ಮಲ್ಲಬಾದ–ಚಿಂಚೋಳಿ ರಸ್ತೆ ಕಾಮಗಾರಿ ಪರಿಶೀಲನೆ, ರಸ್ತೆಯ ಗುಣಮಟ್ಟ ಕಾಪಾಡಲು ಅರುಣ್ ಪಾಟೀಲ್ ಸೂಚನೆ

ಅಫಜಲಪೂರ: ಮಲ್ಲಬಾದ–ಚಿಂಚೋಳಿ ರಸ್ತೆ ಸುಧಾರಣೆ ಕಾಮಗಾರಿ ಪರಿಶೀಲನೆ ನಡೆಸಿದ ಅರುಣ್ ಪಾಟೀಲ್, ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಹಾಗೂ ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಪೆಂಡಿಕ್ಸ್ 5054 ಅಡಿಯಲ್ಲಿ 3 ಕಿ.ಮೀ ವ್ಯಾಪ್ತಿಯಲ್ಲಿ, ಸುಮಾರು 3 ಕೋಟಿ ರೂ. ವೆಚ್ಚದಲ್ಲಿ (ಮಲ್ಲಬಾದ ಮುಖ್ಯರಸ್ತೆಯಿಂದ ಚಿಂಚೋಳಿ ಕ್ರಾಸ್‌ವರೆಗೆ) ಔರದ–ಸದಾಶಿವಘಡ ರಾಜ್ಯ ಹೆದ್ದಾರಿ–34ರ 203.77 ರಿಂದ 206.77 ಕಿ.ಮೀ ವರೆಗೆ ರಸ್ತೆ ಸುಧಾರಣೆ ಕಾಮಗಾರಿ ನಡೆಯುತ್ತಿದ್ದು, ಪ್ರಸ್ತುತ ವೇಗವಾಗಿ ಪ್ರಗತಿಯಲ್ಲಿ ಸಾಗುತ್ತಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅವರು ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.ಕಾ ಮಗಾರಿ ಪೂರ್ಣಗೊಂಡ ನಂತರ ಸಾರ್ವಜನಿಕರಿಗೆ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ. ರಸ್ತೆ ಅಗಲಿಕೆ, ಗುಣಮಟ್ಟದ ಡಾಂಬರೀಕರಣ, ಸಮರ್ಪಕ ನೀರು ಹರಿವು ವ್ಯವಸ್ಥೆ ಹಾಗೂ ಅಗತ್ಯ ಸುರಕ್ಷತಾ ಸೂಚನಾ ಫಲಕಗಳ ಅಳವಡಿಕೆ ಮೂಲಕ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ. ಹಾಗೂ ಇದರಿಂದ ಸ್ಥಳೀಯರ ದೈನಂದಿನ ಸಂಚಾರ, ವ್ಯಾಪಾರ ಚಟುವಟಿಕೆಗಳು ಹಾಗೂ ತುರ್ತು ಸೇವೆಗಳಿಗೂ ಹೆಚ್ಚಿನ ನೆರವು ದೊರೆಯಲಿದೆ ಎಂದು ತಿಳಿಸಿದರು.

Share This Article
Leave a Comment