ಜೂನ್ 13 ರಂದು ಕಾರ್ಮಿಕ ವರ್ಗದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಮಾರುತಿ ಮಾನಪಡೆ 71ನೇ ಜನ್ಮದಿನ ಆಚರಣೆ.

 

ಕಲಬುರಗಿ, ಜೂ.10: ಹೋರಾಟ ರತ್ನ, ರೈತ-ಕಾರ್ಮಿಕ ಮುಖಂಡ ಮಾರುತಿ ಮಾನಪಡೆ ಅವರ 71ನೇ ಜನ್ಮದಿನದ ಅಂಗವಾಗಿ ಜೂನ್ 13ರಂದು ಬೆಳಿಗ್ಗೆ 11 ಗಂಟೆಗೆ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ವಿಚಾರ ಸಂಕಿರಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹೋರಾಟ ರತ್ನ ಕಾಮ್ರೇಡ್ ಮಾರುತಿ ಮಾನಪಡೆ ಹಿತೈಷಿ ಅಭಿಮಾನಿಗಳ ಸೇವಾ ಸಂಘದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾರ್ಮಿಕ ವರ್ಗಕ್ಕೆ ಮಾರುತಿ ಮಾನಪಡೆ ಅವರ ಕೊಡುಗೆ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದ್ದು, ಕಾರ್ಮಿಕ ವರ್ಗದ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಕಾರ್ಯಕ್ರಮವನ್ನು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಸುನೀಲ ಮಾನಪಡೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜೆಡಿಎಸ್ ರಾಜ್ಯ ಮುಖಂಡ ನಾಸೀರ್ ಹುಸೇನ್ ಉಸ್ತಾದ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶರಣು ಮೋದಿ, ಕಾಂಗ್ರೆಸ್ ಮುಖಂಡ ಗುರು ಮಾಟೂರ, ಭಾರತ ರಾಷ್ಟ್ರೀಯ ಲೇಬರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದು ಜಾಧವ, ಆರ್‌ಡಿಪಿಆರ್ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ ಹರಸೂರ, ಕಾರ್ಯದರ್ಶಿಗಳ ಸಂಘದ ಜಿಲ್ಲಾಧ್ಯಕ್ಷ ಹಳ್ಳೇರಾಯ ದೇಸಾಯಿ, ಗ್ರಾ.ಪಂ. ಎಸ್‌ಡಿಎ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಕವಲಗಾ ಬಿ., ಕಾರ್ಯದರ್ಶಿಗಳ ಸಂಘದ ಜಿಲ್ಲಾಧ್ಯಕ್ಷ ರಾಚಯ್ಯ ಸ್ವಾಮಿ ಅಲ್ಲೂರ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಭಂಗೂರ, ಕಮಲಾಪುರ ಗ್ರಾಮ ಪಂಚಾಯತ್ ಸಂಘದ ಅಧ್ಯಕ್ಷ ರೇವಪ್ಪ ಓಕಳಿ, ಕರ್ನಾಟಕ ಪ್ರಾಂತ ಕೃಷಿ ಕಾರ್ಮಿಕರ ಸಂಘದ ಜಿಲ್ಲಾ ಸಹ ಸಂಚಾಲಕಿ ಶೇಕಮ್ಮ ಕುರಿ ಹಾಗೂ ಕಲಬುರಗಿ ನಗರ ನೀರು ಸರಬರಾಜು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ನಾರಾಯಣ ರಂಗದಾಳ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ರೈತರು, ಕಾರ್ಮಿಕರು, ದೇವದಾಸಿ ಮಹಿಳೆಯರು ಹಾಗೂ ತೊಗರಿ ಬೆಳೆಗಾರರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಹಿರಿಯ ರೈತ-ಕಾರ್ಮಿಕ ಮುಖಂಡರಾದ ಶಿವಶರಣಪ್ಪ ಬುದ್ಧಿವಂತ, ಭಾರತಿಬಾಯಿ ವಟೇರಾ, ಜಯಶ್ರೀ ಕಮಲಾಪುರ, ಗುಂಡಪ್ಪ ಎಂ. ರಾಮನ್, ಖಾಜಿಸಾಬ ಆರ್. ಮೂಲಗೆ, ಶಿವಾನಂದ ಕವಲಗಾ ಬಿ., ಯಂಕಪ್ಪ ಆರ್. ಚವ್ಹಾಣ ಹಾಗೂ ಪಂಡಿತ ಶಾಂತಪ್ಪ ಪಸಾರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಜನ್ಮದಿನಾಚರಣೆ ಸಮಿತಿ ಮುಖಂಡರಾದ ಬಾಬುರಾವ ದುತ್ತರಗಾಂವ, ದುರ್ಗಪ್ಪ ಚೆಂಗಟಾ, ನಾಗರಾಜ ಭಂಗೂರ, ಶಾಂತಪ್ಪ ಪಾಟೀಲ, ಜೈಭೀಮ ನಂದಿಕೂರ ಹಾಗೂ ಮೈಲಾರಿ ದೊಡ್ಡಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment