ಈಜಲು ಹೋಗಿ ಕಲ್ಲಿನ ಖಣಿಯಲ್ಲಿ ಮುಳುಗಿ ಯುವಕ ಸಾವು..!

ಕಿರಣ್ ರೇವೂರ್ ( 24)

 

ಅಫಜಲಪುರ: ತಾಲ್ಲೂಕಿನ ಕರಜಗಿ ಗ್ರಾಮದ ಯುವಕ ಕಿರಣ ರೇವೂರ (24) ತನ್ನ ಸ್ನೇಹಿತರೊಂದಿಗೆ ಮಾಶಾಳ ಗ್ರಾಮದ ಹೊರವಲಯದಲ್ಲಿರುವ ಕಲ್ಲಿನ ಖಣಿಯಲ್ಲಿ ಭಾನುವಾರ ಮಧ್ಯಾಹ್ನ ಈಜಲು ತೆರಳಿದ್ದ ವೇಳೆ ನೀರಿನ ಅಡಿಯಲ್ಲಿ ಇರುವ ಕಲ್ಲಿನ ಪದರದಲ್ಲಿ ಸಿಲುಕಿ ದುರ್ಘಟನೆಯಲ್ಲಿ ಮೃತಪಟ್ಟಿದ್ದಾನೆ.

ಸಂಜೆ ವೇಳೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ನೀರಿನಿಂದ ಹೊರತೆಗೆದರು.

ಪಿಎಸ್‌ಐ ಶಾಂತಪ್ಪ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ವಿಶ್ವನಾಥ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Share This Article
Leave a Comment