
ಅಫಜಲಪುರ, ಏ.23: ತಾಲೂಕಿನ ಸಂಗಾಪುರ ಗ್ರಾಮದ ವಿದ್ಯಾರ್ಥಿ ಕು. ನಿಖಿಲ್ (ತಂದೆ: ನಿಂಗಪ್ಪ ಯಂಕಂಚಿ) ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 88.8% ಅಂಕಗಳನ್ನು ಪಡೆದು ಸ.ಪ್ರೌಢ ಶಾಲೆ ಹಸರಗುಂಡಗಿಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ.
ಆರ್ಥಿಕ ಸಂಕಷ್ಟಗಳ ನಡುವೆಯೇ ಕಠಿಣ ಪರಿಶ್ರಮದೊಂದಿಗೆ ಓದಿ ಸಾಧನೆ ಮಾಡಿರುವ ನಿಖಿಲ್, ತನ್ನ ಕುಟುಂಬದಷ್ಟೇ ಅಲ್ಲದೆ ಗ್ರಾಮಕ್ಕೂ ಕೀರ್ತಿ ತಂದಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ತಾಯಿ-ತಂದೆ ಹಾಗೂ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದ ಗುರುಗಳಾದ ಜಾವೀದ ಹುಂಡೇಕಾರ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗಿದೆ. ಗ್ರಾಮಸ್ಥರಾದ ರಾಜಕುಮಾರ ಯಂಕಂಚಿ, ಕಲ್ಯಾಣಿ ಯಂಕಂಚಿ, ಸಿದ್ದಾರಾಮ ಮಾಹುರ, ಮಲ್ಕಣಗೌಡ ಪಾಟೀಲ, ಲಕ್ಷ್ಮಣಗೌಡ ಪಾಟೀಲ ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿ, ಮುಂದಿನ ವಿದ್ಯಾಭ್ಯಾಸದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.