ನಾಳೆ ಕಮಲಾಪುರದಲ್ಲಿ ಬಬೂಜಿ ಜನ್ಮದಿನದ ಸಮತಾ ಬೃಹತ್ ಸಮಾವೇಶ.

 

ಕಲಬುರ್ಗಿ, ಮೇ.೧೫- ಜಿಲ್ಲೆಯ ಕಮಲಾಪುರದ ಆಕೃತಿ ಕಲ್ಯಾಣ ಮಂಟಪದಲ್ಲಿ ಇದೇ ಮೇ ೧೭ರಂದು ಹಸಿರುಕ್ರಾಂತಿ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ದಿ. ಬಾಬು ಜಗಜೀವನರಾಮ್ ಅವರ ೧೧೯ನೇ ಜನ್ಮದಿನದ ನಿಮಿತ್ಯ ಬೆಳಿಗ್ಗೆ ೧೧ ಗಂಟೆಗೆ ಸಮತಾ ದಿವಸದ ಬೃಹತ್ ಬಹಿರಂಗ ಸಭೆ ಏರ್ಪರಿಸಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಅನೀಲ್ ಬೆಳಕೇರಿ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಹಿರಿಯರಾದ ದಿ. ಜಿ. ರಾಮಕೃಷ್ಣ ಅವರ ವೇದಿಕೆಯಡಿ ಕಾರ್ಯಕ್ರಮ ಜರುಗಲಿದೆ. ದಿವ್ಯ ಸಾನಿಧ್ಯವನ್ನು ಹವಾ ಮಲ್ಲಿನಾಥ ಮಹಾರಾಜರು, ನಾಗೇಶ್ ಮುತ್ಯಾ ಅವರು ವಹಿಸುವರು. ಸಚಿವರಾದ ಕೆ.ಎಚ್. ಮನಿಯಪ್ಪ, ಆರ್.ಬಿ. ತಿಮ್ಮಾಪುರ, ಡಾ. ಶರಣಪ್ರಕಾಶ್ ಪಾಟೀಲ್, ಸಂಸದ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ್, ಮಾಜಿ ಸಚಿವರಾದ ಹೆಚ್. ಆಂಜನೇಯ್ ಅವರು ಆಗಮಿಸುವರು ಎಂದರು.

ಉದ್ಘಾಟನೆಯನ್ನು ಶಾಸಕ ಬಸವರಾಜ್ ಮತ್ತಿಮೂಡ್ ಅವರು ನರ‍್ವೇರಿಸುವರು. ನೇತೃತ್ವವನ್ನು ಕೆಪಿಸಿಸಿ ಸದಸ್ಯ ವಿಜಯಕುಮಾರ್ ಜಿ. ರಾಮಕೃಷ್ಣ ಅವರು ವಹಸಿವರು. ಜಿಲ್ಲೆಯ ಮಾದಿಗ ಸಮಾಜದ ಮುಖಂಡರು, ಎಲ್ಲ ವಿಧಾನಸಭಾ ಕ್ಷೇತ್ರದ ಶಾಸಕರು, ಬುದ್ದಿಜೀವಿಗಳು ಹಾಗೂ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರು ಕೋರಿದರು. ಸುದ್ದಿಗೋಷ್ಟಿಯಲ್ಲಿ ಗುಂಡಪ್ಪಾ ಶಿರಡೋಣ, ಅರುಣ್ ಧಮ್ಮೂರಕರ್, ಅಶೋಕ್ ಸಿಂಗೆ, ಮಂಜುನಾಥ ನಾಲವಾರಕರ್, ಅರುಣ ಧಮ್ಮೂರಕರ್,ಅಶೋಕ್ ಸಿಂಗೆ, ಶಿವರಾಜ್ ಮೂಖ, ನಾಗೇಂದ್ರಪ್ಪ ಸೊಂತ್, ನೂಲಿ ಚನ್ನಯ್ಯ, ಕಂಬಳೆ ಮುನ್ನಡಗ, ಮಂಜುನಾಥ ಲೆಂಗಟಿ, ಅಮೃತ್ ಸಾಗರ್, ರಾಜು ಭುಲಯಾರ್ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment