ಬಿ.ಆರ್. ಪಾಟೀಲರಿಗೆ ಸಚಿವ ಸ್ಥಾನ ಸಿಕ್ಕರೆ ಕ್ರಾಂತಿಕಾರಕ ಅಭಿವೃದ್ಧಿ: ರಾಜಶೇಖರ್ ಪಾಟೀಲ್

 

ಕಲಬುರ್ಗಿ, ಜೂ.೬- ಜಿಲ್ಲೆಯ ಆಳಂದ ತಾಲ್ಲೂಕಿನ ಶಾಸಕ ಬಿ.ಆರ್. ಪಾಟೀಲರಿಗೆ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದ ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ನೇಮಿಸಿದರೆ ಜಿಲ್ಲೆ ಮತ್ತು ರಾಜ್ಯದಲ್ಲಿ ಅಭಿವೃದ್ಧಿಗೆ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವೆಂದು ಜಿಲ್ಲಾ ಕಾಂಗ್ರೆಸ್ ಸೇವಾದಳ ಘಟಕದ ಕಾರ್ಯದರ್ಶಿ ರಾಜಶೇಖರ್ ಪಾಟೀಲ್ ಹೆಬಳಿ ಅವರು ಆಶಾಭಾವ ವ್ಯಕ್ತಪಡಿಸಿದ್ದಾರೆ.

ಕಳೆದ ಐದು ದಶಕಗಳಿಂದ ಸಕ್ರೀಯವಾಗಿ ರಾಜಕೀಯ ಕ್ಷೇತ್ರದಲ್ಲಿ ತಮ್ಮದೆ ದಿಟ್ಟ ನಿರ್ಧಾರದಿಂದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ರಂಗದಲ್ಲಿ ಛಾಪು ಮೂಡಿಸಿ ಅಹಿಂದ ಸಂಘಟನೆ ಚಳುವಳಿಗೆ ಪುಷ್ಠಿಕರಿಸಿ, ರೈತ ಹೋರಾಟ, ಪರಿಸರ ಹೋರಾಟ, ಕಾರ್ಮಿಕ ಚಳುವಳಿ ಮುಖ್ಯವಾಗಿ ರೈತರಿಗಾಗಿ ಆಳಂದ ತಾಲ್ಲೂಕಿನಲ್ಲಿ ಶಿರಪೂರ ಮಾದರಿಯ ನೀರಾವರಿ ಯೋಜನೆಯನ್ನು ರಾಜ್ಯದಲ್ಲಿಯೇ ಪ್ರಥಮವಾಗಿ ಕೈಗೆತ್ತಿಕೊಂಡು ರೈತಪರ ಕಾಳಜಿಯುಳ್ಳ ಬಿ.ಆರ್. ಪಾಟೀಲರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ದುರದೃಷ್ಟ ಸಂಗತಿಯೆAದರೆ ಇದುವರೆಗೆ ಆಳಂದ ಕ್ಷೇತ್ರದಿಂದ ಸುಮಾರು ೧೭ ಜನ ಶಾಸಕರಾಗಿ ಆಯ್ಕೆಯಾಗಿದ್ದರು, ಯಾರಿಗೂ ಸಚಿವ ಸ್ಥಾನ ಲಭಿಸಿಲ್ಲ. ಬಿ.ಆರ್. ಪಾಟೀಲರು ಪ್ರಗತಿಪರ ಚಿಂತಕರಾಗಿ, ರಾಜಕೀಯದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡರು. ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ, ಸಿದ್ದರಾಮಯ್ಯರ ಸರ್ಕಾರದಲ್ಲಿ ಮುಖ್ಯಮಂತ್ರಿಯವರ ಸಲಹೆಗಾರರಾಗಿ, ನಂತರ ಕರ್ನಾಟಕ ಸರ್ಕಾರದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಮಹತ್ವದ ಹುದ್ದೆ ಅಲಂಕರಿಸಿದರು. ಆದರೂ ಮಂತ್ರಿಸ್ಥಾನದ ಭಾಗ್ಯದಿಂದ ವಂಚಿತರಾಗಿದ್ದು, ಕ್ಷೇತ್ರದ ಮತದಾರರ ಮನಸ್ಸಿಗೆ ನೋವುಂಟಾಗಿರುವುದು ಸುಳ್ಳಲ್ಲ ಎಂದು ಅವರು ಬೇಸರ ಹೊರಹಾಕಿದ್ದಾರೆ.

