ಸುಭಾಷ ಚನ್ನೂರ್, ಭೀಮರಾಯ ಜನಿವಾರ್ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪುಂಡಲೀಕ ಗಾಯಕವಾಡ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಶಾಂತಪ್ಪ ಯಲಗೋಡ, ಡಾ. ಅನಿಲ್ ಟೆಂಗಳಿ, ಡಾ. ಅಶೋಕ ದೊಡ್ಡಮನಿ, ನಿಜಲಿಂಗ ದೊಡ್ಡಮನಿ, ಪಂಡಿತ ಮದಗುಣಕಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

ಇದೇ ವೇಳೆಯಲ್ಲಿ ವೈದ್ಯಕೀಯ ಕ್ಷೇತ್ರ, ಸಂಗೀತ ಕ್ಷೇತ್ರ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮುಂಚೆ ಪಟ್ಟಣದ ವಿಜಯಪುರ ಕ್ರಾಸ್ ನಿಂದ ಗೌತಮಬುದ್ಧರ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತಂದು ಅಂಬೇಡ್ಕರ್ ಭವನದಲ್ಲಿ ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ್ ಹರನಾಳ್ ಅವರು ಉದ್ಘಾಟಿಸಿದರು

Share This Article
Leave a Comment