ಸಂಗಮೇಶ್ವರ ನಗರದಲ್ಲಿ ಸಂಗೀತ ವೈಭವ ಸಾಂಸ್ಕೃತಿಕ ಕಾರ್ಯಕ್ರಮ

 

ಕಲಬುರ್ಗಿ, ಜೂ.೧೮- ಓಂ ಸಾಯಿ ಬುಡಗ ಜಂಗಮ ಜನಪದ ನಾಟ್ಯ ಕಲಾ ಸಂಘ (ರಿ )ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ನಗರದ ಸಂಗಮೇಶ್ವರ ಮಹಿಳಾ ಮಂಡಳ ಸಂಗಮೇಶ್ವರ ನಗರದಲ್ಲಿ ಸಂಗೀತ ವೈಭವ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರಂಭವು ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮವನ್ನು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ್ ಪಾಟೀಲ್ ಅವರು ಉದ್ಘಾಟಿಸಿದರು. ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಶಿವಶರಣಪ್ಪ ಕೋಬಾಳ್ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ವೈಶಾಲಿ ದೇಶಮುಖ ಅವರು ಜ್ಯೋತಿ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ ಎಂ.ಎಸ್. ಪಾಟೀಲ್, ಸಿದ್ರಾಮಪ್ಪ ಪಾಟೀಲ್, ರಾವುತಪ್ಪ ಕಟ್ಟಿಮನಿ, ಲಕ್ಷ್ಮಿಕಾಂತ್ ಕುಲಕರ್ಣಿ ಅವರು ಆಗಮಿಸಿದ್ದರು.

ಸಂಘದ ಅಧ್ಯಕ್ಷ ಶೇಖರ್ ಕಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಸುದಿಂದ್ರ ಚಾರಿ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ಮತ್ತು ಸಾಂಸ್ಕೃತಿಕ ಕಲೆಯ ಉತ್ತೇಜನದ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಸಂಗೀತ ವೈಭವ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದರಾದ ಪಂಡಿತ್ ರೇವಯ್ಯ ವಸ್ತ್ರದ್, ಡಾ. ಮಹೇಶಕುಮಾರ್ ಈ . ಬಡಿಗೇರ. ಡಾ. ರಮೇಶ್ ಕುಲಕರ್ಣಿ, ಶಂಕರ ಹೂಗಾರ್, ಗುರಶಾಂತಯ್ಯ ಸ್ಥಾವರಮಠ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಬಾಬುರಾವ್ ಕೋಬಾಳ್, ಶ್ರೀಮತಿ ಶ್ರುತಿ ವಿ.. ಸಗರ, ಶ್ರೀಮತಿ ಜ್ಯೋತಿ ಹಂಚಾಟೆ (ಪ್ರಿಯಾ), ಶ್ರೀಮತಿ ಹೆಚ್. ವಿ. ಸುಧೀಂದ್ರ ಅಹಂಕಾರಿ, ಶಿವಕುಮಾರ್ ಜಾಲಹಳ್ಳಿ, ಶ್ರೀಮತಿ ಪವಿತ್ರಾ ವಿಶ್ವನಾಥ ರಾಜನಾಳ್, ಕು. ಸ್ವಾತಿ ಬಿ. ಕೋಬಾಳ್, ವಿಶ್ವನಾಥ್ ಕಟ್ಟಿ. ಜ್ಯೋತಿ ಕಲಬುರಗಿ. ಲಕ್ಷ್ಮೀ ಕಲಬುರ್ಗಿ ಅವರು ಕಾರ್ಯಕ್ರಮದಲ್ಲಿ ಸೀತಾರ ಹಿಂದೂಸ್ತಾನಿ ಸಂಗೀತ. ಲಗು ಸಂಗೀತ, ಸುಗಮ ಸಂಗೀತ ವಚನ, ಸಂಗೀತ, ಜಾನಪದ ಗೀತೆ ಭಾವಗೀತೆ ಮತ್ತುದಾಸವಾಣಿ ಸಾಂಸ್ಕೃತಿಕ ಕಲಾ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಂಡವು.

ಜಯರಾವ್ ಕುಲಕರ್ಣಿ ಜಯತೀರ್ಥ ಆದ್ಯ. ಬದ್ರಿನಾಥ್ ಮುಡಬಿ ವಾದ್ಯಸಹಕಾರ ನೀಡಿದರು. ವಿವಿಧ ಕಲಾವಿದರ ಮನಮೋಹಕ ಗಾಯನ ಮತ್ತು ಕಲಾ ಪ್ರದರ್ಶನಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದವು.

Share This Article
Leave a Comment