ರಾಷ್ಟ ್ರಮಟ್ಟದಲ್ಲಿ ಮತಗಳ್ಳತನದ ಬಗ್ಗೆ ರಾಹುಲ್‌ಗಾಂಧಿಯವರ ಹೋರಾಟ ಚುರುಕುಗೊಂಡಾಗ ಅದಕ್ಕೆ ಇಡೀ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಆಳಂದ ಕ್ಷೇತ್ರದಲ್ಲಿ ಮತಚೋರಿಯ ಬಗ್ಗೆ ಚಾರ್ಜಶೀಟ್ ಹಾಕಿದ ಏಕೈಕ ಶಾಸಕ ಬಿ.ಆರ್. ಪಾಟೀಲರೊಬ್ಬರೆ ಎಂದು ಹೇಳಲಾಗುತ್ತಿದೆ. ಈ ಹೊತ್ತಿನಲ್ಲಿ ಆಳಂದ ಕ್ಷೇತ್ರದಲ್ಲಾದ ವೋಟ್ ಚೋರಿ ಪ್ರಕರಣದ ಕುರಿತು ರಾಹುಲ್‌ಗಾಂಧಿಯವರು ಸಾಕ್ಷಿ ಸಮೇತ ಆಧಾರಗಳೊಂದಿಗೆ ಇಡೀ ರಾಷ್ಟ್ರದಲ್ಲಿ ಗಮನ ಸೆಳೆದರು. ಇಂಥ ಒಬ್ಬ ಧೀಮಂತ ಹೋರಾಟಗಾರ, ರಾಜಕೀಯ ಚಾಣಾಕ್ಷ ಬಿ.ಆರ್. ಪಾಟೀಲರಂಥ ನಾಯಕರು ಸರ್ಕಾರದ ಸಂಪುಟದಲ್ಲಿದ್ದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲು ಸಾಧ್ಯ. ಅದಕ್ಕಾಗಿ ಬಿ.ಆರ್. ಪಾಟೀಲರಿಗೆ ಅಧಿಕಾರ ಕೊಟ್ಟು ಬಳಸಿಕೊಂಡರೆ ಪಕ್ಷಕ್ಕೆ ಶಕ್ತಿ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಈ ಹಿಂದೆ ಸಚಿವರಾಗುವಂತ ಪಟ್ಟಿಯಲ್ಲಿ ಹೆಸರು ನಮೂದಾಗಿದ್ದರು. ಕೊನೆ ಕ್ಷಣದಲ್ಲಿ ಆಳಂದ ಕ್ಷೇತ್ರಕ್ಕೆ ಕೈ ತಪ್ಪುವಂತಾಯಿತು. ಆದರೆ ಈ ಬಾರಿ ನಮ್ಮ ಜಿಲ್ಲೆಯವರೆ ಆದ ಮಾನ್ಯ ಮಲ್ಲಿಕಾರ್ಜುಮನ್ ಖರ್ಗೆಯವರು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದರಿಂದ ಆಳಂದ ಕ್ಷೇತ್ರಕ್ಕೆ ಅಂಟಿಕೊAಡ ಅಪವಾದವನ್ನು ಅಳಿಸಿ ಹಾಕಲು ಶಾಸಕ ಬಿ.ಆರ್. ಪಾಟೀಲರಿಗೆ ಮಂತ್ರಿಸ್ಥಾನ ಲಭಿಸುವಂತೆ ಮನಸ್ಸು ಮಾಡಿದರೆ ಅದು ಖರ್ಗೆಯವರಿಗೆ ಆಳಂದ ತಾಲ್ಲೂಕಿನ ಮತದಾರರು ಎಂದು ಮರೆಯುವುದಿಲ್ಲವೆಂದು ಅವರು ತಿಳಿಸಿದ್ದಾರೆ.

ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದ ಮೊದಲನೆ ಹಂತದ ಪಟ್ಟಿಯಲ್ಲಿ ೧೩ ಸ್ಥಾನಗಳಲ್ಲಿ ಆಳಂದ ಕ್ಷೇತ್ರಕ್ಕೆ ಸ್ಥಾನ ಸಿಗದಿರುವುದು ಬೇಸರದ ಸಂಗತಿಯಾದರೂ ಎರಡನೇ ಸಚಿವ ಸಂಪುಟದ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ಆಳಂದ ಕ್ಷೇತ್ರದ ವಿಶಿಷ್ಟ ರಾಜಕಾರಣಿ ಶಾಸಕ ಬಿ.ಆರ್. ಪಾಟೀಲರನ್ನು ಬಾಕಿ ಇರುವ ೨೦ ಸ್ಥಾನಗಳಲ್ಲಿ ಸಚಿವರನ್ನಾಗಿ ಮಾಡಲು ಅವರು ಒತ್ತಾಯಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಆಳಂದ ಪ್ರಚಾರಕ್ಕೆ ಆಗಮಿಸಿದಾಗ ಸಿದ್ಧರಾಮಯ್ಯ ಅವರು ಬಿ.ಆರ್. ಪಾಟೀಲರನ್ನು ಶಾಸಕರಾಗಿ ಆಯ್ಕೆ ಮಾಡಿದರೆ ಸಚಿವರನ್ನಾಗಿ ಮಾಡುವುದಾಗಿ ಬಹಿರಂಗವಾಗಿ ಮಲ್ಲಿಕಾರ್ಜುನ್ ಖರ್ಗೆಯವರ ಸಮ್ಮುಖದಲ್ಲಿ ಹೇಳಿದರು. ಅದಕ್ಕಾಗಿ ಆ ಮಾತು ಈಡೇರಲು ಇಬ್ಬರು ನಾಯಕರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

Share This Article
Leave a Comment